Top

ವರ್ಕ್​​ಔಟ್​ ಮಾಡುವುದಕ್ಕೆ ಮನೆಗಿಂತ ಜಿಮ್​ ಉತ್ತಮ

ಸಿನಿಮಾ ಸ್ಟಾರ್ಸ್​​ಗಳು ಆತಂಕದ ನಡುವೆಯೇ ಕಸರತ್ತು ಮಾಡಿ ಫಿಟ್ನೆಸ್​ ಕಾಯ್ದುಕೊಳ್ಳಲು ಮುಂದಾಗಿದ್ದಾರೆ.

ವರ್ಕ್​​ಔಟ್​ ಮಾಡುವುದಕ್ಕೆ ಮನೆಗಿಂತ ಜಿಮ್​ ಉತ್ತಮ
X

ಬರೋಬ್ಬರಿ 5 ತಿಂಗಳಿನಿಂದ ಬಂದ್ ಆಗಿದ್ದ ಜಿಮ್​ಗಳು ಆಗಷ್ಟ್​ ಮೊದಲ ವಾರದಲ್ಲಿ ಓಪನ್​ ಆಗಿದೆ. ಮನೆಯಲ್ಲೂ ಕೂತೂ ಕೂತು ಸಾಕಾಗಿದ್ದ ಸೆಲೆಬ್ರಿಟಿಗಳು ಮತ್ತೆ ಫಿಟ್​ನೆಸ್​​ ಸೆಂಟರ್​ಗೆ ಅಡಿ ಇಟ್ಟಿದ್ದಾರೆ. ಆತಂಕದ ನಡುವೆಯೇ ಕಸರತ್ತು ಮಾಡಿ ಫಿಟ್ನೆಸ್​ ಕಾಯ್ದುಕೊಳ್ಳಲು ಮುಂದಾಗಿದ್ದಾರೆ. ಹಾಗಾದ್ರೆ, ಯಾರೆಲ್ಲ ಮತ್ತೆ ಜಿಮ್​ನಲ್ಲಿ ವರ್ಕ್​ಔಟ್​ ಸ್ಟಾರ್ಟ್​ ಮಾಡಿದ್ದಾರೆ.

ಕೊರೊನಾ ಹಾವಳಿ ಮತ್ತು ಲಾಕ್​ಡೌನ್​ ಕಾರಣ ಕಳೆದ ಐದು ತಿಂಗಳಿನಿಂದ ಸೆಲೆಬ್ರೆಟಿಗಳು ಮನೆ ಬಿಟ್ಟು ಹೊರ ಬರಲೇಯಿಲ್ಲ. ಇದೀಗ ನಿಧಾನವಾಗಿ ಸಿನಿಮಾ ಚಟುವಟಿಕೆಗಳು ಶುರುವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಜಿಮ್​ಗಳನ್ನ ಓಪನ್ ಮಾಡಿರೋದು ಸ್ಯಾಂಡಲ್​ವುಡ್​ ತಾರೆಯರಿಗೆ ಸಂತಸ ತಂದಿದೆ.

ಅನ್​ಲಾಕ್ 3.Oನಲ್ಲಿ ಜಿಮ್​ ತೆರೆಯಲು ಅವಕಾಶ ಸಿಕ್ಕಿದೆ. ಆಗಷ್ಟ್ 5ರಿಂದ ಫಿಟ್ನೆಸ್ ಸೆಂಟರ್​ಗಳ ಬಾಗಿಲು ತೆರೆಯಲಾಗಿದೆ. ಜಿಮ್​ಗಳಿಲ್ಲದೇ ಮಾನಸಿಕವಾಗಿ ಕುಗ್ಗಿದ್ದವರು ಮತ್ತೆ ಕಸರತ್ತು ನಡೆಸೋಕ್ಕೆ ಪ್ರಾರಂಭಿಸಿದ್ದಾರೆ. ಅದಕ್ಕೆ ಸೆಲೆಬ್ರೆಟಿಗಳು ಹೊರತಲ್ಲ. ನಟ, ಕಿರುತೆರೆ ನಿರ್ಮಾಪಕ ಸೃಜನ್​ ಲೋಕೇಶ್​, ನಟ ಜಯರಾಮ್ ಕಾರ್ತಿಕ್​​, ನಟಿ ಮೇಘನಾ ಗಾಂವ್ಕರ್​ ಸೇರಿದಂತೆ ಹಲವರು ಜಿಮ್​ಗಳತ್ತ ಮುಖ ಮಾಡಿದ್ದಾರೆ.

ಸಿನಿಮಾ ಕಲಾವಿದರಿಗೆ ಫಿಟ್ನೆಸ್​ ಬಹಳ ಮುಖ್ಯ. ಫಿಟ್​ ಆಗಿದ್ರೆ, ಮನಸ್ಸು ಮತ್ತು ಆರೋಗ್ಯ ಉತ್ತಮವಾಗಿರುತ್ತದೆ. ಆದರೆ, ಕೊರೊನಾ ಹಾವಳಿ ಶುರುವಾದ ಮೇಲೆ ಜಿಮ್​ಗಳನ್ನ ಬಂದ್​ ಮಾಡಲಾಗಿತ್ತು. ಬರೋಬ್ಬರಿ ಐದು ತಿಂಗಳ ನಂತರ ಮತ್ತೆ ತೆರೆಯಲು ಅವಕಾಶ ನೀಡಲಾಗಿದೆ. ಒಂದಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಂಡು ವರ್ಕೌಟ್​ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಕೆಲ ಸೆಲೆಬ್ರೆಟಿಗಳು ಲಾಕ್​ಡೌನ್​ ಸಮಯದಲ್ಲೂ ಮನೆಯಲ್ಲಿ ವರ್ಕೌಟ್​ ಮಾಡುತ್ತಿದ್ದರು. ಆದ್ರೀಗ ಜಿಮ್​ಗಳಲ್ಲಿ ಕಸರತ್ತು ಶುರು ಮಾಡಿದ್ದಾರೆ.

ಸೃಜನ್​ ಲೋಕೇಶ್​ ಮತ್ತೆ ಜಿಮ್​ನಲ್ಲಿ ಬೆವರಿಳಿಸಲು ಶುರು ಮಾಡಿದ್ದಾರೆ. ಲಾಕ್​ಡೌನ್​ ಸಮಯದಲ್ಲಿ ಜಿಮ್​ ಮಿಸ್​ ಮಾಡಿಕೊಳ್ತಿರೋದಾಗಿ ಅವರು ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಐದು ತಿಂಗಳ ನಂತ್ರ ಜಿಮ್​ಗೆ ವಾಪಸ್​ ಆಗಿದ್ದೀನಿ, ಅನ್ನೋದನ್ನ ಫೋಟೋ ಸಮೇತ ಇನ್​ಸ್ಟಾಗ್ರಾಂನಲ್ಲಿ ಸೃಜನ್​ ಲೋಕೇಶ್​ ಪೋಸ್ಟ್​​​ ಮಾಡಿದ್ದಾರೆ.

ಮನೆಯಲ್ಲಿ ವರ್ಕೌಟ್​ ಮಾಡುವುದಕ್ಕೆ ಪೂರಕ ವಾತಾವರಣ ಸಿಗೋದಿಲ್ಲ. ಇನ್ನು ಕಡಿಮೆ ಎಕ್ವಿಪ್‌ಮೆಂಟ್ಸ್‌ ಇರ್ತಾವೆ. ಆದರೆ, ಜಿಮ್​ ಹಾಗಲ್ಲ. ಸಾಕಷ್ಟು ಎಕ್ವಿಪ್‌ಮೆಂಟ್ಸ್‌ ಇರುತ್ತವೆ. ಸುತ್ತಾಮುತ್ತಾ ಎಲ್ಲರೂ ವರ್ಕ್​ಔಟ್​ ಮಾಡುತ್ತಿದ್ದರೆ, ನಮಗೂ ಜೋಶ್​ ಬರುತ್ತೆ ಅಂತಾರೆ ನಟ ಜಯರಾಮ್​ ಕಾರ್ತಿಕ್. ಕೊರೊನಾ ಭೀತಿ ಹಿನ್ನಲೆಯಲ್ಲಿ ಜಿಮ್​ ಮ್ಯಾನೇಜ್​ಮೆಂಟ್​ ಎಷ್ಟೆ ಮುನ್ನಚ್ಚರಿಕೆ ತೆಗೆದುಕೊಂಡರು, ನಮ್ಮ ಜಾಗ್ರತೆಯಲ್ಲಿ ನಾವಿರಬೇಕು ಅಂತಾರೆ.

ಜಿಮ್​ಗಳು ತೆಗೆದುಕೊಂಡಿರುವ ಜಾಗ್ರತೆ ಬಗ್ಗೆ ನಟಿ ಮೇಘನಾ ಗಾಂವ್ಕರ್​ ಸಂತಸ ವ್ಯಕ್ತಪಡಿಸಿದ್ದಾರೆ. ಬೇರೆಯವರು ವರ್ಕೌಟ್​ ಮಾಡೋದನ್ನ ನೋಡುತ್ತಿದ್ದರೆ, ನಮಗೂ ಸ್ಪೂರ್ತಿ ಸಿಗುತ್ತೆ ಜೊತೆಗೆ ಜಿಮ್​ ಟ್ರೈನರ್​ಗಳು ಇರ್ತಾರೆ. ಹಾಗಾಗಿ ವರ್ಕೌಟ್​ ಮಾಡಲು ಜಿಮ್​ ಬೆಸ್ಟ್​ ಅನ್ನೋದು ಅವರ ಮಾತು. ಕೊರೊನಾ ಭಯ ಇದ್ದರೂ, ಗಾಬರಿಯಾಗುವ ಅಗತ್ಯವಿಲ್ಲ ಅನ್ನೋ ಕಾರಣಕ್ಕೆ ಮೇಘನಾ ಗಾಂವ್ಕರ್​ ಫಿಟ್ನೆಸ್​ ಸೆಂಟರ್​ಗೆ ಹೋಗುತ್ತಿದ್ದಾರೆ. ಒಟ್ಟಾರೆಯಾಗಿ ಮತ್ತೆ ಜಿಮ್​ ಓಪನ್​ ಆಗಿರೋದು ಸ್ಯಾಂಡಲ್​ವುಡ್​ ಮಂದಿಗೆ ಖುಷಿ ತಂದಿದೆ.

Next Story

RELATED STORIES