Top

ಕನ್ನಡದ ಸ್ಟಾರ್​ ಆ್ಯಂಕರ್​ ಅನುಶ್ರೀ ಬೆಳೆದು ಬಂದ ಹಾದಿ

ಅನುಶ್ರೀ ರಾತ್ರಿ ಹಗಲಾದ್ರೊಳಗೆ ಸ್ಟಾರ್ ಆದವರಲ್ಲ, ಅನುಶ್ರೀ ಬೆಳೆದು ಬಂದ ಹಾದಿಯಲ್ಲಿ ಇದ್ದಿದ್ದು ಬರಿ ಕಳ್ಳು ಮುಳ್ಳಷ್ಟೆ.

ಕನ್ನಡದ ಸ್ಟಾರ್​ ಆ್ಯಂಕರ್​ ಅನುಶ್ರೀ ಬೆಳೆದು ಬಂದ ಹಾದಿ
X

ಕಿರುತೆರೆಯ ಸ್ಟಾರ್ ನಿರೂಪಕಿ ಅನುಶ್ರೀ ಸದಾ ಹಸನ್ಮುಖಿ. ಆದರೆ, ಇವತ್ತು ಅನುಶ್ರೀ ಬಿಕ್ಕಿ ಬಿಕ್ಕಿ ಅಳುತ್ತಾ, ತಮ್ಮನ್ನ ಹರಸಿ ಹಾರೈಸಿದ ಜನರೆದುರು ತಮ್ಮ ನೋವನ್ನ ಹಂಚಿಕೊಂಡಿದ್ದಾರೆ. ನಾನು ಅಪರಾಧಿ ಅಲ್ಲ ಅಂತ ಕೂಗಿ ಹೇಳುತ್ತಿದ್ದಾರೆ.

ಸೆಪ್ಟೆಂಬರ್ 24, 2020 ನನ್ನ ಬದುಕಿನ ಕರಾಳ ದಿನ. 12 ವರ್ಷದ ಹಿಂದೆ ನಾನು ಒಂದು ಡ್ಯಾನ್ಸ್ ರಿಯಾಲಿಟಿ ಶೋ ಗೆದ್ದಾಗ ನಾನೆಂದೂ ಅಂದುಕೊಂಡಿರ್ಲಿಲ್ಲ. ಮತ್ತೆ ಅದೇ ದಿನ ನನ್ನ ಜೀವನದಲ್ಲಿ ಮುಳ್ಳಾಗಿ ಬರುತ್ತೆ ಅಂತ. ಇದು ಅನುಶ್ರೀ ಬೇಸರದ ಮಾತು. ನೋವನ್ನು ನುಂಗಲಾಗದೆ, ಕಣ್ಣೀರು ಹಾಕುತ್ತಾ, ದುಖಃದಿಂದ ಅನುಶ್ರೀ ಗದ್ಗಿತಿರಾಗಿದ್ದಾರೆ. ಸದಾ ಪಟನೇ ಪಟನೇ ಮಾತಾಡಿ, ಜನರನ್ನು ನಗಿಸುತ್ತಿದ್ದ ಮಾತಿನ ಮಲ್ಲಿಯ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿದೆ. ದುಖಃ ಉಮ್ಮಳಿಸಿ ಬರ್ತಿದೆ.

'ನೋಟಿಸ್ ಬಂದಿದ್ದು ಬೇಸರವಿಲ್ಲ, ನಾನು ಅಪರಾಧಿಯಲ್ಲ'

ಡ್ರಗ್​ ನಂಟಿನ ವಿಚಾರದಲ್ಲಿ ಅಶುಶ್ರೀಗೆ ನೋಟಿಸ್​ ನೀಡಲಾಗಿತ್ತು. ಇದಾದ ನಂತರ ಕೇಳಿ ಬಂದ ಕೆಲವೊಂದು ಮಾತುಗಳು ಅನುಶ್ರೀ ಮನಸ್ಸಿಗೆ ತೀವ್ರವಾಗಿ ಘಾಸಿ ಮಾಡಿದೆ. ಈ ಬಗ್ಗೆ ಖುದ್ದು ಅನುಶ್ರೀ ತಮ್ಮ ನೋವನ್ನು ಜನರ ಮುಂದೆ ಹಂಚಿಕೊಂಡಿದ್ದಾರೆ. ನನಗೆ ನೋಟಿಸ್​ ಬಂದಾಗ ಬೇಸರವಾಗಿರ್ಲಿಲ್ಲ. ನಾನು ಅಪರಾಧಿಯಲ್ಲ. ಆದರೆ, ನನ್ನನ್ನು ಬಿಂಬಿಸಿದ ಬಗೆಗೆ ನನಗೆ ನೋವು ತಂದಿದೆ. ನನ್ನ ಕುಟಂಬದವರ ನೆಮ್ಮದಿ ಹಾಳು ಮಾಡಿದೆ ಅಂತ ಅನುಶ್ರೀ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಯಾವುದೇ ವೇದಿಕೆಯಾದ್ರೂ, ಸದಾ ನಗಿಸುತ್ತಿದ್ದ ಅನುಶ್ರೀ ಅಂತರಾಳದ ನೋವು. ಅದು ಕಣ್ಣೀರ ರೂಪದಲ್ಲಿ ಹೊರಬಂದಿದೆ. ತನ್ನ ಮೇಲೆ ಏನೇ ಆರೋಪ ಬಂದ್ರೂ ತನ್ನ ಮೇಲೆ ನಂಬಿಕೆ ಇಟ್ಟ ಕರುನಾಡಿನ ಜನರಿಗೆ ಅನುಶ್ರೀ ಅಳುತ್ತಲೇ ಧನ್ಯವಾದ ಹೇಳಿದ್ದಾರೆ. ಸದಾ ಉತ್ಸಾಹದಿಂದ ಪುಟಿಯುತ್ತಿದ್ದ ಅನುಶ್ರೀ ಕುಗ್ಗಿ ಹೋಗಿದ್ದಾರೆ. ಊಹಾಪೋಹಗಳ ಸುದ್ದಿಗಳು ಅನುಶ್ರೀ ಮನಸ್ಸಿನಲ್ಲಿ ಬಿರುಗಾಳಿ ಎಬ್ಬಿಸಿವೆ.

ಅನುಶ್ರೀ ಬದುಕಿನಲ್ಲಿ ಈ ಆರೋಪ ದೊಡ್ಡ ಪರಿಣಾಮ ಬೀರಲು ಕೂಡ ಕಾರಣ ಇದೆ. ಅನುಶ್ರೀ ರಾತ್ರಿ ಹಗಲಾದ್ರೊಳಗೆ ಸ್ಟಾರ್ ಆದವರಲ್ಲ. ಅನುಶ್ರೀ ಬೆಳೆದು ಬಂದ ಹಾದಿಯಲ್ಲಿ ಇದ್ದಿದ್ದು ಬರಿ ಕಳ್ಳು ಮುಳ್ಳಷ್ಟೆ. ಅನುಶ್ರೀ ಇವತ್ತು ಕನ್ನಡದ ನಂಬರ್ 1 ನಿರೂಪಕಿಯಾಗಿದ್ದಾರೆ. ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ. ಆದರೆ, ಒಂದು ಕಾಲದಲ್ಲಿ ತುತ್ತು ಅನ್ನಕ್ಕೂ ಸಂಕಷ್ಟದ ಪರಿಸ್ಥಿತಿ. ನಿನ್ನ ಜೊತೆ ನಾನಿದ್ದೇನೆ ಅಂತ ಹೆಗಲಿಗೆ ಹೆಗಲಿ ಕೊಡುವವರು ಕೂಡ ಇರ್ಲಿಲ್ಲ. ಆಸರೆಯಾಗ ಬೇಕಿದ್ದ ಅಪ್ಪನ ನೆರಳು ಕೂಡ ಇರ್ಲಿಲ್ಲ.

ಅನುಶ್ರೀ ಮನೆಯ ಹಿರಿಯ ಮಗಳು ಆದ ಕಾರಣ, ಚಿಕ್ಕ ವಯಸ್ಸಿನಲ್ಲಿ ಮನೆಯ ಜವಾಬ್ದಾರಿಯೊಂದಿಗೆ ಅಮ್ಮ ಮತ್ತು ತಮ್ಮನನ್ನು ಸಾಕುವ ಜವಾಬ್ದಾರಿ ಹೊತ್ತುಕೊಂಡರು. ಈ ದೊಡ್ಡ ಜವಾಬ್ಧಾರಿಯನ್ನು ನಿಭಾಯಿಸಲು ಅನುಶ್ರೀ ಓದನ್ನು ನಿಲ್ಲಿಸಬೇಕಾಯಿತು. ಅಮ್ಮ ಮತ್ತು ತಮ್ಮನನ್ನು ಸಾಕಲು ಒಂದು ಹೊತ್ತಿನ ಊಟಕ್ಕಾಗಿ ಚಾಕೋಲೇಟ್​ಗೆ ​ ರ್ಯಾಪರ್​ ಸುತ್ತುವ ಕೆಲಸ ಮಾಡಿ ಜೀವನ ನಡೆಸಿದ್ದು ಇದೆ. ಶಾಲೆಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಸ್ಟೇಜ್ ಮೇಲೆ ಆ್ಯಂಕರಿಂಗ್ ಮಾಡಿ ಸೈ ಎನಿಸಿಕೊಂಡಿದ್ದ ಅನುಶ್ರೀ ನಂತರ ಮಾತನ್ನೇ ಬಂಡವಾಳ ಮಾಡಿಕೊಂಡರು.

ಆ್ಯಂಕರಿಗ್​ಗೆ ಅನುಶ್ರೀ ಪಡೆದ ಮೊದಲ ಸಂಭಾವನೆ 250 ಮಾತ್ರ

ಇವತ್ತು ಅನುಶ್ರೀ ಸ್ಟಾರ್ ನಿರೂಪಕಿ ಯಾಗಿರಬಹುದು. ಆದರೆ, ಅವರು ಮೊದಲ ಬಾರಿಗೆ ಬೆಂಗಳೂರಿಗೆ ಬಂದು ಖಾಸಗಿ ವಾಹಿನಿಯೊಂದರಲ್ಲಿ ಆ್ಯಂಕರಿಂಗ್ ಮಾಡಿದಾಗ ಅವರಿಗೆ ಸಿಕ್ಕಿದ್ದು ಬರೀ 250 ರೂಪಾಯಿ ಮಾತ್ರ. ಅದು ಕೂಡ ಒಂದು ಎಪಿಸೋಡ್​​ಗೆ. ದುರಂತ ಅಂದ್ರೆ ಈ ರೀತಿ ತಿಂಗಳಿಗೆ ಕೇವಲ ನಾಲ್ಕು ಎಪಿಸೋಡ್​​ಗಳು ಸಿಕ್ತಾ ಇತ್ತು ಅದರಲ್ಲೇ ಜೀವನ ಸಾಗಿಸಬೇಕಿತ್ತು.

ಯಾರು ಗೊತ್ತಿಲ್ಲದ ಊರಿನಲ್ಲಿ ಈ ರೀತಿ ಬದುಕೋದು ಅಷ್ಟು ಸುಲಭವಲ್ಲ. ಬೇರೆ ಯಾರೇ ಆಗಿದ್ರೂ ಮತ್ತೆ ಮಂಗಳೂರು ಬಸ್​ ಹತ್ತಿ ಹೋಗ್ತಾ ಇದ್ರೋ ಏನೋ ಗೊತ್ತಿಲ್ಲ. ಅನುಶ್ರೀ ಮಾತ್ರ ಹಾಗೆ ಮಾಡಲಿಲ್ಲ. ಸಾಧಿಸುವ ಛಲದಲ್ಲೆ ಕಷ್ಟದ ದಿನಗಳನ್ನು ಕಳೆದರು. ಮುಂದೆ ಇದೇ ಛಲ ಅನುಶ್ರೀ ಬದುಕನ್ನು ಬದಲಾಯಿಸಿ ಬಿಡುತ್ತೆ. ಅನುಶ್ರೀ ಕನ್ನಡ ಟೆಲಿವಿಶನ್ ಲೋಕದ ಧ್ರುವತಾರೆಯಾಗಿ ಮಿಂಚುತ್ತಿದ್ದಾರೆ.

ಅನುಶ್ರೀಗೆ ಡ್ರಗ್​​​​​​​​​​​ ನಂಟಿನ ಆರೋಪದಲ್ಲಿ ಸಿಸಿಬಿ ನೋಟಿಸ್​ ಬಂದಿದ್ದು ನಿಜ. ಹಾಗಂತ ಅವರು ಅಪರಾಧಿಯಂತಲ್ಲ. ತನಿಖೆಯಲ್ಲಿ ಪ್ರೂವ್ ಆದರೆ ಮಾತ್ರ ಅವರು ಅಪರಾಧಿಯಾಗ್ತಾರೆ. ಅದಕ್ಕೆ ಕಾನೂನಿದೆ ಕಾನೂನು ಅದನ್ನು ಡಿಸೈಡ್​ ಮಾಡುತ್ತೆ. ತಪ್ಪು ಯಾರೇ ಮಾಡಿದ್ರೂ ಅದು ತಪ್ಪೇ. ಅನುಶ್ರೀ ತಪ್ಪು ಮಾಡಿದ್ರೂ ಕಾನೂನು ಶಿಕ್ಷೆ ಕೊಡುತ್ತೆ. ಆದರೆ, ಸದ್ಯ ಬರುತ್ತಿರುವ ಊಹಾಪೋಹಗಳು ಅನುಶ್ರೀ ಮನಸ್ಸನ್ನು ಘಾಸಿ ಮಾಡಿದೆ. ಎಲ್ಲಾ ಕಷ್ಟಗಳನ್ನು ಮೆಟ್ಟಿ ನಿಂತ ಹೆಣ್ಣುಮಗಳು ಈ ಕಷ್ಟಕಾಲದಿಂದಲೂ ಪಾರಾಗಿ ಬರಲಿ ಅಂತ ಅಭಿಮಾನಿಗಳು ಹಾರೈಸುತ್ತಿದ್ದಾರೆ.

Next Story

RELATED STORIES