Top

ಇದೇನಾ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಜಾಪ್ರಭುತ್ವ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ

X

ಬೆಂಗಳೂರು: ವಿಧಾನ ಪರಿಷತ್ ಹೇಗೆ ನಡೆಯಿತು ಎಂದು ಟಿವಿಯಲ್ಲಿ ನೋಡಿ(!) ಸದನವನ್ನು ನಡೆಸುವುದು ಚೇರ್ಮನ್, ಅವರು ಇಲ್ಲದಾಗ ಡೆಪ್ಯೂಟಿ ಚೇರ್ಮನ್ ಬರ್ತಾರೆ ಎಂದು ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.

ವಿಧಾನ ಪರಿಷತ್​ನಲ್ಲಿ ಕಾಂಗ್ರೆಸ್​​-ಬಿಜೆಪಿ ಸದಸ್ಯರ ನಡುವೆ ಗದ್ದಲ ಹಿನ್ನೆಲೆ ಮಂಗಳವಾರ ವಿಧಾನಸೌಧದಲ್ಲಿ ಸಿದ್ದರಾಮಯ್ಯ ಅವರು ಮಾತನಾಡಿದ ಅವರು, ವಿದೇಶಕ್ಕೆ ಹೋದಾಗ, ಅನಾರೋಗ್ಯ ಇದ್ದಾಗ ಬರ್ತಾರೆ. ಒಂದೊಂದು ಬಾರಿ ಪ್ಯಾನಲ್​ನಲ್ಲಿ ಮಾಡ್ತಾರೆ ಇದಕ್ಕೆ ಒಂದು ರೂಲ್ಸ್ ಮಾಡಿದ್ದೇವೆ. ರೂಲ್ಸ್ ಮಾಡುವುದು ರೂಲಿಂಗ್ ಕಮಿಟಿ. ಇದು ಸದನ ಒಪ್ಪಿತವಾದ ಕಮಿಟಿ. ಸ್ಪೀಕರ್ ವಿಧಾನಸಭೆ ನಲ್ಲಿಯಲ್ಲಿ ಕಲಾಪ ನಡೆಸ್ತಾರೆ. ಚೇರ್ಮನ್ ಪರಿಷತ್​ನಲ್ಲಿ ನಡೆಸುತ್ತಾರೆ ಎಂದು ಸಭಾಪತಿ ಪೀಠದಲ್ಲಿ ಉಪಸಭಾಪತಿ ಕುಳಿತುಕೊಂಡಿದ್ದಕ್ಕೆ ಸಿದ್ದರಾಮಯ್ಯ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇನ್ನು ಬ್ಯುಸಿನೆಸ್ ಮುಗಿತು, ಚೇರ್ಮನ್ ಸೈಡ್ ಮಾಡಿದರು. ಅದಕ್ಕೆ ಚೇರ್ಮನ್​ಗೆ ಪವರ್ ಇದೆ. ಕಾನೂನು ಸಚಿವರ ಆದೇಶದ ಮೇರೆಗೆ ಕೌನ್ಸಿಲ್ ಮೀಟಿಂಗ್ ಕರೆಯಬೇಕು. ಮೋಷನ್ ಮೂವ್ ಮಾಡೋಕೆ ನೊಟೀಸ್ ಕೊಡಬೇಕು. ನಂತರ ಅದರ ಸಮಗ್ರ ಚರ್ಚೆ ಆಗಬೇಕು. ಆ ನಂತರ ನೋ ಕಾನ್ಫಿಡೆನ್ಸ್ ಮೋಷನ್ ಮೂ ಮಾಡ್ತಾರೆ. ಆದರೆ, ಈ ರೀತಿಯಲ್ಲಿ ಇಲ್ಲಿ ಮಾಡಿಲ್ಲ. 15ರಂದು ಪರಿಷತ್ ನಡೆಸಿ ಅಂತ ಹೇಳ್ತಾರೆ. ಆದರೆ, ಇದು ಆರ್ಡರ್ ಪ್ರಕಾರ ಇಲ್ಲ ಎಂದರು.

ಸದ್ಯ ರಾಜ್ಯದ ಇತಿಹಾಸದಲ್ಲೇ ಇಂತಹ ಪರಿಸ್ಥಿತಿ ಎದುರಾಗಿರಲಿಲ್ಲ. ಇಂತಹ ಗೂಂಡಾಗಿರಿಯನ್ನ ನೋಡಿಲ್ಲ. ಇದನ್ನ ನಾನು ಖಂಡಿಸುತ್ತೇನೆ. ಬಾಗಿಲು ಹಾಕಿ ಚೇರ್ಮನ್ ತಡೆದಿದ್ದಾರೆ. ಇದು ಕಾನೂನು ಬಾಹಿರವಾದುದು. ಸಭಾಪತಿಯನ್ನೇ ಸದನದೊಳಗೆ ಬರದಂತೆ ತಡೆದಿದ್ದು ನಿಯಮಬಾಹಿರ. ಡೆಪ್ಯೂಟಿ ಚೇರ್ಮನ್ ಕೂರಿಸಿದ್ದಾರೆ. ಸಭಾಪತಿ ಇದ್ದಾಗ ಉಪಸಭಾಪತಿ ಕೂರುವಂತಿಲ್ಲ, ಅವರಿಗೆ ಏನಾದರೂ ಸಮಸ್ಯೆ ಇದ್ದಾಗ, ಇಲ್ಲವೇ ಸಭಾಪತಿ ಹೇಳಿದಾಗ ಮಾತ್ರ ಉಪಸಭಾಪತಿ ಕೂರಬೇಕು. ಆ ಸ್ಥಾನದಲ್ಲಿ ಕೂತು ಕಲಾಪ ನಡೆಸಬೇಕು. ಇದು ಸಂವಿಧಾನ, ಪ್ರಜಾಪ್ರಭುತ್ವ, ಕಾನೂನು ಬಾಹಿರ ನಡೆ. ಇದು ಸಂಪೂರ್ಣ ಲೀಗಲ್ ವೈಯಲೇಷನ್. ರೂಲ್ಸ್​ಗಳನ್ನ ಗಳನ್ನ ಅವರು ಫಾಲೋ ಮಾಡುತ್ತಿಲ್ಲ. ಬಿಜೆಪಿಯ ನಡೆ ಕಾನೂನುಬಾಹಿರವಾದುದು. ಮೆಜಾರಿಟಿನೂ ಅವರಿಗಿಲ್ಲ, ಜೆಡಿಎಸ್ ಸಪೋರ್ಟ್​ನಿಂದ ಈಗ ಬಂದಿದ್ದಾರೆ. ಸದನದ ಗೂಂಡಾಗಿರಿ ಜೆಡಿಎಸ್ ಕೂಡ ಕಾರಣ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಗಂಭೀರ ಆರೋಪ ಮಾಡಿದರು.

ಇವತ್ತಿನ ಸನ್ನಿವೇಶ ಪ್ರಜಾಪ್ರಭುತ್ವದ ಕಗ್ಗೊಲೆ. ಸಂವಿಧಾನ ವಿರೋಧಿ ನಡೆ, 165 ರೂಲ್ಸ್ ಹೀಗೆ ಮಾಡಿ ಅಂತ ಹೇಳುತ್ತಾ(?) ಬಿಜೆಪಿಯ ಗೂಂಡಾಗಿರಿಯನ್ನ ಖಂಡಿಸುತ್ತೇನೆ. ಬಿಜೆಪಿ, ಜೆಡಿಎಸ್ ಎರಡೂ ಒಂದೇ. ಇವರ ಮೇಲೆ ಕಾನೂನು ಬಾಹಿರ ನಿಯಮ ಅನ್ವಯವಾಗುತ್ತದೆ. ಕಾಂಗ್ರೆಸ್​ನವರು ಎಲ್ಲಿ ಗೂಂಡಾಗಿರಿ ಮಾಡಿದ್ದೇವೆ. ಉಪಸಭಾಪತಿ ಕೂತಿದ್ದೇ ಮಹಾಪರಾಧ. ಇವರು ಡೆಪ್ಯೂಟಿ ಚೇರ್ಮನ್ ಕೂರಿಸಿದ್ದೇ ಕಾನೂನುಬಾಹಿರ. ಬಾಗಿಲುಮುಚ್ಚಿ ಕೂರಿಸಿದ್ದು ಸರಿಯೇ ಎಂದು ಪ್ರಶ್ನೆ ಮಾಡಿದರು.

2009ರಲ್ಲಿ ಶಂಕರ್ ಬಿದರಿ ರಿವಾಲ್ವಾರ್ ಹಾಕಿ ಬಾಗಿಲು ಬಂದ್ ಮಾಡಿದ್ದರು. ಯೂನಿಫಾರಂ ಹಾಕಿ ಬಂದಿದ್ದರು. ಇದು ಕಾನೂನುಬಾಹಿರವಾದ ನಡೆ, ಮಾರ್ಷಲ್​ಗಳಷ್ಟೇ ಸದನಕ್ಕೆ ಬರಲು ಅವಕಾಶವಿದೆ. ಅವತ್ತು ನಾವೇನು ಮಾಡಿಲ್ಲ ಎಂದಿದ್ದಾರೆ.

ಬಿಜೆಪಿಯವರು ಮಾಡಿರುವುದು ಕ್ರಿಮಿನಲ್ ಅಪರಾಧ. ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಅವರು ರಾತ್ರಿಯೇ ಇಂತಹ ಫ್ಲಾನ್ ಮಾಡಿದ್ದಾರೆ. ಇನ್ನೂ ಬೆಲ್ ಮಾಡುವ ಮುನ್ನವೇ ಡೆಪ್ಯೂಟಿ ಚೇರ್ಮನ್ ಕೂರಿಸಿದ್ದಾರೆ. ಸದನದ ಪ್ರೊಸೀರ್​ನಂತೆ ಅವರು ನಡೆದುಕೊಳ್ಳಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಆರೋಪ ಮಾಡಿದರು.

Next Story

RELATED STORIES