Live Updates: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021-22ನೇ ಸಾಲಿನ ಬಜೆಟ್ ಮಂಡನೆ
X
Admin 21 Feb 2021 6:50 AM GMT
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22ನೇ ಸಾಲಿನ ಬಜೆಟ್ಅನ್ನು ಮಂಡಿಸುತ್ತಿದ್ದಾರೆ. ಮಹಾಮಾರಿ ಕೋವಿಡ್ 19 ಸಾಂಕ್ರಾಮಿಕದ ಪರಿಣಾಮವಾಗಿ ಆರ್ಥಿಕವಾಗಿ ಬಸವಳಿದಿರುವ ಸಾಮಾನ್ಯಜನರಿಗೆ ಈ ಬಜೆಟ್ ಸ್ವಲ್ಪ ಸಮಾಧಾನ ತರುವ ನಿರೀಕ್ಷೆಯಿದ್ದು, ಪ್ರಮುಖವಾಗಿ ಆರೋಗ್ಯ, ಮೂಲಸೌಕರ್ಯ ಹಾಗೂ ರಕ್ಷಣಾ ಕ್ಷೇತ್ರಗಳ ಮೇಲೆ ಮಾಡುವ ವೆಚ್ಚ ಹೆಚ್ಚಿಸುವ ಮೂಲಕ ಅರ್ಥ ವ್ಯವಸ್ಥೆಯ ಪುನಶ್ಚೇತನಕ್ಕೆ ನೆರವಾಗಲಿದೆ ಎಂಬ ಬಹುದೊಡ್ಡ ನಿರೀಕ್ಷೆಯೊಂದಿಗೆ ಕುತೂಹಲ ಮೂಡಿಸಿದೆ.
ಬಜೆಟ್ ಹೈಲೆಟ್ಸ್:
- ಅಸಂಘಟಿತ ಕಾರ್ಮಿಕರ ಮಾಹಿತಿ ಸಂಗ್ರಹಕ್ಕೆ ಪೋರ್ಟಲ್
- ಒಂದು ದೇಶ ಒಂದೇ ರೇಷನ್ ಕಾರ್ಡ್ ಘೋಷಣೆ
- ಕನಿಷ್ಠ ಬೆಂಬಲ ಬೆಲೆ ನಿಲ್ಲಿಸಿಲ್ಲ
- 2021-22ರಲ್ಲಿ ಎಲ್ಐಸಿಯ ಐಪಿಒ: ನಿರ್ಮಲಾ ಸೀತಾರಾಮನ್
- ರೈಲ್ವೆಗಾಗಿ ₹ 1,10,055 ಕೋಟಿ ದಾಖಲೆಯ ಹಣ
- 2021-22ರಲ್ಲಿ ಕೋವಿಡ್ ಲಸಿಕೆಗಾಗಿ 35,000 ಕೋಟಿ ನೀಡಿದ್ಧೇವೆ
- ಮಾರ್ಚ್ 2022 ರ ಹೊತ್ತಿಗೆ ನಾವು ಇನ್ನೂ 8,500 ಮತ್ತು 11,000 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ
- ಬೆಂಗಳೂರು ಮೆಟ್ರೋಗೆ ₹ 14 ಸಾವಿರ ಕೋಟಿ
- ಡಿಜಿಟಲ್ ಜನಗಣತಿ 3,768 ಕೋಟಿ ರೂ.
- ಕೋವಿಡ್ನಿಂದ ಆದಾಯಕ್ಕೆ ಪೆಟ್ಟು, ಖರ್ಚು ಹೆಚ್ಚಳ
- ಪ್ಲಾಸಿಕ್ಟ್ ಮತ್ತು ಲೆದರ್ ಉತ್ಪನ್ನಗಳ ಮೇಲಿನ ಸುಂಕ ಹೆಚ್ಚಳ
- ಹವಳ ಮತ್ತು ರತ್ನಗಳ ಬೆಲೆ ಮತ್ತಷ್ಟು ಹೆಚ್ಚಳ
- 75 ವರ್ಷ ದಾಟಿ ಹಿರಿಯ ನಾಗರಿಕರು ತೆರಿಗೆ ಕಟ್ಟುವಂತಿಲ್ಲ
- ಆಟೋ ಮೊಬೈಲ್ ಮತ್ತು ಎಲೆಕ್ಟ್ರನಿಕ್ ಉತ್ನನ್ನಗಳ ಅಬಕರಿ ಸುಂಕ ಹೆಚ್ಚಳ
- ನಗರ ಸ್ವಚ್ಛ ಅಭಿಯಾನ 1.41 ಲಕ್ಷ ಕೋಟಿ ರೂ.
- ನಗರ ಸ್ವಚ್ಛ ಅಭಿಯಾನ 2.Oಗೆ 1,41,000 ರೂ.
Next Story