Top

COVID 19 World Updates: ವಿಶ್ವದಾದ್ಯಂತ ಇದುವರೆಗೆ ಒಟ್ಟು 10.41 ಕೋಟಿ ಪ್ರಕರಣಗಳು ಪತ್ತೆ

ಬ್ರೆಜಿಲ್‌ನಲ್ಲಿ 80 ಲಕ್ಷ, ರಷ್ಯಾದಲ್ಲಿ 33 ಲಕ್ಷ, ಇಂಗ್ಲೆಂಡ್‌ನಲ್ಲಿ 29 ಲಕ್ಷ ಪ್ರಕರಣಗಳು ಬೆಳಕಿಗೆ ಬಂದಿವೆ

COVID 19 World Updates: ವಿಶ್ವದಾದ್ಯಂತ ಇದುವರೆಗೆ ಒಟ್ಟು 10.41 ಕೋಟಿ ಪ್ರಕರಣಗಳು ಪತ್ತೆ
X

ವಾಷಿಂಗ್ಟನ್‌: ಅಮೆರಿಕದಲ್ಲಿ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 2.9 ಲಕ್ಷಕ್ಕೂ ಹೆಚ್ಚು ಜನರಿಗೆ ಕೋವಿಡ್​ 19 ವೈರಸ್​ ಸೋಂಕು ತಗುಲಿದೆ. ಇದೇ ವೇಳೆ 3,676 ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ

ಜಾನ್‌ ಹಾಪ್‌ಕಿನ್ಸ್‌ ವಿವಿ ಮಾಹಿತಿ ಪ್ರಕಾರ; ಅತಿಹೆಚ್ಚು ಸೋಂಕು ಪ್ರಕರಣಗಳು ವರದಿ ಆಗಿರುವ ಅಮೆರಿಕದಲ್ಲಿ ಈವರೆಗೆ ಒಟ್ಟು 2.18 ಕೋಟಿ ಜನರಿಗೆ ಸೋಂಕು ತಗುಲಿದೆ. ಇದರಲ್ಲಿ 3.68 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ನಂತರದ ಸ್ಥಾನದಲ್ಲಿರುವ ಭಾರತದಲ್ಲಿ 1.04 ಕೋಟಿ ಪ್ರಕರಣಗಳು ವರದಿಯಾಗಿವೆ. 1 ಕೋಟಿಗೂ ಹೆಚ್ಚು ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. 1.50 ಲಕ್ಷ ಮಂದಿ ಮೃತಪಟ್ಟಿದ್ದಾರೆ.

ಬ್ರೆಜಿಲ್‌ನಲ್ಲಿ 80 ಲಕ್ಷ, ರಷ್ಯಾದಲ್ಲಿ 33 ಲಕ್ಷ, ಇಂಗ್ಲೆಂಡ್‌ನಲ್ಲಿ 29 ಲಕ್ಷ ಪ್ರಕರಣಗಳು ಬೆಳಕಿಗೆ ಬಂದಿವೆ.

ವಿಶ್ವದಾದ್ಯಂತ ಇದುವರೆಗೆ ಒಟ್ಟು 10.4ಟಿ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 4.9 ಕೋಟಿಗೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟಾರೆ ಸಾವಿನ ಪ್ರಮಾಣ 19 ಲಕ್ಷದ ಗಡಿ ದಾಟಿದೆ.

Next Story

RELATED STORIES