ಕೆಲವೇ ವಾರದಲ್ಲಿ ರಷ್ಯಾ ಕೋವಿಡ್ ಲಸಿಕೆ 'ಸ್ಪುಟ್ನಿಕ್ ವಿ'ಗೆ ಭಾರತ ಅನುಮೋದನೆ ಸಾಧ್ಯತೆ
ಸ್ಪುಟ್ನಿಕ್ ವಿ ಲಸಿಕೆಯ ಮಾನವ ಪ್ರಯೋಗಗಳು ದೇಶದಲ್ಲಿ ನಡೆಯುತ್ತಿವೆ.
X
Admin 216 Feb 2021 5:52 AM GMT
ಮಾಸ್ಕೊ: ರಷ್ಯಾದ ಕೋವಿಡ್ ಲಸಿಕೆ ಸ್ಪುಟ್ನಿಕ್ ವಿ (Sputnik V)ಗೆ ಇನ್ನೂ ಕೆಲವೇ ವಾರಗಳಲ್ಲಿ ಭಾರತದಲ್ಲಿ ಅನುಮೋದನೆ ದೊರೆಯುವ ಸಾಧ್ಯತೆ ಇದೆ ಎಂದು ಅಲ್ಲಿನ ಭಾರತೀಯ ರಾಯಭಾರಿ ಹೇಳಿಕೆ ಉಲ್ಲೇಖಿಸಿ ಆರ್ಐಎ ಸುದ್ದಿಸಂಸ್ಥೆ ವರದಿ ಮಾಡಿದೆ.
ಸ್ಪುಟ್ನಿಕ್ ವಿ ಕೋವಿಡ್ 19 ಲಸಿಕೆಯು ಶೇ 91.6 ಪರಿಣಾಮಕಾರಿಯಾಗಿದೆ ಎಂದು ದಿ ಲ್ಯಾನ್ಸೆಟ್ ಇಂಟರ್ ನ್ಯಾಷನಲ್ ಮೆಡಿಕಲ್ ನಿಯತಕಾಲಿಕೆ ಪತ್ರಿಕೆಯಲ್ಲಿ ಇತ್ತೀಚೆಗೆ ಹೇಳಲಾಗಿತ್ತು. ಲಸಿಕೆಯ ಮೂರನೇ ಹಂತದ ಪ್ರಯೋಗದ ಫಲಿತಾಂಶಗಳನ್ನು ವಿಶ್ಲೇಷಿಸಿ ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಸ್ಪುಟ್ನಿಕ್ ವಿ ಲಸಿಕೆಯ ಮಾನವ ಪ್ರಯೋಗಗಳು ದೇಶದಲ್ಲಿ ನಡೆಯುತ್ತಿವೆ. ರಷ್ಯಾದ ನೇರ ಹೂಡಿಕೆ ನಿಧಿ (ಆರ್ಡಿಐಎಫ್) ಬೆಂಬಲದೊಂದಿಗೆ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಲಿಮಿಟೆಡ್ ಪ್ರಯೋಗಕ್ಕೆ ಸಾಥ್ ನೀಡಿವೆ.
Next Story