Top

ಜೆಡಿಎಸ್​ ಮಗುವಿನಂತೆ ಯಾರು ಮಿಠಾಯಿ ತೋರಿಸುತ್ತಾರೆ ಅವರ ಕಡೆ ಹೋಗುತ್ತದೆ - ಹೆಚ್​ ವಿಶ್ವಾನಾಥ್

X

ಮೈಸೂರು: ಇವರಿಗೆ ಸದನದ ಬಗ್ಗೆ ಅದ್ಯಾವ ಗೌರವ ಇದೆ. ನಿನ್ನೆ ಇಡೀ ಸದನವನ್ನ ವೇದನೆಯಿಂದ ನೋಡಿದೆ ಎಂದು ವಿಧಾನ ಪರಿಷತ್​ ಸದಸ್ಯ ಹೆಚ್​ ವಿಶ್ವನಾಥ್ ಅವರು ನಿನ್ನೆಯ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಭಾರತದ ಎಲ್ಲ ಸದನಗಳನ್ನ ನಮ್ಮ ವಿಧಾನ ಪರಿಷತ್ ಮೀರಿ ನಿಂತಿದೆ. ತನ್ನದೆ ಸಂಸ್ಕೃತಿಯನ್ನು ಇಡೀ ದೇಶದಲ್ಲಿ ಬಿಂಬಿಸಿದೆ. ಅಂತ ವಿಧಾನ ಪರಿಷತ್​ನ ವಿಶಿಷ್ಠ ಸ್ಥಾನವನ್ನ ನಾವೆಲ್ಲ ಸೇರಿ ಸೇರಿ ಕಳೆದಿದ್ದೀವಿ ಎಂದರು.

ಯಾರು ಜನತಂತ್ರ ವ್ಯವಸ್ಥೆಯ ಬಗ್ಗೆ ಭಾಷಣ ಮಾಡಿದರು. ಅವರೇ ನಿನ್ನೆ ಅದನ್ನ ಸದನದಲ್ಲಿ ಅದನ್ನ ಕೊಚ್ಚಿಕೊಚ್ಚಿ ಕೊಂದರು. ಸದನವನ್ನ ನಾವು ದೇವಾಲಯ ಅಂದ್ವಿ. ಅದಕ್ಕೆ ಪ್ರಧಾನಿ ಲೋಕಸಭೆಗೆ ಹಣೆಯಿಟ್ಟು ನಮಸ್ಕಾರ ಮಾಡಿ ಹೋಗಿದರು. ಅಂತಹ ಸಾರ್ವಭೌಮ ಸದನದ ಬಾಗಿಲನ್ನ ಬೂಟು ಕಾಲಿನಲ್ಲಿ ಒದ್ದರು. ಭಾರತಾಂಬೆ ಹಾಗೂ ಅಧಿಕಾರ ಕೊಟ್ಟ ಜನ ನಮ್ಮನ್ನ ಕ್ಷಮಿಸಲಿ. ನಿನ್ನೆಯ ಘಟನೆ ಖಂಡನೀಯವಾದುದು ಎಂದು ಮೈಸೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅವರು ಹೇಳಿದರು.

ಜೆಡಿಎಸ್ ಪಕ್ಷ ಕಾಂಗ್ರೆಸ್ ಬಿಜೆಪಿ ನಡುವಿನ ಒಂದು ಮಗು. ಯಾರು ಮೀಠಾಯಿ ತೋರಿಸುತ್ತಾರೆ ಅವರ ಕಡೆಗೆ ಮಗು ಹೋಗುತ್ತೆ. ಅವರ ಬಗ್ಗೆ ಹೆಚ್ಚು ಮಾತನಾಡೋದು ಬೇಡ ಎಂದು ಹೆಚ್​ ವಿಶ್ವನಾಥ್ ಅವರು ಸದನದಲ್ಲಿ ಸಭಾಪತಿ ವಿರುದ್ದ ಅವಿಶ್ವಾಸನಿರ್ಣಯಕ್ಕೆ ಜೆಡಿಎಸ್ ಬೆಂಬಲ ನೀಡಿದ್ದಕ್ಕೆ ವ್ಯಂಗ್ಯವಾಡಿದ್ದಾರೆ.

Next Story

RELATED STORIES