Top

ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ರಾಜೀನಾಮೆಗೆ ಪತಿಪಕ್ಷಗಳು ಒತ್ತಾಯ

ಪ್ರಧಾನಿ ಇಮ್ರಾನ್​ ಖಾನ್ ಅವರ​ ರಾಜೀನಾಮೆಗೆ ಆಗ್ರಹಿಸಿ ಹೋರಾಟದ ಬಗ್ಗೆ ಚರ್ಚಿಸಲು ಭಾನುವಾರ ನಡೆದ ಸಭೆಯಲ್ಲಿ 26 ಅಂಶಗಳನ್ನು ಒಳಗೊಂಡ ಜಂಟಿ ನಿರ್ಣಯ ಕೈಗೊಳ್ಳಲಾಗಿದೆ.

ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ರಾಜೀನಾಮೆಗೆ ಪತಿಪಕ್ಷಗಳು ಒತ್ತಾಯ
X

ಮೌಲಾನಾ ಫಾಜಿಲ್ ಉರ್ ರೆಹಮಾನ್ (ಮಧ್ಯೆ) ಮತ್ತು ಪಾಕಿಸ್ತಾನದ ವಿರೋಧ ಪಕ್ಷಗಳ ಇತರೆ ನಾಯಕರು ಚಿತ್ರದಲ್ಲಿ ಇದ್ದಾರೆ.

ಇಸ್ಲಾಮಾಬಾದ್: ಪ್ರಧಾನಿ ಸ್ಥಾನಕ್ಕೆ ಇಮ್ರಾನ್ ಖಾನ್ ಅವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಪಾಕಿಸ್ತಾನದ ವಿರೋಧ ಪಕ್ಷಗಳು ಒತ್ತಾಯ ಮಾಡಿವೆ. ಅಷ್ಟೇಅಲ್ಲದೇ, ಈ ಬಗ್ಗೆ ದೇಶವ್ಯಾಪಿ ಪ್ರತಿಭಟನೆ ನಡೆಸಲು ಒಟ್ಟಾಗಿ ಪಾಕಿಸ್ತಾನ್ ಡೆಮಾಕ್ರಟಿಕ್ ಮೂವ್ ಮೆಂಟ್ (ಪಿಡಿಎಂ) ಮೈತ್ರಿಕೂಟವನ್ನು ರಚನೆ ಮಾಡಿವೆ.

ಪ್ರಧಾನಿ ಇಮ್ರಾನ್​ ಖಾನ್ ಅವರ​ ರಾಜೀನಾಮೆಗೆ ಆಗ್ರಹಿಸಿ ಹೋರಾಟದ ಬಗ್ಗೆ ಚರ್ಚಿಸಲು ಭಾನುವಾರ ನಡೆದ ಸಭೆಯಲ್ಲಿ 26 ಅಂಶಗಳನ್ನು ಒಳಗೊಂಡ ಜಂಟಿ ನಿರ್ಣಯ ಕೈಗೊಳ್ಳಲಾಗಿದ್ದು, ಪಾಕಿಸ್ತಾನ ಫೀಪಲ್ಸ್ ಪಾರ್ಟಿ (ಪಿಪಿಪಿ), ಪಾಕಿಸ್ತಾನ್ ಮುಸ್ಲಿಂ ಲೀಗ್ -ನವಾಜ್ (ಪಿಎಂಎಲ್-ಎನ್), ಜಮಾಯಿತ್ ಉಲೆಮಾ ಇ ಇಸ್ಲಾಂ ಫಾಜಿಲ್ (ಜೆಯುಐ-ಎಫ್) ಹಾಗೂ ಇತರೆ ಪಕ್ಷಗಳು ಸಭೆಯಲ್ಲಿ ಭಾಗಿಯಾಗಿದ್ದವು.

ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜೆಯುಐ-ಎಫ್ ಮುಖ್ಯಸ್ಥ ಮೌಲಾನಾ ಫಾಜಿಲ್ ಉರ್ ರೆಹಮಾನ್ ಅವರು ಈ ನಿರ್ಣಯವನ್ನು ಓದಿದರು. ಅಕ್ಟೋಬರ್ ತಿಂಗಳಿನಿಂದ ಆಡಳಿತರೂಢ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಸರ್ಕಾರದ ವಿರುದ್ಧ ಜನಾಂದೋಲನವು ಆರಂಭವಾಗಲಿದೆ ಎಂದಿದ್ದಾರೆ.

ನಿರ್ಣಯದ ಅನುಸಾರ, ಹಂತ, ಹಂತವಾಗಿ ಪ್ರತಿಭಟನೆ ಆರಂಭವಾಗಲಿದೆ. ಮೊದಲ ಹಂತದಲ್ಲಿ 4 ಪ್ರಾಂತ್ಯಗಳಲ್ಲಿ ಜಾಥಾ, ಎರಡನೇ ಹಂತದಲ್ಲಿ (ಡಿಸೆಂಬರ್) ದೇಶದಾದ್ಯಂತ ಪ್ರತಿಭಟನಾ ಸಭೆ ನಡೆಯಲಿವೆ. ಅಂತಿಮವಾಗಿ ಜನವರಿ ತಿಂಗಳಲ್ಲಿ ಇಸ್ಲಾಮಾಬಾದ್​​ಗೆ ಜಾಥಾ ಹೊರಡಲಿದ್ದು, ಚಳವಳಿಯನ್ನು ತೀವ್ರಗೊಳಿಸಲಾಗುತ್ತದೆ.

ಮತ್ತೆ ಚುನಾವಣೆ ನಡೆಸಬೇಕು. ಮುಕ್ತ ಮತ್ತು ನ್ಯಾಯಸಮ್ಮತವಾದ ಅಗತ್ಯ ಸುಧಾರಣಾ ಕ್ರಮಗಳ ಜಾರಿ ಆಗಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿವೆ.


Next Story

RELATED STORIES