Top

ಜಾಡ್ಸಿ ಒದ್ದರೆ ಎಲ್ಲಿಗೋಗ್ತಿಯಾ ಗೊತ್ತಾ ನೀನು ರಾಸ್ಕಲ್ - ಸಚಿವ ಜೆ.ಸಿ ಮಾಧುಸ್ವಾಮಿ ಗರಂ

X

ತುಮಕೂರು: ಜಾಡಿಸಿ ಒದ್ದರೆ ಎಲ್ಲಿಗೋಗಿ ಬಿದ್ದಿರ್ತಿಯ ಗೊತ್ತಾ(?) ರಾಸ್ಕಲ್ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಅವರು ಗರಂ ಆದರು.

ತುಮಕೂರಿನಲ್ಲಿಂದು ನಡೆದ ಕೆಡಿಪಿ ಸಭೆಯಲ್ಲಿ ಈ ಪ್ರಸಂಗ ನಡೆದಿದ್ದು, ಎಇಇ ರಂಗಸ್ವಾಮಿ ಎಂಬ ಅಧಿಕಾರಿಗೆ ಸಭೆಯಲ್ಲೇ ತರಾಟೆ ತೆಗೆದುಕೊಂಡ ಸಚಿವರು, ಜಿಲ್ಲಾ ಪಂಚಾಯ್ತಿ ಇಂಜಿನಿಯರಿಂಗ್ ವಿಭಾಗದಲ್ಲಿ ಕೆಲಸಗಳು ನಡೆದೇ ಇಲ್ಲ. ಕಳೆದ 4ರಂದೇ ನಾನು ಸೂಚನೆ ನೀಡಿದ್ದೆ ಆದ್ರೂ ಯಾಕೆ ನೀವು ಕಂಟ್ರಾಕ್ಟರ್​ನ ಕರೆಸಿ ಕೆಲಸ ಒಪ್ಪಿಸಲಿಲ್ಲ ಎಂದು ಪ್ರಶ್ನೆ ಮಾಡಿದರು.

ಬಳಿಕ ಜಾಡ್ಸಿ ಒದ್ದರೆ ಎಲ್ಲಿಗೋಗ್ತಿಯ ಗೊತ್ತಾ ನೀನು ರಾಸ್ಕಲ್ ಇಲ್ಲಿಗೆ ಕತ್ತೆ ಕಾಯೋಕ್ ಬಂದಿದ್ದಿಯ. ನಿನ್ ಹೆಂಡ್ತಿಗೆ ಯಾವ್ ಸೋಪಲ್ಲಿ ತೊಳೆಯುತ್ತೀಯಾ(?) ಈ ನನ್ಮಕ್ಕಳನ್ನ ಎಲ್ಲರನ್ನೂ ಸಸ್ಪೆಂಡ್ ಮಾಡ್ರೀ ಎಂದು ಸಚಿವ ಮಾಧುಸ್ವಾಮಿ ಅವರು ಸಭೆಯಲ್ಲೇ ಸಿಇಓಗೆ ಸೂಚನೆ ನೀಡಿದರು.


Next Story

RELATED STORIES