Top

ಅನಿವಾರ್ಯವಲ್ಲದ ರಾಜತಾಂತ್ರಿಕರು ನಿರ್ಗಮಿಸಿ - ಅಮೆರಿಕ ಆದೇಶ

ಫೆಬ್ರವರಿ 1 ರಿಂದ ನಡೆಯುತ್ತಿರುವ ಈ ಹಿಂಸಾಚಾರದಲ್ಲಿ ಇಲ್ಲಿವರೆಗೆ 520 ಮಂದಿ ಮಂದಿ ಮೃತಪಟ್ಟಿದ್ದಾರೆ

ಅನಿವಾರ್ಯವಲ್ಲದ ರಾಜತಾಂತ್ರಿಕರು ನಿರ್ಗಮಿಸಿ - ಅಮೆರಿಕ ಆದೇಶ
X

ವಾಷಿಂಗ್ಟನ್​: ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಆಡಳಿತದ ವಿರುದ್ಧದ ಪ್ರತಿಭಟನೆಗಳು ಮತ್ತು ದಿನೇ ದಿನೇ ಹೆಚ್ಚುತ್ತಿರುವ ಹಿಂಸಾಚಾರದ ಕಾರಣ ತುರ್ತು ಇಲ್ಲದ ರಾಜತಾಂತ್ರಿಕರು ಹೊರನಡೆಯುವಂತೆ ಅಮೆರಿಕ ಸರ್ಕಾರ ಬುಧವಾರ ಸೂಚನೆ ನೀಡಿದೆ.

ಈ ಹಿಂಸಾಚಾರಕ್ಕೆ ಜಾಗತಿಕ ಮಟ್ಟದಿಂದ ತೀವ್ರ ಖಂಡನೆ ವ್ಯಕ್ತವಾಗಿದ್ದು, ಹಿಂಸಾಚಾರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತುರ್ತು ಅಥವಾ ಅನಿವಾರ್ಯವಲ್ಲದ ಅಮೆರಿಕದ ಎಲ್ಲ ಸರ್ಕಾರಿ ನೌಕರರು ಮತ್ತು ಕುಟುಂಬದ ಸದಸ್ಯರು, ಮ್ಯಾನ್ಯಾರ್‌ನಿಂದ ನಿರ್ಗಮಿಸಿ ಎಂದು ಅಮೆರಿಕ ಸರ್ಕಾರ ಆದೇಶ ನೀಡಿದೆ.

ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಆಡಳಿತವನ್ನು ಕೊನೆಗೊಳಿಸುವಂತೆ ಹಾಗೂ ಚುನಾಯಿತ ಸರ್ಕಾರವನ್ನು ಪುನರ್ ಸ್ಥಾಪನೆಗಾಗಿ ಪ್ರತಿಭಟನೆ ನಡೆಸುತ್ತಿರುವ ಜನರ ಮೇಲೆ ಸೇನಾ ಪಡೆಗಳು ಹಿಂಸಾಚಾರ ನಡೆಸುತ್ತಿವೆ. ಫೆಬ್ರವರಿ 1 ರಿಂದ ನಡೆಯುತ್ತಿರುವ ಈ ಹಿಂಸಾಚಾರದಲ್ಲಿ ಇಲ್ಲಿವರೆಗೆ 520 ಮಂದಿ ಮಂದಿ ಮೃತಪಟ್ಟಿದ್ದಾರೆ.

Next Story

RELATED STORIES