Top

COVID 19 World Updates: ವಿಶ್ವಾದ್ಯಂತ 10 ಲಕ್ಷಕ್ಕೂ ಹೆಚ್ಚು ಮಂದಿ ಕೊರೊನಾಗೆ ಬಲಿ

ಕೋವಿಡ್​-19 ವೈರಸ್​ನಿಂದಾಗಿ ವಿಶ್ವಾದ್ಯಂತ 10 ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ತಿಳಿದುಬಂದಿದೆ.

COVID 19 World Updates: ವಿಶ್ವಾದ್ಯಂತ 10 ಲಕ್ಷಕ್ಕೂ ಹೆಚ್ಚು ಮಂದಿ ಕೊರೊನಾಗೆ ಬಲಿ
X

ನ್ಯೂಯಾರ್ಕ್​ : ಮಹಾಮಾರಿ ಕೋವಿಡ್​-19 ವೈರಸ್​ನಿಂದಾಗಿ ವಿಶ್ವಾದ್ಯಂತ 10 ಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ತಿಳಿದುಬಂದಿದೆ.

ನಿನ್ನೆಯ ಹೊತ್ತಿಗೆ ಕೊರೊನಾ ವಿಶ್ವಾದ್ಯಂತ 10 ಲಕ್ಷದ 009 ಮಂದಿ ಬಲಿಯಾಗಿದ್ದು 33 ಲಕ್ಷದ 018 ಸಾವಿರದ 877 ಮಂದಿಗೆ ಸೋಂಕು ತಗಲಿದೆ. ಅಮೆರಿಕಾದಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ನಂತರದ ಸ್ಥಾನಗಳಲ್ಲಿ ಬ್ರೆಜಿಲ್, ಭಾರತ, ಮೆಕ್ಸಿಕೊ ಮತ್ತು ಬ್ರಿಟನ್ ದೇಶಗಳಿವೆ.

ಕೊರೊನಾ ವೈರಸ್ ಕಾರಣದಿಂದ ಇನ್ನೂ ಕೆಲವು ಲಾಕ್​ಡೌನ್ ಸ್ಥಿತಿ-ಗತಿ ಹಾಗೆಯೇ ಮುಂದುವರಿದಿದ್ದು, ಕ್ರೀಡೆ, ಮನರಂಜನೆ, ಅಂತಾರಾಷ್ಟ್ರೀಯ ಪ್ರವಾಸ, ಪ್ರೇಕ್ಷಕರು ಮತ್ತು ಪ್ರವಾಸಿಗರಿಗೆ ಇನ್ನೂ ಸಂಪೂರ್ಣವಾಗಿ ಸ್ವಾತಂತ್ರ ಸಿಕ್ಕಿಲ್ಲ. ಇತ್ತೀಚೆಗೆ ಬಹುತೇಕ ಲಾಕ್​ಡೌನ್ ಸಡಿಲಿಕೆ ಆಗಿರುವುದರಿಂದ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ.

ಕೊರೊನಾ ವೈರಸ್ ಜಗತ್ತಿನ ಎಲ್ಲಾ ದೇಶಗಳ ಆರ್ಥಿಕತೆ ಪರಿಸ್ಥಿತಿ, ಸಾಮಾನ್ಯ ಜನಜೀವನ ಮೇಲೆ ಇನ್ನಿಲ್ಲದಂತಹ ಸಂಕಷ್ಟವನ್ನು ತಂದೊಡ್ಡಿದೆ. ಈ ವೈರಸ್​ನಿಂದಾಗಿ ಭಾರತ, ಬ್ರೆಜಿಲ್ ಮತ್ತು ಅಮೆರಿಕಾ ದೇಶಗಳು ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಅನುಭವಿಸುತ್ತಿವೆ

Next Story

RELATED STORIES