Top

COVID 19 World Updates: ವಿಶ್ವದಾದ್ಯಂತ ಈವರೆಗೆ ಒಟ್ಟು 9.81 ಕೋಟಿ ಜನರಿಗೆ ಕೋವಿಡ್‌-19 ಸೋಂಕು ದೃಢ

ಸೋಂಕು ಪ್ರಕರಣಗಳ ಸಂಖ್ಯೆ ಬ್ರೆಜಿಲ್‌ನಲ್ಲಿ 86.31 ಲಕ್ಷ, ಫ್ರಾನ್ಸ್‌ನಲ್ಲಿ 29.65 ಲಕ್ಷ, ರಷ್ಯಾದಲ್ಲಿ 36.55 ಲಕ್ಷ, ಸ್ಪೇನ್‌ನಲ್ಲಿ 24.12 ಲಕ್ಷಕ್ಕೆ ಏರಿಯಾಗಿವೆ.

COVID 19 World Updates: ವಿಶ್ವದಾದ್ಯಂತ ಈವರೆಗೆ ಒಟ್ಟು 9.81 ಕೋಟಿ ಜನರಿಗೆ ಕೋವಿಡ್‌-19 ಸೋಂಕು ದೃಢ
X

ವಾಷಿಂಗ್ಟನ್‌: ವಿಶ್ವದಾದ್ಯಂತ ಈವರೆಗೆ ಒಟ್ಟು 9.81 ಕೋಟಿ ಜನರಿಗೆ ಕೋವಿಡ್‌-19 ಸೋಂಕು ತಗುಲಿದೆ. ಇದರಲ್ಲಿ 7 ಕೋಟಿಗೂ ಅಧಿಕ ಸೋಂಕಿತರು ಗುಣಮುಖರಾಗಿದ್ದು, 21.02 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ವರ್ಲ್ಡೊ ಮೀಟರ್ ತನ್ನ ಅಂಕಿ-ಅಂಶದಲ್ಲಿ ಹೇಳಿದೆ.

ಪ್ರಪಂಚದಾದ್ಯಂತ ಇಂದು ಹೊಸದಾಗಿ 1,13,884 ಪ್ರಕರಣಗಳು ಬೆಳಕಿಗೆ ಬಂದಿದ್ದು, 3,886 ಜನರು ಪ್ರಾಣಕಳೆದುಕೊಂಡಿದ್ದಾರೆ. ಇದೇ ವೇಳೆ 70,575,225 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಒಟ್ಟಾರೆ 25,496,397 ಸಕ್ರಿಯ ಪ್ರಕರಣಗಳಿದ್ದು, ಇದರಲ್ಲಿ 1,11,240 ಜನರ ಸ್ಥಿತಿ ಗಂಭೀರವಾಗಿದೆ.

ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ಅಮೆರಿಕದಲ್ಲಿ ಇಂದು 29,321 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 530 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಈ ದೇಶದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 4,16,435ಕ್ಕೆ ಏರಿಕೆಯಾಗಿದೆ. ಅಮೆರಿಕದ ನಂತರದ ಸ್ಥಾನದಲ್ಲಿರುವ ಭಾರತದಲ್ಲಿ ಒಂದು ಕೋಟಿಗೂ ಅಧಿಕ ಪ್ರಕರಣಗಳು ವರದಿಯಾಗಿವೆ.

ಉಳಿದಂತೆ ಸೋಂಕು ಪ್ರಕರಣಗಳ ಸಂಖ್ಯೆ ಬ್ರೆಜಿಲ್‌ನಲ್ಲಿ 86.31 ಲಕ್ಷ, ಫ್ರಾನ್ಸ್‌ನಲ್ಲಿ 29.65 ಲಕ್ಷ, ರಷ್ಯಾದಲ್ಲಿ 36.55 ಲಕ್ಷ, ಸ್ಪೇನ್‌ನಲ್ಲಿ 24.12 ಲಕ್ಷಕ್ಕೆ ಏರಿಯಾಗಿವೆ.

Next Story

RELATED STORIES