Top

ಸರಿಯಾಗಿ ಚಿಕಿತ್ಸೆ ಕೊಡಲ್ಲ ಅಂದರೆ ದನ ಕಾಯೋಕೆ ಹೋಗಿ - ಸಚಿವ ಡಾ.ಕೆ ಸುಧಾಕರ್

ಸರಿಯಾಗಿ ಚಿಕಿತ್ಸೆ ಕೊಡಲ್ಲ ಅಂದರೆ ದನ ಕಾಯೋಕೆ ಹೋಗಿ

X

ಬೆಳಗಾವಿ: ಸರಿಯಾಗಿ ವೈದ್ಯರು ರೌಂಡ್ಸ್ ಮಾಡಲ್ಲ, ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ಸೌಲಭ್ಯ ಸಿಗುತ್ತಿಲ್ಲ. ಏನೇ ಹೇಳಿದ್ರು ಕೇರ್ ಮಾಡಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರ ಬಳಿ ರೋಗಿಗಳು ಗೋಳು ತೊಡಿಕೊಂಡಿದ್ದಾರೆ.

ಇಂದು ಸಚಿವ ಡಾ.ಕೆ ಸುಧಾಕರ್ ಅವರು ಬೀಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಯನ್ನು ಪರಿಶೀಲನೆ ನಡೆಸಿದರು. ಈ ವೇಳೆ ರೋಗಿಗಳು ಗೋಳು ತೊಡಿಕೊಂಡರು. ಈ ವೇಳೆ ಸಚಿವರು ಬೀಮ್ಸ್ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.

ನೀವು ಸರಿಯಾಗಿ ರೌಂಡ್ಸ್ ಮಾಡುವುದಿಲ್ಲ ಅಂದರೆ ಎಲ್ಲಾದರೂ ದನ ಕಾಯಲು ಹೋಗಿ, ಬೀಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಸೌಲಭ್ಯ ಕಲ್ಪಿಸಿ ಎಂದು ಸಚಿವ ಡಾ.ಕೆ ಸುಧಾಕರ್ ಅವರು ಎಚ್ಚರಿಕೆ ನೀಡಿದರು.

Next Story

RELATED STORIES