ಟ್ರೋಲಿಗರಿಗೆ ಟಾಂಗ್ ಕೊಟ್ಟ ಮಿಯಾ ಖಲೀಫಾ
ಮಿಯಾ ಖಲೀಫಾ ಪ್ರಜ್ಞೆಗೆ ಮರಳಿದ್ದಾರೆ’ ಎಂಬ ಬರಹವಿದ್ದ ಪೋಸ್ಟರ್ಗಳನ್ನು ಹಿಡಿದ ತಂಡವೊಂದು ಖಲೀಫಾ ವಿರುದ್ಧ ಪ್ರತಿಭಟನೆ ನಡೆಸಿತ್ತು

ನವದೆಹಲಿ: ಕೃಷಿ ಕಾಯ್ದೆಗಳ ವಿರುದ್ಧ ಹೋರಾಡುತ್ತಿರುವ ರೈತರ ಬೆಂಬಲವಾಗಿಯೇ ಇದ್ದೇನೆ ಎಂದು ಮಾಜಿ ನೀಲಿ ಚಿತ್ರ ತಾರೆ ಮಿಯಾ ಖಲೀಫಾ ಅವರು ಶುಕ್ರವಾರ ಮತ್ತೊಮ್ಮೆ ಟ್ವಿಟ್ ಮಾಡಿ ಟೀಕೆಕಾರರಿಗೆ ಟಾಂಗ್ ಕೊಟ್ಟಿದ್ದಾರೆ.
ದೆಹಲಿಯ ಗಡಿಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ಪರವಾಗಿ ಮೂರು ದಿನಗಳ ಹಿಂದೆ ಟ್ವಿಟ್ ಮಾಡಿದ್ದ ಮಿಯಾ ಖಲೀಫಾ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಮಾಡಲಾಗಿತ್ತು.
'ಮಿಯಾ ಖಲೀಫಾ ಪ್ರಜ್ಞೆಗೆ ಮರಳಿದ್ದಾರೆ' ಎಂಬ ಬರಹವಿದ್ದ ಪೋಸ್ಟರ್ಗಳನ್ನು ಹಿಡಿದ ತಂಡವೊಂದು ಖಲೀಫಾ ವಿರುದ್ಧ ಪ್ರತಿಭಟನೆ ನಡೆಸಿತ್ತು. ಆ ಚಿತ್ರಗಳು ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗಿದ್ದವು.
ಸದ್ಯ ವೈರಲ್ ಆಗಿರುವ ಚಿತ್ರಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಖಲೀಫಾ ಅವರು, 'ಹೌದು, ನಾನು ಪ್ರಜ್ಞೆಗೆ ಮರಳಿದ್ದೇನೆ. ಅಗತ್ಯವಿಲ್ಲದಿದ್ದರೂ ನಿಮ್ಮ ಕಾಳಜಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಈ ಕ್ಷಣಕ್ಕೂ ನಾನು ರೈತರ ಪರವಾಗಿಯೇ ಇದ್ದೇನೆ' ಎಂದಿದ್ದಾರೆ.
Confirming I have in fact regained consciousness, and would like to thank you for your concern, albeit unnecessary. Still standing with the farmers, though ♥️ pic.twitter.com/ttZnYeVLRP
— Mia K. (@miakhalifa) February 4, 2021