ಡೋನಾಲ್ಡ್ ಟ್ರಂಪ್ ಶ್ವೇತಭವನದಿಂದ ನಿರ್ಗಮಿಸುವ ಮುನ್ನ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದರು - ಸಲಹೆಗಾರ

ಅಮೆರಿಕ: ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಜನವರಿ ತಿಂಗಳಲ್ಲಿಯೇ ಕೋವಿಡ್ 19 ಲಸಿಕೆ ಹಾಕಿಸಿಕೊಂಡಿದ್ದರು ಎಂದು ಟ್ರಂಪ್ ಸಲಹಾಗಾರರೊಬ್ಬರು ಸೋಮವಾರ ಮಾಹಿತಿ ಬಹಿರಂಗಪಡಿಸಿದ್ದಾರೆ.
ಅಧ್ಯಕ್ಷ ಟ್ರಂಪ್ ಮತ್ತು ಪ್ರಥಮ ಮಹಿಳೆ (ಮೆಲಾನಿಯಾ) ಶ್ವೇತ ಭವನದಲ್ಲಿ (ವೈಟ್ಹೌಸ್) ಜನವರಿಯಲ್ಲಿ ಲಸಿಕೆ ಹಾಕಿಸಿಕೊಂಡಿದ್ದರು ಎಂದಿದ್ದಾರೆ.
ಜನವರಿ 20ರಂದು ಜೋ ಬೈಡನ್ ಅಮೆರಿಕ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡರು ಅದಕ್ಕೂ ಮುನ್ನ ಡಿಸೆಂಬರ್ 21ರಂದು ಅವರು ಸಾರ್ವಜನಿಕವಾಗಿ ಕೋವಿಡ್-19 ಲಸಿಕೆ ಹಾಕಿಸಿಕೊಂಡಿದ್ದರು ಆದರೆ ಟ್ರಂಪ್ ಅವರು ಲಸಿಕೆ ಹಾಕಿಸಿಕೊಂಡಿರುವ ವಿಷಯದ ಬಗ್ಗೆ ಎಲ್ಲೂ ಕೂಡ ಈ ಹಿಂದೆ ಬಹಿರಂಗವಾಗಿರಲಿಲ್ಲ.
ಶ್ವೇತ ಭವನದಿಂದ ಹೊರನಡೆದ ಬಳಿಕ ಮೊದಲ ಬಾರಿಗೆ ಭಾನುವಾರ ಸಾರ್ವಜನಿಕವಾಗಿ ಕಾಣಿಸಿಕೊಂಡು ಮಾತನಾಡಿದ ಟ್ರಂಪ್ ಅವರು, ಅಮೆರಿಕದಲ್ಲಿ 5 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸಾವಿನ ಲೋಕಕ್ಕೆ ದೂಡಿರುವ ಕೊರೊನಾ ವಿರುದ್ಧ ಹೋರಾಟಕ್ಕೆ ಪ್ರತಿಯೊಬ್ಬ ಪ್ರಜೆಯೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಜಾಗೃತಿಯ ಕರೆ ನೀಡಿದರು.