Top

ಹಡಗು ಮತ್ತು ದೋಣಿ ನಡುವೆ ಡಿಕ್ಕಿ 27 ಮಂದಿ ಸಾವು

ದೋಣಿಯಲ್ಲಿ 100ಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ.

ಹಡಗು ಮತ್ತು ದೋಣಿ ನಡುವೆ ಡಿಕ್ಕಿ 27 ಮಂದಿ ಸಾವು
X

ಬಾಂಗ್ಲಾದೇಶ: ಸರಕು ಸಾಗಣೆ ಹಡಗು ಹಾಗೂ ದೋಣಿಯ ಮಧ್ಯೆ ಡಿಕ್ಕಿ ಅವಘಡ ಸಂಭವಿಸಿದ್ದು, 27 ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆ ನಿನ್ನೆ(ರವಿವಾರ) ಸಂಜೆ ನಾರಾಯಣ್‌ಗಂಜ್ ಜಿಲ್ಲೆಯಲ್ಲಿ ನಡೆದಿದೆ.

ಇನ್ನು ದೋಣಿಯಲ್ಲಿ 100ಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ.

ರವಿವಾರ 5 ಶವಗಳನ್ನು ಪತ್ತೆಯಾಗಿತ್ತು. ಸೋಮವಾರದ ವೇಳೆಗೆ ಒಟ್ಟು 21 ಶವಗಳನ್ನು ಹೊರ ತೆಗೆಯಲಾಯಿತು. ನೌಕಾಪಡೆ, ಕರಾವಳಿ ಕಾವಲು ಪಡೆ ಮತ್ತು ಅಗ್ನಿಶಾಮಕ ಪಡೆ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ ಎಂದು ಢಾಕಾ ಟ್ರಿಬ್ಯೂನ್‌ ತನ್ನ ವರದಿಯಲ್ಲಿ ಹೇಳಿದೆ.

ಮುನ್ಶಿಗಂಜ್‌ನ ಸೈಯದ್‌ಪುರ ಕೊಯ್ಲಾ ಘಾಟ್‌ನ ಬಳಿ ಎಂಎಲ್‌ ಸಾಬಿತ್‌ ಅಲ್‌ ಹಸನ್‌ ಪ್ರಯಾಣಿಕರ ದೋಣಿ ಮತ್ತು ಎಸ್‌ಕೆಎಲ್‌ 3 ಸರಕು ಸಾಗಣೆ ಹಡಗಿನ ನಡುವೆ ಡಿಕ್ಕಿ ಸಂಭವಿಸಿದೆ. ಈ ಸಂದರ್ಭದಲ್ಲಿ ಪ್ರಯಾಣಿಕರ ದೋಣಿ ನೀರಿನಲ್ಲಿ ಮುಳುಗಿದೆ. ಆದರೆ, ಸರಕು ಸಾಗಣೆ ಹಡಗು ಅಲ್ಲಿಂದ ಪರಾರಿ ಆಗಿದೆ ಎಂದು ವರದಿಯಾಗಿದೆ.

ಈ ಸಂಬಂಧ ತನಿಖೆ ನಡೆಸಲು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ನೇತೃತ್ವದಲ್ಲಿ ತಂಡವನ್ನು ರೂಪಿಸಲಾಗಿದೆ ಎಂದು ನಾರಾಯಣ್‌ಗಂಜ್‌ನ ಉಪ ಆಯುಕ್ತ ಮುಸ್ತೇನ್‌ ಬಿಲ್ಹಾ ಅವರು ತಿಳಿಸಿದರು.

Next Story

RELATED STORIES