ನನ್ನ ಅಕೌಂಟ್ಗೆ 15 ಲಕ್ಷ ಅಡ್ವಾನ್ಸ್ ಹಾಕಿದ್ದಾರೆ - ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ
ಬೆಂಗಳೂರು: ಏನ್ ನಡೀತಿದೆ ಅಂತ ಗೊತ್ತಾಗ್ತಿಲ್ಲ ಇಲ್ಲಿ, ಅವರ ಪ್ರೊಡಕ್ಷನ್ ಹೌಸ್ ಇದೆ ಅವರ ಹೆಂಡ್ತಿ ಕೂಡ ಸಿನಿಮಾ ಮಾಡಿದ್ದಾರೆ. ನನ್ನ ತಂದೆ ತೀರಿ ಹೋದ ಸಂದರ್ಭದಲ್ಲಿ ಪೂಜೆ ಹೇಳಿದರು ಅದನ್ನ ಮಾಡಸ್ಸೋಕಾಗಿಲ್ಲ ಎಂದು ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಅವರು ಹೇಳಿದರು.
ಜ್ಯೋತಿಷಿ ಯುವರಾಜ್ ಆರೋಪಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಡೆಲ್ಲಿಗೆ ಹೋದಾಗ ಯುವರಾಜ್ ಫೋನ್ ಮಾಡಿದರು. ತಂದೆ ತೀರಿ ಹೋದ ಬಗ್ಗೆ ಮಾತನಾಡಿದರು ಅಷ್ಟೇ. ಬ್ಯಾನರ್ ಮಾಡುತ್ತಿದ್ದೇವೆ ಸಿನಿಮಾ ಮಾಡೋಣ ಹೇಳಿದರು. ನಾನು ಒಪ್ಕೊಂಡಿದ್ದೆ. ನನ್ನ ಅಕೌಂಟ್ಗೆ 15 ಲಕ್ಷ ಅಡ್ವಾನ್ಸ್ ಹಾಕಿದ್ದಾರೆ. ಕೋಟಿಗಟ್ಟಲೆ ಹಣ ಅಂತ ಹೇಳ್ತಿರೋದೆಲ್ಲ ಸುಳ್ಳು. 15 ಲಕ್ಷ ಮಾತ್ರ ಅಷ್ಟೇ ಟ್ರಾಂಜಾಕ್ಷನ್ ಆಗಿರೋದು ಎಂದು ಸ್ಪಷ್ಟನೆ ನೀಡಿದ್ದಾರೆ.
ಯುವರಾಜ್ ಅವರು ತುಂಬಾ ವಿಚಾರಗಳನ್ನ ಮಾತಾಡುತ್ತಿದರು. ನಾನು ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ, ನಾನು ಹಲವು ರಾಜಕಾರಣಿಗಳ ಜೊತೆ ಮಾತಾನಾಡಿದ್ದೇನೆ. ಬೇರೆ ಒಬ್ಬ ಪ್ರೊಡ್ಯೂಸರ್ ಅಂತ ಹೇಳಿ ಅಕೌಂಟ್ಗೆ ಹಾಕಿದ್ದಾರೆ ಎಂದರು.
ಯುವರಾಜ್ ಅವರು ಬೇರೆ ಯಾರ ಸಂಪರ್ಕದಲ್ಲಿದ್ದಾರೆ ಗೊತ್ತಿಲ್ಲ, ನಂಗೆ ಅವರು ಬಂಧನ ಆದಾಗ ನಂಗೆ ಆಶ್ಚರ್ಯ ಆಯ್ತು. ಟ್ರಾಂಜಾಕ್ಷನ್ ಆಗಿ ಒಂದು ವಾರದ ಬಳಿಕ ಕೊನೆ ಮಾತು ಆಡಿದ್ದು. ಫೆಬ್ರುವರಿ ಮಾರ್ಚ್ನಲ್ಲಿ 15 ಲಕ್ಷ ಹಣ ಟ್ರಾಂಜಾಕ್ಷನ್ ಆಗಿದ್ದು. ನನ್ ಅಕೌಂಟ್ಗೆ ಪ್ರೊಡ್ಯೂಸರ್ಗಳು ದುಡ್ ಹಾಕ್ತಿದ್ರು. ಅವರಿಗೆ ಕಾಲ್ ಮಾಡಿ ಕೇಳೋಣ ಅಂತ ನನ್ನ ಸಹೋದರನ ಬಳಿ ಹೇಳಿದ್ದೆ, ರಾಜಕಾರಣಿ ಜೊತೆ ಮಾತನಾಡಿದ್ದೆ, ಆಗ ಸಿನಿಮಾ ಬಗ್ಗೆ ಮಾತನಾಡಿ ಅಷ್ಟೇ ಬೇರೆ ವಿಷಯ ಬೇಡ ಅಂದಿದ್ದೆ ಎಂದಿದ್ದಾರೆ.
ಸ್ವಾಮಿ, ಅಕೌಂಟ್ಯಿಂದ ಬಂದಿರೋದು ಹದಿನೈದು ಲಕ್ಷ ಅಷ್ಟೇ. ನಾನು ಸಿನಿಮಾ ಮಾಡಿರೋದು ಅಗ್ರಿಮೆಂಟ್ ಪ್ರಕಾರ ಅಲ್ಲ, ಒಂದು ಧೈರ್ಯದಿಂದ ಸಿನಿಮಾ ಮಾಡುತ್ತಿದ್ದೆ ಅಷ್ಟೇ. ಒಂದು ಬಾಯಿ ಮಾತಲ್ಲಿ ಅಷ್ಟೇ ನಮ್ಮ ಸಿನಿಮಾ ವ್ಯವಹಾರ. ಅವರ ಜೊತೆ ಯಾವ ಬ್ಯೂಸಿನೆಸ್ ಇಲ್ಲ, ಏನೂ ಇಲ್ಲ ಎಂದು ಹೇಳಿದರು.
ರಾಜಕಾರಣಿಗಳನ್ನ ಭೇಟಿ ಮಾಡಿದ್ದೀನಿ ಇಲ್ಲ ಅಂತಲ್ಲ. ಒಂದು ಸಿನಿಮಾ ಬಿಡುಗಡೆ ಮಾಡಿದಾಗ ಎಲ್ಲರ ಕಾಂಟಾಕ್ಟ್ ಬೇಕಾಗುತ್ತೆ. ಲಾಂಚ್ಗೆ ಇನ್ನಿತರ ಕೆಲಸಕ್ಕೆ ಬೇಕಾಗ್ತಾರೆ. ಕಾಂಟಾಕ್ಟ್ ಆ ಮನುಷ್ಯನೇ ಹೇಳಿದ್ರಿಂದ ಮಾತನಾಡ್ದೆ ಅಷ್ಟೇ ಎಂದು ತಿಳಿಸಿದರು.
ಸ್ವಾಮಿ ನನ್ನ ತಂದೆ ತೀರಿಹೋದಾಗ, ನಿಮ್ಮ ತಂದೆ ಕಷ್ಟದಲ್ಲಿದ್ದಾಗ ಸಹಾಯ ನನಗೆ ಮಾಡಿದ್ರು ಆ ಋಣ ಇದೆ ಅಂದ್ರು ಆದರೆ ಈ ತರ ಮಾಡ್ತಾರೆ ಅಂತ ಅಂದ್ಕೊಂಡಿಲ್ಲ, ನನ್ನ ಹೇಳಿಕೆ ಏನಿದೆ ಅಂತ ಕ್ಲೀಯರ್ ಮಾಡಿದ್ದೀನಿ. ಆ ವ್ಯಕ್ತಿಗೂ ನನಗೂ ಸಂಬಂಧವಿಲ್ಲ. ಸಿನಿಮಾ ಬಗ್ಗೆ ಟೋಟಲ್ ಸಂಭಾವನೆ ಮಾತುಕತೆ ಆಗಿಲ್ಲ, ನೀವ್ ಕೊಡಿ ಬಿಡಿ ನಾವ್ ಸಿನಿಮಾ ಮಾಡೋಣ ಅಂತ ಹೇಳಿದ್ದೆ. ಯಾವ ಟೆಂಡರ್ಗೂ ಇನ್ಪ್ಲುಯೆನ್ಸ್ ಇಲ್ಲ, ಬೇಕಿದ್ರೆ ದಾಖಲೆಗಳು ತೆಗೆಯಿರಿ. ಇಂಜೀನಿಯರ್ ಕಾಲೇಜಿಗೆ ಹಣ ಟ್ರಾನ್ಸ್ಫರ್ ಬಗ್ಗೆ, ಆ ತರ ಯಾವುದೂ ಇಲ್ಲ ಎಂದರು.
ಸ್ವಾಮಿ ಅಕೌಂಟ್ನಿಂದ 15 ಲಕ್ಷ. ಆದರೆ, ಇನ್ನೊಂದು ಅಕೌಂಟ್ನಿಂದ 60 ಲಕ್ಷ ಬಂದಿದೆ ಆದರೆ ಅವರು ಯಾರು ಅಂತ ಗೊತ್ತಿಲ್ಲ, ಕಳೆದ ವರ್ಷ ಮಾರ್ಚ್ ಸಂದರ್ಭದಲ್ಲಿ ಬಂದಿರಬಹುದು. ಯಾದವ್ ಕಡೆಯಿಂದ ಯಾವುದೇ ಟ್ರಾಂಜಾಕ್ಷನ್ ಆಗಿಲ್ಲ, ಇಲ್ಲಿಯವರೆಗೂ ಯಾರೂ ವಿಚಾರಣೆ ಕರೆದಿಲ್ಲ ಎಂದು ತಿಳಿಸಿದರು.
ರಾಧಿಕಾ ಕುಮಾರಸ್ವಾಮಿ ಮಾತಿನ ಸುತ್ತಾ ಅನುಮಾನದ ಹುತ್ತಾ!?
ರಾಧಿಕಾ ಕುಮಾರಸ್ವಾಮಿ ಮಾತಿನಲ್ಲಿ ಅನುಮಾನ ಕಾಡುತ್ತಿದ್ದು, ಒಟ್ಟು ಎಪತ್ತೈದು ಲಕ್ಷ ಹಣ ಬಂದಿದೆ. ಆದರೆ, ಈ ಹಣಕ್ಕೆ ಅಗ್ರಿಮೆಂಟ್ ಅಗಿಲ್ಲ ಜೊತೆಗೆ ಹದಿನೈದು ಲಕ್ಷ ಹಣ ಯುವರಾಜ ಅಕೌಂಟ್ನಿಂದ ಬಂದಿದೆ. ಆದರೆ, ಬೇರೊಬ್ಬ ಪರಿಚಯ ಇಲ್ಲದ ವ್ಯಕ್ತಿ ಅಕೌಂಟ್ನಿಂದ ಅರವತ್ತು ಲಕ್ಷ ಹಣ ಬಂದಿದೆ. ಈ ಎರಡು ಹಣಕ್ಕೆ ಯಾವುದೇ ಅಗ್ರಿಮೆಂಟ್ ಇಲ್ಲ. ಯಾವುದೇ ದಾಖಲಾತಿ ಇಲ್ಲದೇ ರಾಧಿಕಾ ಅವರು ಎಪತ್ತೈದು ಲಕ್ಷ ಹಣ ಪಡೆದು ಕಳೆದ ಮಾರ್ಚ್ನಿಂದ ಸುಮ್ಮನೆ ಇದ್ದರು. ಈ ಹಣ ಯುವರಾಜ್ ಬೇರೆಯವರಿಗೆ ಮೋಸ ಮಾಡಿ ಪಡೆದಿದ್ದಾರೆ. ಹೀಗಾಗಿ ಇದು ಮುಂದಿನ ದಿನದಲ್ಲಿ ರಾಧಿಕಾಗೆ ಸಮಸ್ಯೆ ಆಗಲಿದೆ. ಈ ಬಗ್ಗೆ ಕ್ಲಾರಿಟಿ ಈ ಕ್ಷಣದ ವರೆಗು ಇಲ್ಲ.