Top

ಕೊಲೆರಾಡೊ ಗುಂಡಿನ ದಾಳಿ ಪ್ರಕರಣ: 10 ಮಂದಿ ಸಾವು

ಈ ಘಟನೆಯಲ್ಲಿ ಕನಿಷ್ಠ 6 ಮಂದಿ ಶೂಟೌಟ್ ಪ್ರಕರಣದಲ್ಲಿ ಮೃತಪಟ್ಟಿರಬಹುದು ಎಂದು ಅಲ್ಲಿನ ಮಧ್ಯಮಗಳು ವರದಿ ಮಾಡಿವೆ.

ಕೊಲೆರಾಡೊ ಗುಂಡಿನ ದಾಳಿ ಪ್ರಕರಣ: 10 ಮಂದಿ ಸಾವು
X

ಅಮೆರಿಕ: ಕೊಲೆರಾಡೊದಲ್ಲಿ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿ ಪೊಲೀಸ್ ಅಧಿಕಾರಿಯನ್ನು ಒಳಗೊಂಡಂತೆ ಹಲವರನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೋಲ್ಡರ್‌ನ ಕಿಂಗ್ ಸೂಪರ್ಸ್ ಸ್ಟೋರ್‌ನಲ್ಲಿ ಈ ಘಟನೆ ನಡೆದಿದ್ದು, ಕೃತ್ಯದಲ್ಲಿ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಕಮಾಂಡರ್ ಕೆರ್ರಿ ಯಮಗುಚಿ ಹೇಳಿದ್ದಾರೆ.

ಈ ಘಟನೆಯಲ್ಲಿ ಹಲವರು ಮೃತಪಟ್ಟಿದ್ದಾರೆ. ನಮ್ಮ ತಂಡದ ಪೊಲೀಸ್ ಅಧಿಕಾರಿಯೂ ಸಹ ಸಾವನ್ನಪ್ಪಿದ್ದಾರೆ. ಒಟ್ಟು ಎಷ್ಟು ಜನರು ಮೃತಪಟ್ಟಿದ್ದಾರೆಂದು ಖಚಿತವಾಗಿಲ್ಲ, ಶಂಕಿತ ಕೂಡ ಗಾಯಗೊಂಡಿದ್ದು, ಆತನನ್ನು ಬಂಧಿಸಿದ್ದೇವೆ ಎಂದು ತಿಳಿಸಿದರು.

ಈ ಘಟನೆಯಲ್ಲಿ ಕನಿಷ್ಠ 6 ಮಂದಿ ಶೂಟೌಟ್ ಪ್ರಕರಣದಲ್ಲಿ ಮೃತಪಟ್ಟಿರಬಹುದು ಎಂದು ಅಲ್ಲಿನ ಮಧ್ಯಮಗಳು ವರದಿ ಮಾಡಿವೆ.

ಶೂಟೌಟ್ ಪ್ರಕರಣದ ಬಗ್ಗೆ ಕೊಲೆರಾಡೊ ಗವರ್ನರ್ ಜೇರ್ಡ್ ಪೊಲಿಸ್, ಬೋಲ್ಡರ್ ಮೇಯರ್ ಸ್ಯಾಮ್ ವೀವರ್ ಅಘಾತ ವ್ಯಕ್ತಪಡಿಸಿದ್ದು, ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

Next Story

RELATED STORIES