Top

ವಿಶ್ವಸಂಸ್ಥೆಯಲ್ಲಿ ಪಾಕ್​ ಪ್ರಧಾನಿ ಇಮ್ರಾನ್​ ಖಾನ್ ಭಾಷಣ ಶುರುವಾಗುತ್ತಿರುವಾಗಲೇ ಭಾರತ ಸಭಾತ್ಯಾಗ

ಇಮ್ರಾನ್​ ಖಾನ್​ ಅವರು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವೈಯಕ್ತಿಕ ನಿಂದನೆ ಮಾಡಿದ್ದಲ್ಲದೆ, ಜಮ್ಮು-ಕಾಶ್ಮೀರ ವಿಷಯನ್ನು ಪ್ರಸ್ತಾಪಿಸಿದ್ದರು.

ವಿಶ್ವಸಂಸ್ಥೆಯಲ್ಲಿ ಪಾಕ್​ ಪ್ರಧಾನಿ ಇಮ್ರಾನ್​ ಖಾನ್ ಭಾಷಣ ಶುರುವಾಗುತ್ತಿರುವಾಗಲೇ ಭಾರತ ಸಭಾತ್ಯಾಗ
X

ಭಾರತದ ಪರ್ಮನೆಂಟ್ ಮಿಷನ್​ನ ಕಾರ್ಯದರ್ಶಿ ಮಿಜಿಟೊ ವಿನಿಟೊ 

ನ್ಯೂಯಾರ್ಕ್‌: ವಿಶ್ವಸಂಸ್ಥೆಯ 75ನೇ ಮಹಾ ಅಧಿವೇಶನದ ಉದ್ದೇಶಿಸಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಾಷಣ ಶುರು ಮಾಡುತ್ತಿರುವಾಗಲೇ ಭಾರತದ ಪ್ರತಿನಿಧಿ ಸಭೆಯಿಂದ ಹೊರ ನಡೆದಿದ್ದಾರೆ.

ಇಮ್ರಾನ್ ಅವರು ಭಾಷಣ ಶುರುಮಾಡುತ್ತಿರುವಾಗಲೇ ಭಾರತದ ಪರ್ಮನೆಂಟ್ ಮಿಷನ್​ನ ಕಾರ್ಯದರ್ಶಿ ಮಿಜಿಟೊ ವಿನಿಟೊ ಸಭಾತ್ಯಾಗ ಮಾಡಿದರು. ಅವರು ಸಭೆಯಿಂದ ಹೊರ ನಡೆಯುತ್ತಿರುವ ವಿಡಿಯೊವನ್ನು ಎಎನ್‌ಐ ಟ್ವಿಟ್​​ ಮಾಡಿದೆ.

ಶುಕ್ರವಾರ ಅಧಿವೇಶನ್ನುದ್ದೇಶಿಸಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಇಮ್ರಾನ್​ ಖಾನ್​ ಅವರು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವೈಯಕ್ತಿಕ ನಿಂದನೆ ಮಾಡಿದ್ದಲ್ಲದೆ, ಜಮ್ಮು-ಕಾಶ್ಮೀರ ವಿಷಯನ್ನು ಪ್ರಸ್ತಾಪಿಸಿದ್ದರು.

Next Story

RELATED STORIES