Top

ಲಾಕ್​​​ಡೌನ್​​​ ಬಳಿಕ ಮೊದಲು ರಿಲೀಸ್​ ಸಿನಿಮಾ ಯಾವುದು?

ಅಕ್ಟೋಬರ್​ 15ಕ್ಕೆ ಮುಚ್ಚಿದ್ದ ಥಿಯೇಟರ್​ ಬಾಗಿಲು ಮತ್ತೆ ಓಪನ್ ಆಗಲಿದೆ.

ಲಾಕ್​​​ಡೌನ್​​​ ಬಳಿಕ ಮೊದಲು ರಿಲೀಸ್​ ಸಿನಿಮಾ ಯಾವುದು?
X

ಅಂತೂ ಇಂತೂ ಮುಚ್ಚಿದ್ದ ಥಿಯೇಟರ್ ಬಾಗಿಲು ತೆರೆಯೋ ಸಮಯ ಬಂದಾಯ್ತು. ಇಡೀ ಚಿತ್ರರಂಗ ಕೊಂಚ ನಿಟ್ಟುಸಿರು ಬಿಡೋ ಹಾಗಾಯ್ತು. ಥಿಯೇಟರ್​ ಬಾಗಿಲು ತೆರೆತಿದ್ದ ಹಾಗೇ ಯಾವ ಸಿನಿಮಾ ಮೊದಲು ರಿಲೀಸ್​ ಅಗುತ್ತೆ ಅನ್ನೋ ಪ್ರಶ್ನೆಗೆ ರಾಮ್​ಗೋಪಾಲ್​ ವರ್ಮಾ ಉತ್ತರ ಕೊಟ್ಟಿದ್ದು ಆಯ್ತು(?)

ಕ್ರೂರಿ ಕೊರೊನಾ ಜಗತ್ತಿನ ಕಾಲಚಕ್ರವನ್ನೇ ನಿಲ್ಲಿಸಿದೆ ಅಬ್ಬರಿಸಿ ಬೊಬ್ಬಿರಿದಿದೆ. ಕಣ್ಣಿಗೆ ಕಾಣದ ವೈರಸ್​ ಆರ್ಭಟದಿಂದ ಯಾರು ಊಹೆ ಮಾಡದ ಘಟನೆಗಳು ನಡೆದು ಹೋಗಿದೆ. ಅದು ಚಿತ್ರರಂಗದಲ್ಲೂ ಕೂಡ ಆಗಿದೆ. ಚಿತ್ರರಂಗದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಬರೋಬ್ಬರಿ 7 ತಿಂಗಳ ಕಾಲ ಚಿತ್ರಮಂದಿರಗಳೇ ಬಾಗಿಲು ಹಾಕುವ ಪ್ರಸಂಗವನ್ನು ಕೂಡ ಕೊರೊನಾ ತಂದೊಡಿತ್ತು. ಇದೀಗ ಥಿಯೇಟರ್​​ಗಳಿಗೆ ಹಿಡಿದ ಕೊರೊನಾ ಗ್ರಹಣ ಕೊನೆಗೂ ಬಿಡುವ ಹಂತಕ್ಕೆ ಬಂದಿದೆ. ಅಕ್ಟೋಬರ್​ 15ಕ್ಕೆ ಮುಚ್ಚಿದ್ದ ಥಿಯೇಟರ್​ ಬಾಗಿಲು ಮತ್ತೆ ಓಪನ್ ಆಗಲಿದೆ. 7 ತಿಂಗಳ ಬಳಿಕ ಸಿನಿಮಾ ಪ್ರಚಂಚಕ್ಕೆ ಸ್ವಾತಂತ್ರ್ಯ ಸಿಗಲಿದೆ.

ಕೊರೊನಾ ಆರ್ಭಟಕ್ಕೆ ಸದಾ ಗಿಜಿಗುಡುತ್ತಿದ್ದ ಚಿತ್ರಮಂದಿರಗಳ ಬಾಗಿಲು ಮುಚ್ಚಿತ್ತು. ಇದೀಗ ಕೇಂದ್ರ ಸರ್ಕಾರ ಅನ್​ಲಾಕ್​​ 5.0 ಮಾರ್ಗಸೂಚಿ ಬಿಡುಗಡೆ ಮಾಡಿದ್ದು ಥಿಯೇಟರ್ ಓಪನ್ ಮಾಡಲು ಗ್ನೀನ್ ಸಿಗ್ನಲ್​ ಕೊಟ್ಟಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಸಲಹೆ ನೀಡಲಾಗಿದೆ. ಥಿಯೇಟರ್​ಗಳನ್ನ ಪ್ರತಿಬಾರಿಯೂ ಕೂಡ ಸ್ಯಾನಿಟೈಸ್ ಮಾಡಬೇಕು. ಶೇ.50ರಷ್ಟು ಸೀಟು ಸಾಮರ್ಥ್ಯದೊಂದಿಗೆ, ಥಿಯೇಟರ್, ಮಲ್ಟಿಪ್ಲೆಕ್ಸ್‌ಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಥಿಯೇಟರ್​ಗಳಲ್ಲಿ ಸಾಮಾಜಿಕ ಅಂತರಗಳನ್ನು ಪಾಲನೆ ಮಾಡಬೇಕು. ಜೊತೆಗೆ ಇನ್ನೊಂದಿಷ್ಟು ಕಂಡಿಷನ್ ಹಾಕಿ ಥಿಯೇಟರ್ ಓಪನ್​ಗೆ ಓಕೆ ಅಂದಿದೆ ಕೇಂದ್ರ ಸರ್ಕಾರ. ಹೀಗಾಗಿ ಥೀಯೇಟರ್​ಗಳಲ್ಲಿ ಮಾರ್ಗಸೂಚಿಯಂತೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಥಿಯೇಟರ್ ಓಪನ್ ಆದ ಕೂಡಲೇ ಯಾವ ಚಿತ್ರ ಮೊದಲು ರಿಲೀಸ್ ಆಗುತ್ತೆ ಅಂತ ಅಭಿಮಾನಿಗಳು ಕಾತರದಿಂದ ಕಾಯುತ್ತಿದರು. ಈ ಬಗ್ಗೆ ಹಲವು ಚರ್ಚೆಗಳು ಕೂಡ ನಡೆದಿದ್ವು. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಥಿಯೇಟರ್ ಓಪನ್ ಆದ ಕೂಡಲೇ ತೆರೆಗೆ ಅಪ್ಪಳಿಸಲು ರಾಮ್​ಗೋಪಾಲ್ ವರ್ಮ ಸಿನಿಮಾ ರೆಡಿಯಾಗಿದೆ. ಚಿತ್ರಮಂದಿರ ತೆರೆಯುತ್ತಿದ್ದಂತೆ ಕೊರೊನಾ ಆರ್ಭಟ ಶುರುವಾಗಲಿದೆ. ಕೊರೊನಾ ಅನ್ನೊದು ರಾಮ್​ಗೋಪಾಲ್ ವರ್ಮ ಸಿನಿಮಾದ ಹೆಸರು. ಕೊರೊನಾ ಚಿತ್ರ ಲಾಕ್‌ಡೌನ್ ಬಳಿಕ ಬಿಡುಗಡೆಯಾಗುವ ಮೊದಲ ಸಿನಿಮಾ ಎಂದು ಟ್ವೀಟ್ ಮಾಡಿದ್ದಾರೆ. ಇಂಟ್ರೆಸ್ಟಿಂಗ್ ಸಂಗತಿ ಅಂದ್ರೆ ಇದು ಕೊರೊನಾ ವೈರಸ್​ ಕುರಿತ ಜಗತ್ತಿನ ಮೊಟ್ಟ ಸಿನಿಮಾ ಅಂತ ರಾಮ್​ಗೋಪಾಲ್ ವರ್ಮ ತಮ್ಮ ಟೀಸರ್​ನಲ್ಲಿ ಹೇಳಿದ್ದಾರೆ.

ಇತ್ತ ಸ್ಯಾಂಡಲ್​ವುಡ್​ನಲ್ಲೂ ಬಹುನೀರಿಕ್ಷಿತ ಚಿತ್ರಗಳು ಸಾಲುಗಟ್ಟಿ ನಿಂತಿವೆ. ರಿಲೀಸ್​ಗೆ ರೆಡಿಯಾಗಿರುವ ಚಿತ್ರಗಳ ಪಟ್ಟಿ ತುಂಬಾನೇ ದೊಡ್ಡದಿದೆ. ಆದರೆ, ಇದೆಲ್ಲಕ್ಕಿಂತ ಮೊದಲು ಲಾಕ್​ಡೌನ್ ಆರಂಭವಾದ ಸಂದರ್ಭದಲ್ಲಿ ಚಿತ್ರಮಂದಿರಗಳಲ್ಲಿ ಇದ್ದ ಸಿನಿಮಾಗಳಿಗೆ ಮೊದಲ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಹೀಗಾಗಿ ಲಾಕ್​ಡೌನ್ ಸಂದರ್ಭದಲ್ಲಿ ಚಿತ್ರಮಂದಿರದಿಂದ ಶಿವಾರ್ಜುನ ಹಾಗೂ ಪಾರ್ಪ್​ಕಾರ್ನ್ ಮಂಕಿಟೈಗರ್​ ಸಿನಿಮಾಗಳು ಮೊದಲಿಗೆ ಸಿನಿ ಪ್ರೇಕ್ಷಕರಿಗೆ ದರ್ಶನ ನೀಡಲಿವೆ. ಒಂದೆರೆಡು ವಾರ ಇದೇ ಸಿನಿಮಾಗಳು ಥಿಯೇಟರ್​ನಲ್ಲಿ ಇರಲಿವೆ. ಜೊತೆಗೆ ಕೆಲವೊಂದು ಚಿತ್ರಗಳನ್ನು ರಿರಿಲೀಸ್​ ಮಾಡುವ ಬಗ್ಗೆ ಕೂಡ ಚರ್ಚೆ ನಡೆಯುತ್ತಿದೆ. ಆದರೆ, ಅದಕ್ಕೆ ಆದ್ಯತೆ ಸಿಗುತ್ತಾ ಇಲ್ವೋ ಅನ್ನೋದು ಇನ್ನೂ ಕನ್ಫರ್ಮ್ ಆಗಿಲ್ಲ.

ಇದೊಂದು ಪ್ರಶ್ನೆ ಎಲ್ಲಾ ಸಿನಿಪ್ರೇಕ್ಷಕರ ಮನಸ್ಸಿನಲ್ಲಿ ಮೂಡತ್ತೆ ಯಾಕಂದ್ರೆ ಸ್ಯಾಂಡಲ್​​ವುಡ್​ನಲ್ಲಿ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಿದ್ಧವಾಗಿರುವ ಹಲವು ಚಿತ್ರಗಳಿವೆ. ಅದು ಘಟಾನುಘಟಿ ನಾಯಕರ ಚಿತ್ರಗಳು.. ದರ್ಶನ ಅಭಿಯನದ ರಾಬರ್ಟ್ ಸಿನಿಮಾ ಶೂಂಟಿಂಗ್ ಮುಗಿಸಿ ,ಬಿಡುಗಡೆ ರೆಡಿಯಾಗಿದೆ. ಮತ್ತೊಂದು ಕಡೆ ದುನಿಯಾ ವಿಜಯ್ ನಿರ್ದೇಶನದ ಸಲಗ ಕೂಡ ರಿಲೀಸ್​ ರೆಡಿಯಾಗಿ ನಿಂತಿದೆ. ಇಷ್ಟೆಕ್ಕೆ ಲಿಸ್ಟ್​ಮುಗಿಯೋದಿಲ್ಲ. ಸುದೀಪ್ ಅಭಿನಯದ ಕೊಟಿಗೊಬ್ಬ-3 ಕೂಡ ಬಿಡುಗಡೆ ಸಿದ್ಧವಾಗಿದೆ. ಪುನಿತ್​ ರಾಜ್​ಕುಮಾರ್ ನಟಿಸಿರುವ ಯುವರತ್ನ ಸಿನಿಮಾ ಕೂಡ ಇತ್ತೀಚಿನ ಸಾಂಗ್ ಶೂಟಿಂಗ್ ಕಂಪ್ಲೀಟ್ ಮಾಡಿ ರಿಲೀಸ್ ರೆಡಿಯಾಗುತ್ತಿದೆ. ಮತ್ತೊಂದು ಕಡೆಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಅಭಿನಯದ ಭಜರಂಗಿ-2 ಸಿನಿಮಾಗಳು ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಆದರೆ, ಇಷ್ಟು ಚಿತ್ರಗಳು ಯಾವ ಸಿನಿಮಾ ಮೊದಲು ತೆರೆಮೇಲೆ ಬರುತ್ತೆ ಅನ್ನೋದು ಇನ್ನೂ ಡಿಸೈಡ್​ ಆಗಿಲ್ಲ.

ಇನ್ನು ಬಿಡುಗಡೆಗೆ ಸಿದ್ಧವಾಗಿರುವ ಚಿತ್ರಗಳಲ್ಲಿ ಒಂದು ಕಾಮನ್​ ಫಾಕ್ಟರ್ ಅಂದ್ರೆ ಎಲ್ಲಾ ಚಿತ್ರಗಳು ದಿಗ್ಗಜರು ನಟಿಸಿರುವ ಚಿತ್ರಗಳು. ದರ್ಶನ್, ಸುದೀಪ್​, ಶಿವರಾಜ್​ಕುಮಾರ್, ಪುನೀತ್​ ರಾಜ್​ಕುಮಾರ್​, ದುನಿಯಾ ವಿಜಯ್​ ಹೀಗೆ ಸ್ಟಾರ್ ನಟರು ನಟಿಸಿರುವ ಸಿನಿಮಾಗಳೇ ಸಾಲು ಸಾಲು ಇವೆ. ಹೀಗಾಗಿ ಯಾವ ಚಿತ್ರ ಮೊದಲು ಬಿಡುಗಡೆಯಾಗುತ್ತೆ ಅನ್ನೊದು ಮಿಲಿಯನ್ ಡಾಲರ್ ಪ್ರಶ್ನೆ. ಹೀಗಾಗಿ ನಿರ್ಮಾಪಕರು ಕೂಡ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಈ ಸಿನಿಮಾಗಳು ರಿಲೀಸ್​ ಡೇಟ್ ಕ್ಲಾಶ್ ಆಗದಂತೆ ನೋಡಿಕೊಳ್ಳಲು ನಿರ್ಧರಿಸಲಾಗಿದೆ.

ಇಂತದೊಂದು ಪ್ರಶ್ನೆ ಸಾಮಾನ್ಯವಾಗಿ ಮೂಡುತ್ತೆ. ಕೊರೊನಾ ಆರ್ಭಟ ಇನ್ನು ಕೂಡ ಕಡಿಮೆಯಾಗಿಲ್ಲ ಹೀಗಾಗಿ ಚಿತ್ರಮಂದಿರಕ್ಕೆ ಜನ ಬರ್ತಾರಾ ಅನ್ನೋದು ಮೊದಲ ಪ್ರಶ್ನೆ. ಜನ ಬಂದ್ರೂ ಮೊದಲಿನಂತೆ ಬರೋದಕ್ಕೆ ಸಾಧ್ಯವಿಲ್ಲ. ಒಂದು ಸಿನಿಮಾ ರಿಲೀಸ್​ ಆಗುತ್ತೆ ಅಂದ್ರೆ ಅಲ್ಲೊಂದು ಸಂಭ್ರಮ ಇರ್ತಿತ್ತು. ಥಿಯೇಟರ್​​ ಎದುರಿನಲ್ಲಿ ಜಾತ್ರೆಯೇ ನಡೆಯುತ್ತಿತ್ತು. ಹಬ್ಬದ ವಾತಾವರಣವೇ ನಿರ್ಮಾಣವಾಗುತ್ತಿತ್ತು. ಆದರೆ ಇನ್ಮುಂದೆ ಆ ದೃಶ್ಯಗಳನ್ನು ನೋಡಬೇಕು ಅಂದ್ರೆ ಸ್ವಲ್ಪ ಸಮಯ ಕಾಯಲೇಬೇಕು. ಹೀಗಾಗಿ ಹೊಸ ವಾತಾವರಣಕ್ಕೆ ಸಿನಿಪ್ರೇಕ್ಷಕರು ಒಗ್ಗಿಕೊಳ್ಳಲೇಬೇಕು. ಅದೇನೇ ಇರ್ಲಿ ಬರೋಬ್ಬರಿ ಏಳು ತಿಂಗಳ ಚಿತ್ರಮಂದಿರದ ಬಾಗಿಲು ತೆರೆಯಲಿದೆ. ಥಿಯೇಟರ್ ಓಪನ್ ಆದ ನಂತರ ಯಾವ ರೀತಿ ರೆಸ್ಪಾನ್ಸ್ ಸಿಗುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

Next Story

RELATED STORIES