Top

ಅನ್ನದಾತರರ ಏಳಿಗೆಗೆ ಕೈ ಜೋಡಿಸಿದ ಚಾಲೆಂಜಿಂಗ್ ಸ್ಟಾರ್

ಕೃಷಿ ಇಲಾಖೆ ರಾಯಭಾರಿಯಾಗಿ ದರ್ಶನ್ ನಿಸ್ವಾರ್ಥ ಸೇವೆ

ಅನ್ನದಾತರರ ಏಳಿಗೆಗೆ ಕೈ ಜೋಡಿಸಿದ ಚಾಲೆಂಜಿಂಗ್ ಸ್ಟಾರ್
X

ಚಾಲೆಂಜಿಂಗ್ ಸ್ಟಾರ್ ದರ್ಶನ್​ರಿಗೆ ಫಾರ್ಮಿಂಗ್, ವೈಲ್ಡ್​ ಲೈಫ್​ ಫೋಟೊಗ್ರಫಿ ಅಂದ್ರೆ ತುಂಬಾನೇ ಇಷ್ಟ. ಅದರ ಜೊತೆಗೆ ದಚ್ಚು ಪ್ರಾಣಿಪ್ರಿಯ ಕೂಡ ಹೌದು. ಈಗಾಗಲೇ ಅರಣ್ಯ ಇಲಾಖೆಯ ರಾಯಭಾರಿಯಾಗಿರೋ ಡಿ ಬಾಸ್​ ಈಗ ಮತ್ತೊಂದು ಸರ್ಕಾರಿ ಇಲಾಖೆಯ ರಾಯಭಾರಿ ಆಗಿದ್ದಾರೆ.

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್, ಸ್ಯಾಂಡಲ್​​ವುಡ್​ನ ಸೂಪರ್ ಸ್ಟಾರ್, ಕನ್ನಡ ಚಿತ್ರರಂಗದ ಯಜಮಾನ. ದಚ್ಚು ಸಿನಿಮಾ ಅಂದ್ರೆ ಅಭಿಮಾನಿಗಳು ಜಾತ್ರೆಯನ್ನೆ ಮಾಡ್ತಾರೆ. ಇಂತಹ ದರ್ಶನ್​​ ನಟನೆಯಷ್ಟೇ ಅಲ್ಲ ಕೃಷಿ ಮತ್ತು ಪ್ರಾಣಿಗಳನ್ನು ಸಾಕುವುದರ ಕಡೆಗೂ ಗಮನ ಕೊಡ್ತಾರೆ. ತಮ್ಮದೇ ತೋಟದಲ್ಲಿ ವಿವಿಧ ಬೆಳೆಗಳನ್ನು ಬೆಳೆಯುವುದರ ಜತೆಗೆ ಬೇರೆ ಬೇರೆ ಪ್ರಾಣಿಗಳನ್ನು ಸಹ ಸಾಕಿದ್ದಾರೆ. ತಮ್ಮ ಪ್ರಾಣಿ ಪ್ರೀತಿಯಿಂದಾಗಿ ದಚ್ಚು, ಅರಣ್ಯ ಇಲಾಖೆ ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಈಗ ಕೃಷಿ ಇಲಾಖೆ ರಾಯಭಾರಿಯಾಗಿ ಕೂಡ ನೇಮಕ ಆಗಿರೋದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.


ಇತ್ತೀಚಿಗಷ್ಟೆ ದರ್ಶನ್​ರನ್ನ ಭೇಟಿ ಮಾಡಿದ ಕೃಷಿ ಸಚಿವ ಬಿ.ಸಿ ಪಾಟೀಲ್ ದಚ್ಚುನಾ ಕರ್ನಾಟಕ ರಾಜ್ಯ ಕೃಷಿ ಇಲಾಖೆಯ ನೂತನ ರಾಯಭಾರಿಯಾಗಿ ನೇಮಕ ಮಾಡಿದರು. ಇದನ್ನ ಸಂತೋಷದಿಂದಲೇ ಸ್ವೀಕರಿಸಿದ್ದ ದರ್ಶನ್ ಯಾವುದೇ ಸಂಭಾವನೆ ಪಡೆಯದೆ ರಾಯಭಾರಿಯಾಗಿ ಒಪ್ಪಿಕೊಂಡಿದರು. ಇದೀಗ ಈ ವಿಚಾರದಲ್ಲಿ ಡಿ ಬಾಸ್​ ಮುಂದಿನ ಹೆಜ್ಜೆಯಿಟ್ಟಿದ್ದಾರೆ.

ರಾಜ್ಯದ ಕೃಷಿ ಇಲಾಖೆ ಒಂದು ಹೊಸ ಪ್ರಯೋಗ ಮಾಡಲು ಮುಂದಾಗಿದೆ. ನಾಡಿನ ಯುವ ಜನತೆಗೆ ವೀಕೆಂಡ್ ಅಗ್ರಿಕಲ್ಚರ್ ಸಂಸ್ಕೃತಿ ಪರಿಚಯಿಸುವ ಪ್ರಯತ್ನ ನಡೆಸುತ್ತಿದೆ. ಈ ಹೊಸ ಪ್ರಯೋಗಕ್ಕೆ ನಟ ದರ್ಶನ್​ ಮುಕ್ತ ಮನಸ್ಸಿನಿಂದ ಕೈ ಜೋಡಿಸಿದ್ದಾರೆ. ಈ ಮೂಲಕ ಚಿತ್ರರಂಗದ ವೃತ್ತಿ ಬದುಕಿನ ಜೊತೆಗೆ ಹಲವು ಸಾಮಾಜಿಕ ಕಾರ್ಯಗಳಲ್ಲಿ ನಿರತರಾಗಿರುವ ದರ್ಶನ್​​​ ನಾಡಿನ ಯುವಜನತೆಗೆ ಸ್ಫೂರ್ತಿಯಾಗಿದ್ದಾರೆ. ಅಲ್ಲದೇ, ಅವರ ಪರಿಸರ ಪ್ರಜ್ಞೆ, ಪ್ರಾಣಿ ಸಂರಕ್ಷಣೆ ಹಾಗೂ ಕೃಷಿ ಚಟುವಟಿಕೆಗಳೆಡಗಿನ ಒಲವು ಇಂದಿನ ಯುವ ಕೃಷಿಕರಿಗೆ ಮಾದರಿಯಾಗಿದೆ.


ವೀಕೆಂಡ್ ಅಗ್ರಿಕಲ್ಚರ್​ ಅನ್ನೋದು ಒಂದು ಹೊಸ ಪ್ರಯೋಗ. ಬಹಳ ವರ್ಷದಿಂದಲೂ ಇಂತಹದೊಂದು ಸಂಸ್ಕೃತಿ ಯುವಕರಲ್ಲಿ ಬೆಳೆಯಬೇಕು ಅನ್ನೋ ಆಶಯದಿಂದ ಹಲವು ಯೋಜನೆಗಳು ಜಾರಿಗೆ ಬಂದಿದೆ. ಆದ್ರೆ ಅದು ಹೆಚ್ಚು ಪ್ರಭಾವ ಬೀರಿಲ್ಲ. 2019ರಲ್ಲಿ ಮಹೇಶ್ ಬಾಬು ನಟನೆಯ ಮಹರ್ಷಿ ಚಿತ್ರದಲ್ಲಿ ವೀಕೆಂಡ್ ಅಗ್ರಿಕಲ್ಚರ್ ಕುರಿತು ವಿಶೇಷವಾಗಿ ತೋರಿಸಲಾಗಿತ್ತು. ಈ ಸಿನಿಮಾದ ಬಳಿಕ ವೀಕೆಂಡ್​ ಅಗ್ರಕಲ್ಚರ್ ಹೆಚ್ಚು ಪ್ರಚಲಿತಕ್ಕೆ ಬಂತು. ಇದೀಗ ಇದೇ ಮಾದರಿಯ ಕೃಷಿಯನ್ನ ರಾಜ್ಯದಲ್ಲೂ ಜಾರಿಗೊಳಿಸಲು ಸರ್ಕಾರ ಮುಂದಾಗಿದ್ದಾರೆ.

ಅರಣ್ಯ ಇಲಾಖೆಯ ರಾಯಭಾರಿಯಾಗಿದ್ದ ದರ್ಶನ್​ ಈಗ ಕೃಷಿ ಇಲಾಖೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕೃಷಿ ಇಲಾಖೆಯ ರೈತ ಪರ ಕಾರ್ಯಕ್ರಗಳಿಗೆ ದರ್ಶನ್ ಪ್ರಚಾರ ಮಾಡಲಿದ್ದಾರೆ. ಕೃಷಿ ಇಲಾಖೆಯ ಸವಲತ್ತುಗಳು ರೈತರನ್ನು ತಲುಪಿಸುವಲ್ಲಿ ದರ್ಶನ್ ಸಹ ಕೆಲಸ ಮಾಡಲಿದ್ದಾರೆ. ರೈತರಿಗೆ ಉತ್ಸಾಹ, ಹುರುಪು ತುಂಬುವ ಕಾರ್ಯವನ್ನು ನಟ ದರ್ಶನ್ ಮಾಡಲಿದ್ದಾರೆ. ಇದು ದರ್ಶನ್​​ ಅನ್ನೋ ಆರಡಿ ವ್ಯಕ್ತಿಯನ್ನ ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಿದೆ.

Next Story

RELATED STORIES