Top

ಥಿಯೇಟರ್​ ರೀ ಓಪನ್: ರಿಲೀಸ್​ಗೆ ಎರಡು ಸಿನಿಮಾಗಳು ರೆಡಿ

  • ಜನ ಮೆಚ್ಚಿನ ಜಂಟಲ್​ಮ್ಯಾನ್ & ಲವ್​ ಮಾಕ್ಟೇಲ್ ರೀ ರಿಲೀಸ್.

ಥಿಯೇಟರ್​ ರೀ ಓಪನ್: ರಿಲೀಸ್​ಗೆ ಎರಡು ಸಿನಿಮಾಗಳು ರೆಡಿ
X

ಬಹುಶಃ ಸಿನಿಮಾರಂಗದ ಇತಿಹಾಸದಲ್ಲೇ ಇಷ್ಟು ದಿನ ಥಿಯೇಟರ್​ ಲಾಕ್​ಡೌನ್​ ಆಗಿದ್ದೇ ಇಲ್ಲ ಅನ್ನಿಸುತ್ತೆ. ಬರೋಬ್ಬರಿ 7 ತಿಂಗಳ ನಂತರ ಮುಚ್ಚಿದ್ದ ಥೀಯೇಟರ್ ಬಾಗಿಲುಗಳು ತೆರೆಯುತ್ತಿದೆ. ಥಿಯೇಟರ್​ ರೀ ಓಪನ್​ ಆಗ್ತಿದ್ದ ಹಾಗೇ ಯಾವ ಯಾವ ಸಿನಿಮಾಗಳು ಪ್ರದರ್ಶನರಗೊಳ್ಳುತ್ತೆ ಅನ್ನೋ ಕುತೂಹಲ ಎಲ್ಲರಿಗೂ ಇದ್ದೇ ಇತ್ತು. ಇದೀಗ ಎರಡು ಸಿನಿಮಾಗಳು ಥಿಯೇಟರ್ ಅಂಗಳಕ್ಕೆ ಲಗ್ಗೆ ಇಡೋಕ್ಕೆ ಸಜ್ಜಾಗಿದೆ.

ಅಕ್ಟೋಬರ್​ 15 ಕ್ಕೆ ಥಿಯೇಟರ್ ರೀ ಓಪನ್​ ಆಗುತ್ತಿದೆ. ಥಿಯೇಟರ್​ ಬಾಗಿಲು ತೆರೆಯುತ್ತಿದ್ದಂತೆ ಈಗಾಗಲೇ ಚಿತ್ರಮಂದಿರಗಳಲ್ಲಿ ಇರುವಂತಹ ಸಿನಿಮಾಗಳೇ ಪ್ರದರ್ಶನಗೊಳ್ಳುತ್ತೆ. ಬೇರೆ ಸಿನಿಮಾಗಳು ಸದ್ಯಕ್ಕೆ ರಿಲೀಸ್​ ಆಗೋದು ಕಷ್ಟ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಇದೀಗ 2 ಸಿನಿಮಾಗಳು ತೆರೆಗೆ ಬರ್ತಿವೆ. ಆದರೆ ಇದು ಹೊಸ ಸಿನಿಮಾಗಳಲ್ಲ. ಈಗಾಗಲೇ ಸಿನಿಮಾ ನೋಡಿ, ಜನ ಮೆಚ್ಚಿದ್ದು, ಕಾರಣಾಂತರಗಳಿಂದ ಥಿಯೇಟರ್​ನಿಂದ ಹೊರಹೋಗಿದ್ದ ಸಿನಿಮಾಗಳು. ಲವ್​ ಮಾಕ್ಟೇಲ್​ ಮತ್ತು ಜಂಟಲ್​ಮ್ಯಾನ್​ ಚಿತ್ರಗಳು ರೀ ರಿಲೀಸ್ ಆಗುತ್ತಿವೆ.

ಇದೇ ವರ್ಷ ಜನವರಿ 31ರಂದು ತೆರೆಕಂಡಿದ್ದ ಸಿನಿಮಾ ಲವ್​ ಮಾಕ್ಟೇಲ್. ಔಟ್​ ಅಂಡ್​ ಔಟ್ ಕ್ಯೂಟ್​ ಲವ್​ ಸ್ಟೋರಿ ಇದಾಗಿತ್ತು. ಈ ಚಿತ್ರದ ಲೀಡ್​​ರೋಲ್ನಲ್ಲಿ ಮಿಂಚಿದ್ದ ಡಾರ್ಲಿಂಗ್​ ಕೃಷ್ಣ ಮತ್ತು ಮಿಲನಾ ಜೋಡಿ ಮೋಡಿ ಮಾಡಿತ್ತು. ಅದರಲ್ಲೂ ಲವ್​ ಯು ಕಂದ ಹಾಡಂತೂ ಎಲ್ಲರ ಬಾಯಲ್ಲೂ ಗುನುಗುವಂತಾಗಿತ್ತು.


ಲವ್​ ಮಾಕ್ಟೇಲ್ ಸಿನಿಮಾ ನೋಡಿದ ಪ್ರತಿಯೊಬ್ಬರು ಚಿತ್ರವನ್ನ ಮೆಚ್ಚಿ ಕೊಂಡಾಡಿದರ ಆದರೆ ಬಹಳ ದಿನ ಈ ಸಿನಿಮಾ ಥಿಯೇಟರ್​ನಲ್ಲಿ ಉಳಿಯಲಿಲ್ಲ. ಆ ನಂತರ ಸಿನಿಮಾ ಓಟಿಟಿ ಫ್ಲಾಟ್​ಫಾರ್ಮ್​ನಲ್ಲಿ ರಿಲೀಸ್​ ಆಗಿದ್ದೇ ತಡ ಜನ ಹುಚ್ಚೆದ್ದು ಸಿನಿಮಾ ನೋಡಿದರು. ಪಾಸಿಟಿವ್​ ರೆಸ್ಪಾನ್ಸ್​ ಕೊಟ್ರು. ಸೋಶಿಯಲ್​ ಮೀಡಿಯಾ ಮತ್ತು ಮೌತ್ ಟಾಕ್​ ಮೂಲಕ ಸಿನಿಪ್ರಿಯರೇ ಚಿತ್ರವನ್ನ ಪ್ರಮೋಟ್ ಮಾಡೋಕ್ಕೆ ಶುರುಮಾಡಿದರು. ದೊಡ್ಡ ಪರದೆಯಲ್ಲಿ ಈ ಚಿತ್ರವನ್ನ ಮಿಸ್​ ಮಾಡಿಕೊಂಡ್ವಿ ಅಂತ ಬೇಸರ ವ್ಯಕ್ತಪಡಿಸಿದರು.

ಆದ್ರೀಗ ಸಿನಿಪ್ರಿಯರ ಆಸೆಯಂತೆ ಲವ್​ ಮಾಕ್ಟೇಲ್​ ಚಿತ್ರವನ್ನ ಮತ್ತೊಮ್ಮೆ ದೊಡ್ಡ ಪರದೆ ಮೇಲೆ ನೋಡೋ ಅವಕಾಶ ಸಿಗುತ್ತಿದೆ. ಅಕ್ಟೋಬರ್​ 15ಕ್ಕೆ ಥಿಯೇಟರ್​ ಓಪನ್​ ಆಗುತ್ತಿದೆ ಹಾಗೇ ಮರುದಿನವೇ ಅಂದ್ರೆ ಅಕ್ಟೋಬರ್​ 16 ಕ್ಕೆ ಲವ್​ ಮಾಕ್ಟೇಲ್​ ಸಿನಿಮಾ ಥಿಯೇಟರ್ ಅಂಗಳಕ್ಕೆ ಲಗ್ಗೆ ಇಡುತ್ತಿದೆ.

ಇನ್ನು ಇದೇ ವರ್ಷ ಫೆಬ್ರವರಿ 7 ರಂದು ತೆರೆಕಂಡಿದ್ದ ಮತ್ತೊಂದು ಉತ್ತಮ ಸಿನಿಮಾ ಜಂಟಲ್​ಮ್ಯಾನ್. ವಿಮರ್ಶಕರ ಮೆಚ್ಚುಗೆ ಪಡೆದಿದ್ದ ಈ ಸಿನಿಮಾ ಸಿನಿಪ್ರೇಕ್ಷಕರಿಂದಲೂ ಪಾಸಿಟಿವ್​ ರೆಸ್ಪಾನ್ಸ್​ ಪಡೆದುಕೊಂಡಿತ್ತು. ನಿಧಾನವಾಗಿ ಜನ ಥಿಯೇಟರ್​ ಕಡೆ ಮುಖ ಮಾಡುವಷ್ಟರಲ್ಲೇ ಸಿನಿಮಾ ಥಿಯೇಟರ್ ಅಂಗಳದಿಂದ ಹೊರಹೋದ ಕಾರಣ, ಚಿತ್ರತಂಡದಲ್ಲಿ ಬೇಸರ ಮನೆ ಮಾಡಿತ್ತು. ಆದ್ರೀಗ ಜಂಟಲ್​ಮ್ಯಾನ್ ಟೀಂ ಚಿತ್ರವನ್ನ ರೀ ರಿಲೀಸ್ ಮಾಡೋಕ್ಕೆ ನಿರ್ಧರಿಸಿದೆ.

ಪ್ರಜ್ವಲ್​ ದೇವರಾಜ್​ ಮತ್ತು ನಿಶ್ವಿಕಾ ನಾಯ್ಡು ಲೀಡ್ ರೋಲ್ನಲ್ಲಿ ಮಿಂಚಿದ್ದ ಈ ಸಿನಿಮಾದ ಕಥಾಹಂದರವೇ ವಿಭಿನ್ನವಾಗಿತ್ತು. ನವ ನಿರ್ದೇಶಕ ಜಡೇಶ್​ ಕುಮಾರ್ ಆ್ಯಕ್ಷನ್​ ಕಟ್ ಹೇಳಿದ್ದ ಈ ಚಿತ್ರಕ್ಕೆ ಗುರುದೇಶ್​ಪಾಂಡೆ ಬಂಡವಾಳ ಹಾಕಿದರು. ಸದ್ಯ ಜಂಟಲ್​ಮ್ಯಾನ್​ ಕೂಡ ರೀ ರಿಲೀಸ್​ ಆಗೋಕ್ಕೆ ರೆಡಿಯಾಗಿದ್ದು, ದಸರಾ ಹಬ್ಬಕ್ಕೆ ತೆರೆಗೆ ಬರ್ಲಿದೆ.

ಇನ್ನು ಈ ಎರಡು ಸಿನಿಮಾಗಳು ಒಟ್ಟಾರೆ ಎಷ್ಟು ಥಿಯೇಟರ್​ಗಳಲ್ಲಿ ರಿಲೀಸ್​ ಆಗಲಿದೆ. ಹಾಗೂ ಮೇನ್​ ಥಿಯೇಟರ್ ಯಾವುದು ಅನೋದರ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ. ಯಾರೆಲ್ಲಾ ಈ ಎರಡು ಸಿನಿಮಾಗಳನ್ನ ದೊಡ್ಡಪರದೆ ಮೇಲೆ ಮಿಸ್​ ಮಾಡಿಕೊಂಡಿದ್ರೂ, ಅವರಿಗೆ ಮತ್ತೊಮ್ಮೆ ಸಿನಿಮಾ ನೋಡೋ ಅವಕಾಶ ಸಿಗುತ್ತಿದೆ.

Next Story

RELATED STORIES