Top

ಅಪ್ಪು,ಜಾನಿ ಮಾಸ್ಟರ್​ ಕಾಂಬೋದಲ್ಲಿ 'ಯುವರತ್ನ' ಇಂಟ್ರೋಡಕ್ಷನ್ ಸಾಂಗ್

ಅಪ್ಪು ಗೋವಾದಲ್ಲಿರುವಂತಹ ಒಂದಷ್ಟು ಫೋಟೋಸ್​ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಅಪ್ಪು,ಜಾನಿ ಮಾಸ್ಟರ್​ ಕಾಂಬೋದಲ್ಲಿ ಯುವರತ್ನ ಇಂಟ್ರೋಡಕ್ಷನ್ ಸಾಂಗ್
X

ಬರೋಬ್ಬರಿ 6 ತಿಂಗಳ ಬಳಿಕ ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್ ಶೂಟಿಂಗ್​ ಅಖಾಡಕ್ಕೆ ಇಳಿದಿದ್ದಾರೆ. ರೀಸೆಂಟಾಗಿ ಇಂಟ್ರೋಡಕ್ಷನ್​ ಸಾಂಗ್​ಗಾಗಿ ಡಾನ್ಸ್​ ರಿಹರ್ಸಲ್​ ಮಾಡುತ್ತಿದ್ದ ಅಪ್ಪು, ಇದೀಗ ಧಿಡೀರ್ ಅಂತ ಗೋವಾ ಫ್ಲೈಟ್ ಹತ್ತಿದ್ದಾರೆ. ಅಪ್ಪು ಗೋವಾದಲ್ಲಿರುವಂತಹ ಒಂದಷ್ಟು ಫೋಟೋಸ್​ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಸ್ಯಾಂಡಲ್​ವುಡ್​ನ ಎಲ್ಲಾ ಬಿಗ್​ಬಜೆಟ್​ ಸಿನಿಮಾಗಳು ಒಂದೊಂದಾಗಿಯೇ ಶೂಟಿಂಗ್​ ಶುರುಮಾಡಿವೆ. ಬರೋಬ್ಬರಿ 6 ತಿಂಗಳ ಬಳಿಕ ಪುನೀತ್ ರಾಜ್​ಕುಮಾರ್ ಕೂಡ ಶೂಟಿಂಗ್​ ಅಖಾಡಕ್ಕೆ ಇಳಿದಿದ್ದಾರೆ. ರೀಸೆಂಟಾಗಿ ಯುವರತ್ನ ಇಂಟ್ರೋಡಕ್ಷನ್​ ಹಾಡಿಗಾಗಿ ಅಪ್ಪು ಡಾನ್ಸ್​ ರಿಹರ್ಸಲ್​ ಮಾಡುತ್ತಿದ್ದ ಮೇಕಿಂಗ್​ ವಿಡಿಯೋವೊಂದು ರಿಲೀಸ್​ ಆಗಿತ್ತು. ಈ ವಿಡಿಯೋದಲ್ಲಿ ಪವರ್​ಸ್ಟಾರ್ ಬಿಯರ್ಡ್​ ಲುಕ್​ನಲ್ಲಿ ಕಾಣಿಸಿಕೊಂಡಿದರು.

ಇದೀಗ ಅದೇ ಮಾಸ್​ ಬಿಯರ್ಡ್​ ಲುಕ್​ನಲ್ಲಿ, ಗೋವಾದಲ್ಲಿ ಕಾಣಿಸಿಕೊಂಡಿದ್ದಾರೆ ಪವರ್​ಸ್ಟಾರ್. ಇದೇ ಇಂಟ್ರೋಡಕ್ಷನ್​ ಸಾಂಗ್​ ಶೂಟಿಂಗ್​ಗಾಗಿ ಯುವರತ್ನ ಟೀಂ ಗೋವಾ ಫ್ಲೈಟ್ ಹತ್ತಿದ್ದಾರೆ. ಅಂದ್ಹಾಗೇ ಈ ಹಾಡಿನ ಚಿತ್ರೀಕರಣದ ಜೊತೆಗೆ ಒಂದಷ್ಟು ಟಾಕಿ ಪೋರ್ಶನ್​ ಕೂಡ ಗೋವಾದಲ್ಲೇ ಚಿತ್ರೀಕರಣವಾಗಲಿದ್ಯಂತೆ. ಇನ್ನು ಅಪ್ಪು ಗೋವಾದಲ್ಲಿರುವ ಕೆಲ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಇನ್ನು ಪವರ್​ಸ್ಟಾರ್ ಸಿನಿಮಾಗಳಲ್ಲಿ ಹೀರೋ ಇಂಟ್ರೋಡಕ್ಷನ್​ ಸಾಂಗ್​ಗೆ ಅಭಿಮಾನಿಗಳು ಕಾತುರದಿಂದ ಕಾಯ್ತಿರ್ತಾರೆ. ಅದು ಅಲ್ದೆ ಜಾನಿ ಮಾಸ್ಟರ್ ಕೊರಿಯೊಗ್ರಫಿ ಅಂದ್ರೆ ಕುತೂಹಲ ದುಪ್ಪಟಾಗೊದಂತೂ ಹೌದು. ಈಗಾಗಲೇ ಇವರಿಬ್ಬರ ಕಾಂಬಿನೇಷನ್​ಲ್ಲಿ ರೀಸೆಂಟಾಗಿ ನಟಸಾರ್ವಭೌಮ ಚಿತ್ರದ ಓಪನ್​ ದ ಬಾಟಲ್​ ಸಾಂಗ್ ಸೂಪರ್​ ಹಿಟ್ ಆಗಿತ್ತು. ಇದೀಗ ಅದೇ ನಿರೀಕ್ಷೆ ಯುವರತ್ನ ಇಂಟ್ರೋಡಕ್ಷನ್​ ಸಾಂಗ್​ ಮೇಲೂ ಇದೆ.

Next Story

RELATED STORIES