Top

ಚೀನಾ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್​​​ ಟ್ರಂಪ್​ ವಾಗ್ದಾಳಿ

ಕೋವಿಡ್19‌‌ ಹರಡುವುದಕ್ಕೂ ಮುಂಚೆ ದೇಶದ ಆರ್ಥಿಕ ಪ್ರಗತಿ ಉತ್ತಮವಾಗಿತ್ತು. ಈ ವೈರಸ್‌ ಹರಡಲು ಚೀನಾವೇ ಕಾರಣ. ಇದು ಕೊರೊನಾ ವೈರಸ್‌ ಅಲ್ಲ, ಚೀನಾ ವೈರಸ್‌.

ಚೀನಾ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್​​​ ಟ್ರಂಪ್​ ವಾಗ್ದಾಳಿ
X

ಇದು ಕೊರೊನಾ ವೈರಸ್‌ ಅಲ್ಲ, ಚೀನಾ ವೈರಸ್‌ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​​ ಡ್ರಂಪ್ ಹೇಳಿದ್ದಾರೆ. (ಚಿತ್ರ ಕೃಪೆ: ರಾಯಿಟರ್ಸ್)​​​

ಅಮೆರಿಕ, ವಾಷಿಂಗ್ಟನ್‌: ದೇಶಾದ್ಯಂತ 9.69 ಲಕ್ಷ ಮಂದಿ ಸಾವಿಗೆ ಕಾರಣವಾಗಿರುವ ಕೋವಿಡ್‌-19 ಅನ್ನು ಕೊರೊನಾ ವೈರಸ್​ ಅಲ್ಲ, ಚೀನಾ ವೈರಸ್‌ ಎಂದೇ ಕರೆಯಬೇಕು. ಕೊರೊನಾ ಎಂಬ ಶಬ್ಧವು ಇಟಲಿಯ ಸುಂದರವಾದ ಸ್ಥಳ ಹೆಸರಿನಂತೆ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​​​ ಟ್ರಂಪ್​ ಚೀನಾದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪೆನ್ಸಿಲ್ವೇನಿಯಾದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಕಲ್ಲಿ ಮಾತನಾಡಿದ ಅವರು, ನಾನು ಮತ್ತೆ ಅಮೆರಿಕದ ಅಧ್ಯಕ್ಷನಾಗಿ ಆಯ್ಕೆಯಾದರೆ, ಅಮೆರಿಕವನ್ನು ಉತ್ಪಾದನಾ ಕ್ಷೇತ್ರದಲ್ಲಿ ಮಹಾಶಕ್ತಿಯನ್ನಾಗಿ ಬೆಳೆಸುತ್ತೇನೆ. ಆ ಮೂಲಕ ಚೀನಾದ ಮೇಲೆ ನಮ್ಮ ದೇಶ ಅವಲಂಬಿತವಾಗುವ ಅಗತ್ಯವಿರುವುದಿಲ್ಲ ಎಂದು ಭರವಸೆಯ ಮಾತುಗಳನ್ನಾಡಿದರು.

ಮಹಾಮಾರಿ ಕೋವಿಡ್19‌‌ ಹರಡುವುದಕ್ಕೂ ಮುಂಚೆ ದೇಶದ ಆರ್ಥಿಕ ಪ್ರಗತಿ ಉತ್ತಮವಾಗಿತ್ತು. ಈ ವೈರಸ್‌ ಹರಡಲು ಚೀನಾವೇ ಕಾರಣ. ಇದು ಕೊರೊನಾ ವೈರಸ್‌ ಅಲ್ಲ, ಚೀನಾ ವೈರಸ್‌ ಎಂದು ಡೊನಾಲ್ಡ್​​ ಡ್ರಂಪ್​ ಅವರು ಕಿಡಿಕಾರಿದ್ದಾರೆ.

ನಾನು ಐತಿಹಾಸಿಕವಾಗಿ ಘೋಷಣೆ ಮಾಡುತ್ತೇನೆ ಚೀನಾ ವೈರಸ್ ವಿರುದ್ಧದ ನಮ್ಮ ಯುದ್ಧದಲ್ಲಿ ದೇಶದ ಅಸಂಖ್ಯಾತ ಜೀವಗಳನ್ನು ಉಳಿಸಿದಾಗ ನನಗೆ ಸಂತೋಷವಾಗುತ್ತದೆ ಎಂದು ಡೊನೊಲ್ಡ್​​ ಡ್ರಂಪ್​ ಆಗಸ್ಟ್​​​ನಲ್ಲಿ ನಡೆದ ರಿಪಬ್ಲಿಕನ್ ಪಾರ್ಟಿಯ ರಾಷ್ಟ್ರೀಯ ಸಮಾವೇಶದಲ್ಲಿ ಹೇಳಿದ್ದರು.

Next Story

RELATED STORIES