Top

ರೋಚಕತೆ ಹುಟ್ಟಿಸಿದೆ ಆರ್​ಸಿಬಿ vs ಪಂಜಾಬ್​ ಕಿಂಗ್ಸ್​ ಹಣಾಹಣಿ

ಇತ್ತ ಬೆಂಗಳೂರಿನ ಆರ್​ಸಿಬಿ ತಂಡ ಒಂದು ಕಡೆ ಮತ್ತೊಂದ್ಕಡೆ ನಮ್ಮ ಕನ್ನಡದ ಹುಡುಗರು ಪಂಜಾಬ್​ ಕಿಂಗ್ಸ್​ನಲ್ಲಿದ್ದಾರೆ. ಹಾಗಾಗಿ ಈ ಪಂದ್ಯದಲ್ಲಿ ಯಾರಿಗೆ ಸಪೋರ್ಟ್ ಮಾಡಬೇಕು ಅನ್ನೋದೇ ಕಷ್ಟ.

ರೋಚಕತೆ ಹುಟ್ಟಿಸಿದೆ ಆರ್​ಸಿಬಿ vs ಪಂಜಾಬ್​ ಕಿಂಗ್ಸ್​ ಹಣಾಹಣಿ
X

ಈ ಬಾರಿಯ ಐಪಿಎಲ್​ ಮ್ಯಾಚ್ ದಿನದಿಂದ ದಿನಕ್ಕೆ ರೋಚಕತೆ ಹೆಚ್ಚಿಸ್ತಿದೆ. ಅದರಲ್ಲೂ ಗುರುವಾರದ ಆರ್​ಸಿಬಿ vs ​ ಕಿಂಗ್ಸ್​ 11 ಪಂಜಾಬ್​ ಮ್ಯಾಚ್​ ಬಗ್ಗೆ ಅಂತೂ ದೊಡ್ಡ ಮಟ್ಟದ ಹುಟ್ಟುಹಾಕಿದೆ. ಈ ಬಗ್ಗೆ ಕ್ರಿಕೆಟ್ ಪ್ರಿಯರು ಮಾತ್ರವಲ್ದೆ, ಸ್ವತಃ ಸ್ಯಾಂಡಲ್​ವುಡ್​ ಬಾದ್ಶಾ ಕಿಚ್ಚ ಸುದೀಪ್​ ಕೂಡ ಉತ್ಸುಕರಾಗಿದ್ದಾರೆ.

ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮ. ಅದರಲ್ಲೂ ಆರ್​ಸಿಬಿ ಅಂದ್ರೆ ನಮ್ಮ ಕರ್ನಾಟಕ ಕ್ರಿಕೆಟ್​ ಪ್ರಿಯರಿಗೆ ಹೆಚ್ಚೇ ಪ್ರೀತಿ. ಈ ಸಲ ಕಪ್​ ನಮ್ದೆ, ಜೈ ಆರ್​ಸಿಬಿ ಅಂತ ಆರ್​ಸಿಬಿಗೆ ಸಪೋರ್ಟ್​ ಮಾಡುತ್ತಿದ್ದಾರೆ. ಸಾಮಾನ್ಯ ಕ್ರಿಕೆಟ್ ಪ್ರಿಯರು ಮಾತ್ರವಲ್ಲ ಸ್ಯಾಂಡಲ್​ವುಡ್​ ಸೆಲೆಬ್ರೆಟಿಗಳು ಕೂಡ ಈ ಬಾರಿ ಆರ್​ಸಿಬಿ ಗೆ ಚಿಯರ್​ಅಪ್ ಮಾಡುತ್ತಿದ್ದಾರೆ​. ಈಗಾಗಲೇ ಆರ್​ಸಿಬಿ ಪರವಾದ ಸಾಕಷ್ಟು ಸಾಂಗ್ಸ್​ ಕೂಡ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಸ್ಯಾಂಡಲ್​ವುಡ್​ನಲ್ಲಿ ಕ್ರಿಕೆಟ್ ಅಂದಾಕ್ಷಣ ನೆನಪಾಗೋದು ಕಿಚ್ಚ ಸುದೀಪ್. ಸಿನಿಮಾದಷ್ಟೇ ಕ್ರಿಕೆಟ್​​ನ್ನ ಪ್ರೀತಿ ಮಾಡ್ತಾರೆ. ಸಿಸಿಎಲ್​ ಗೆ ಕನ್ನಡದಲ್ಲಿ ಒಂದೊಳ್ಳೆ ತಂಡ ಕಟ್ಟಿದ್ದೇ ಕಿಚ್ಚ. ಹಾಗಾಗಿ ಕಿಚ್ಚನಿಗೆ ಕ್ರಿಕೆಟ್ ಅಂದ್ರೆ ಸ್ವಲ್ಪ ಜಾಸ್ತಿನೇ ಇಂಟ್ರೆಸ್ಟ್. ಹಾಗಾಗಿ ಐಪಿಎಲ್​ ಮ್ಯಾಚ್ ಫಾಲೋ ಮಾಡ್ತಿರೋ ಕಿಚ್ಚ ಇವತ್ತಿನ ಆರ್​ಸಿಬಿ ವರ್ಸಸ್ ಪಂಜಾಬ್​ ಕಿಂಗ್ಸ್​ ಪಂದ್ಯದ ಬಗ್ಗೆ ಟ್ವೀಟ್​ ಒಂದನ್ನ ಮಾಡಿದ್ದಾರೆ. ಇತ್ತ ಬೆಂಗಳೂರಿನ ಆರ್​ಸಿಬಿ ತಂಡ ಒಂದು ಕಡೆ ಮತ್ತೊಂದ್ಕಡೆ ನಮ್ಮ ಕನ್ನಡದ ಹುಡುಗರು ಪಂಜಾಬ್​ ಕಿಂಗ್ಸ್​ನಲ್ಲಿದ್ದಾರೆ. ಹಾಗಾಗಿ ಈ ಪಂದ್ಯದಲ್ಲಿ ಯಾರಿಗೆ ಸಪೋರ್ಟ್ ಮಾಡಬೇಕು ಅನ್ನೋದೇ ಕಷ್ಟ ಅನ್ನೋ ಮಾತನ್ನ ಕಿಚ್ಚ ಹೇಳಿದ್ದಾರೆ.

ಇನ್ನು ಟ್ವಿಟ್​​ ಮುಂದುವರೆಸಿರೋ ಕಿಚ್ಚ ಸುದೀಪ್ ಇವತ್ತಿನ ಮ್ಯಾಚ್ ಕನಾರ್ಟಕದ ಕ್ರಿಕೆಟ್ ಪ್ರಿಯರಿಗೆ ಸ್ವಲ್ಪ ಕಷ್ಟವಾಗಲಿದೆ. ಆದರೂ ಈ ಮ್ಯಾಚ್ ನೋಡಿ ಎಂಜಾಯ್​ ಮಾಡಬೇಕಿದೆ ಅಂತ ಹೇಳಿದ್ದಾರೆ..ಹಾಗೇ ವಿರಾಟ್​ ಕೊಹ್ಲಿ ಮತ್ತು ಪಂಜಾಬ್​ ಆಟಗಾರ ಕನ್ನಡಿಗ ಮಾಯಾಂಕ್​ ಅಗರ್ವಾಲ್​ ಇಬ್ಬರಿಂದಲೂ ಸೆಂಚೂರಿಯ ನಿರೀಕ್ಷೆ ಇದೆ ಅಂತ ಟ್ವೀಟ್ ಮಾಡಿದ್ದಾರೆ ಕಿಚ್ಚ.

ಸದ್ಯ ಇವತ್ತಿನ ಆರ್​ಸಿಬಿ ವರ್ಸಸ್ ಕಿಂಗ್ಸ್​ ಇಲೆವೆನ್​ ಪಂಜಾಬ್ ಮ್ಯಾಚ್​ ನೋಡೋಕ್ಕೆ ಇಡೀ ಕನಾರ್ಟಕವೇ ಕಾದು ಕೂತಿದೆ. ಐಪಿಎಲ್​ ಸರಣಿಯಲ್ಲಿ , ಕರ್ನಾಟಕದ ಕ್ರಿಕೆಟ್ ಪ್ರಿಯರಿಗೆ ಇದೊಂದು ರೋಚಕ ಮ್ಯಾಚ್ ಆಗೋದ್ರಲ್ಲಿ ನೋ ಡೌಟ್.

Next Story

RELATED STORIES