COVID 19 World Updates: ವಿಶ್ವದಲ್ಲಿ 2,54,38,749 ಸಕ್ರಿಯ ಪ್ರಕರಣಗಳಿವೆ.
ವಿಶ್ವದಾದ್ಯಂತ ಇದುವರೆಗೆ 10.82 ಕೋಟಿಗೂ ಹೆಚ್ಚು ಕೋವಿಡ್ ಪ್ರಕರಣಗಳು ಪತ್ತೆ

X
Admin 212 Feb 2021 10:50 AM GMT
ವಾಷಿಂಗ್ಟನ್: ವಿಶ್ವದಾದ್ಯಂತ ಇದುವರೆಗೆ 10.82 ಕೋಟಿಗೂ ಹೆಚ್ಚು ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಆ ಪೈಕಿ 23,78,759 ಮಂದಿ ಸೋಂಕಿತರು ಸಾವಿಗೀಡಾಗಿದ್ದಾರೆ. ಈವರೆಗೆ 8,03,27,049 ಮಂದಿ ಗುಣಮುಖರಾಗಿದ್ದಾರೆ.
ಸದ್ಯ ವಿಶ್ವದಲ್ಲಿ 2,54,38,749 ಸಕ್ರಿಯ ಪ್ರಕರಣಗಳಿವೆ.
ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ಅಮೆರಿಕದಲ್ಲಿ 95,84,499, ಫ್ರಾನ್ಸ್ನಲ್ಲಿ 30,87,129, ಬ್ರೆಜಿಲ್ನಲ್ಲಿ 8,36,208, ಇಟಲಿಯಲ್ಲಿ 4,05,019, ರಷ್ಯಾದಲ್ಲಿ 4,10,639 ಸಕ್ರಿಯ ಪ್ರಕರಣಗಳಿವೆ.
ಮೆಕ್ಸಿಕೊದಲ್ಲಿ ಕಳೆದ 24 ಗಂಟೆಗಳಲ್ಲಿ 10,677 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 1,474 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇದರೊಂದಿಗೆ ಅಲ್ಲಿ ಸೋಂಕಿತರ ಸಂಖ್ಯೆ 19,68,566ಕ್ಕೆ ಏರಿಕೆ ಆಗಿದೆ. ಆ ಪೈಕಿ 1,71,234 ಮಂದಿ ಸಾವಿಗೀಡಾಗಿದ್ದಾರೆ. ಈವರೆಗೆ 15,28,304 ಮಂದಿ ಸೋಂಕಿತರು ಗುಣಮುಖರಾಗಿದ್ದು, ಸದ್ಯ 2,69,028 ಸಕ್ರಿಯ ಪ್ರಕರಣಗಳಿವೆ.
Next Story