Top

ರಾಘಣ್ಣನ ಆರೋಗ್ಯದ ಬಗ್ಗೆ ಪುನೀತ್​ ರಾಜ್​ಕುಮಾರ್ ಪ್ರತಿಕ್ರಿಯೆ

ರಾಘಣ್ಣನ ಆರೋಗ್ಯದ ಬಗ್ಗೆ ಪುನೀತ್​ ರಾಜ್​ಕುಮಾರ್ ಪ್ರತಿಕ್ರಿಯೆ

X

ಬೆಂಗಳೂರು: 'ರಾಘವೇಂದ್ರ ರಾಜ್​ಕುಮಾರ್ ಅವರು ಅರಾಮ್ ಆಗಿ ಇದ್ದಾರೆ' ಎಂದು ಕಿರಿಯ ತಮ್ಮ ನಟ ಪುನೀತ್​ ರಾಜ್​ ಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದ್ದಾರೆ.

ರಾಘವೇಂದ್ರ ರಾಜ್ ಕುಮಾರ್ ಆರೋಗ್ಯದಲ್ಲಿ ಏರು ಪೇರು ಹಿನ್ನೆಲೆ ನಿನ್ನೆ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ನಟ ಅಣ್ಣನ ಯೋಗಕ್ಷೇಮ ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡಿದ್ದರು.

ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಅವರು, 'ಶೂಟಿಂಗ್ ಹೋಗಿ ಸುಸ್ತು ಆಗಿದರು. ಆಪರೇಷನ್ ಏನೂ ಇಲ್ಲ. ವೈದ್ಯರು ಬಂದು ಹೇಳತ್ತಾರೆ. ಇಂದು ಸಂಜೆ ಅಥವಾ ನಾಳೆ ಡಿಸ್ಚಾರ್ಜ್ ಆಗುತ್ತಾರೆ' ಎಂದಿದ್ದಾರೆ.

ಏನು ಸಮಸ್ಯೆ ಇಲ್ಲ - ನಟ ಶಿವರಾಜ್​ ಕುಮಾರ್​

ರಾಘು ಆರೋಗ್ಯವಾಗಿದ್ದಾರೆ. ಏನು ಸಮಸ್ಯೆ ಇಲ್ಲ. ಹೃದಯಕ್ಕೆ ಸಂಬಂಧಿಸಿದ ಚಿಕ್ಕ ಶಸ್ತ್ರ ಚಿಕಿತ್ಸೆ ಆಗಿದೆ ಅಷ್ಟೇ. ರಾಘು ನಗ್ ನಗುತ್ತಾ ಮಾತಾಡ್ತಾನೆ. ಏನೂ ಸಮಸ್ಯೆ ಇಲ್ಲ. ರೆಸ್ಟ್ ಲೆಸ್ ಆಗಿ ಕೆಲಸ ಮಾಡಿದ್ದಕ್ಕೆ ಹೀಗಾಗಿದೆ. ಇತ್ತೀಚೆಗೆ ತುಂಬಾ ಬ್ಯುಸಿ ಆಗಿದರು. ನಾಳೆ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗ್ತಾರೆ. ಹೃದಯದ ಬಡಿತದಲ್ಲಿ ವೇರಿಯೇಷನ್ ಆಗಿದ್ದಕ್ಕೆ ಹೀಗಾಗಿ. ರಾಘವೇಂದ್ರ ರಾಜ್ ಕುಮಾರ್ ಸಾಕಷ್ಡು ಸಿನಿಮಾ ಮಾಡುತ್ತಿದ್ದಾನೆ. ಮೂರು ವರ್ಷದಿಂದ ಬ್ಯುಸಿ ಇದ್ದ ಮತ್ತೆ ಅದೇ ತರ ಸಿನಿಮಾದಲ್ಲಿ ಬ್ಯುಸಿ ಆಗ್ತಾನೆ ಎಂದು ನಟ ಶಿವರಾಜ್​ ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Next Story

RELATED STORIES