Top

ಅದ್ದೂರಿ ಪ್ರೀ ರಿಲೀಸ್ ಇವೆಂಟ್ಗೆ ಭರ್ಜರಿ ಸಿದ್ಧತೆ

ಯುವರತ್ನ ಎಕ್ಸ್ಪಿರಿಯನ್ಸ್ ಶೇರ್ ಮಾಡಿದ ಅಪ್ಪು..

ಅದ್ದೂರಿ ಪ್ರೀ ರಿಲೀಸ್ ಇವೆಂಟ್ಗೆ ಭರ್ಜರಿ ಸಿದ್ಧತೆ
X

ಸ್ಯಾಂಡಲ್​ವುಡ್​ನಲ್ಲಿ ಬ್ಯಾಕ್​ ಟು ಬ್ಯಾಕ್​ ಸ್ಟಾರ್ಸ್​ ಸಿನಿಮಾಗಳ ಹವಾ ಶುರುವಾಗಿದೆ. ಪೊಗರು ಆಯ್ತು. ರಾಬರ್ಟ್​ ಆಯ್ತು. ಈಗ ಯುವರತ್ನ ಸರದಿ. ಏಪ್ರಿಲ್​ 1ಕ್ಕೆ ಸಿನಿಮಾ ರಿಲೀಸ್​ಗೆ ರೆಡಿಯಾಗಿದ್ದು, ಸದ್ಯ ಪ್ರಮೊಶನ್​ ಕೆಲಸ ಶುರುಮಾಡಿದ್ದಾರೆ. ಅದರ ಮೊದಲ ಹೆಜ್ಜೆಯೇ ಮೈಸೂರಿನ ಪ್ರೀ ರಿಲೀಸ್​ ಇವೆಂಟ್​.

ಕೊರೊನಾ ಲಾಕ್​ಡೌನ್​ನಿಂದ ಕನ್ನಡ ಸಿನಿಮಾ ಇಂಡಸ್ಟ್ರಿ ಎಷ್ಟು ಸೈಲೆಂಟ್ ಆಗಿತ್ತೋ, ಇದೀಗ ಅಷ್ಟೇ ಬ್ಯಾಂಗ್ ಆಗಿ ಸೌಂಡ್​ ಮಾಡುತ್ತಿದೆ. ಬ್ಯಾಕ್​​ ಟು ಬ್ಯಾಕ್​ ಸ್ಟಾರ್ಸ್​ ಸಿನಿಮಾಗಳು ತೆರೆಗೆ ಬರೋಕ್ಕೆ ರೆಡಿಯಾಗಿವೆ. ಅಷ್ಟೇ ಅಲ್ಲಾ. ಬೇರೆ ಬೇರೆ ಊರು ಮತ್ತು ರಾಜ್ಯದಲ್ಲಿ ಪ್ರಿ ರಿಲೀಸ್ ಇವೆಂಟ್​​ಗಳು, ಪ್ರಮೋಶನ್​ ಕೆಲಸಗಳು ಕೂಡ ಅಷ್ಟೇ ಭರ್ಜರಿಯಾಗಿ ಮಾಡುತ್ತಿದ್ದಾರೆ ಚಿತ್ರತಂಡ. ಇದೀಗ ಯುವರತ್ನ ಟೀಂ ಕೂಡ ಪ್ರಿ ರಿಲೀಸ್​ ಇವೆಂಟ್​ ಪ್ಲಾನ್​ ಮಾಡಿದೆ.

ಏಪ್ರಿಲ್​ 1ಕ್ಕೆ ಯುವರತ್ನ ಸಿನಿಮಾ ರಿಲೀಸ್​ ಪಕ್ಕಾ ಆಗಿದೆ. ಅದರಂತೆ ನಿನ್ನೆ ಇಡೀ ಚಿತ್ರತಂಡ ಪತ್ರಿಕಾಗೋಷ್ಠಿ ನಡೆಸಿ, ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡರು ಹಾಗೂ ಒಂದಷ್ಟು ಎಕ್ಸ್​ಪಿರಿಯನ್ಸ್​ ಕೂಡ ಶೇರ್ ಮಾಡಿಕೊಂಡಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಪ್ರಿ ರಿಲೀಸ್​​ ಇವೆಂಟ್​​ ಬಗ್ಗೆ ಕೂಡ ಚಿತ್ರತಂಡ ಮಾಹಿತಿ ಕೊಟ್ಟಿದ್ದಾರೆ. ಯುವಸಂಭ್ರಮ ಅನ್ನೋ ಹೆಸರಿನಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಮೈಸೂರಿನಲ್ಲಿ ಅದ್ದೂರಿ ಇವೆಂಟ್​ಗೆ ಪ್ಲಾನ್​ ಮಾಡಲಾಗಿದೆ. ಅಂದ್ಹಾಗೇ ಈ ಕಾರ್ಯಕ್ರಮದಲ್ಲಿ ಗಾಯಕರಾದ ವಿಜಯ್​ ಪ್ರಕಾಶ್, ಎಸ್​ಎಸ್​ತಮನ್​ ಮತ್ತು ತಂಡ ಹಾಗೂ ಅರ್ಮಾನ್​ ಮಲ್ಲಿಕ್​ರ ಮ್ಯೂಸಿಕ್​ ಪರ್ಫಾಮೆನ್ಸ್​​ ಇರಲಿದೆ.

ಇನ್ನು ಮಾರ್ಚ್​ 20ರಂದೇ ಕನ್ನಡ ಮತ್ತು ತೆಲುಗಿನಲ್ಲಿ ಮದ್ಯಾಹ್ನ 2ಗಂಟೆಗೆ ಯುವರತ್ನ ಟ್ರೇಲರ್​ ಬಿಡುಗಡೆಯಾಗುತ್ತಿರೋದು ವಿಶೇಷ. ಆದರೆ, ಅದಕ್ಕೂ ಮುನ್ನ ಮಾರ್ಚ್​ 12ರಂದು ಫೀಲ್​ದ ಪವರ್ ಲಿರಿಕಲ್​ ಸಾಂಗ್​ ಬಿಡುಗಡೆಯಾಗಲಿದೆ.

ಮಾರ್ಚ್​ 20ರಂದು ಮೈಸೂರಿನಲ್ಲಿ ಅದ್ದೂರಿ ಪ್ರಿ ರಿಲೀಸ್​ ಇವೆಂಟ್​ ನಂತರ, ಮಾರ್ಚ್​ 27ರಂದು ಹೈದ್ರಾಬಾದ್​ನಲ್ಲಿ ತೆಲುಗು ಯುವರತ್ನ ಚಿತ್ರದ ಪ್ರಿ ರಿಲೀಸ್​ ಇವೆಂಟ್ ನಡೆಯಲಿದೆ. ಒಟ್ಟಾರೆಯಾಗಿ ಮತ್ತೊಂದು ಸ್ಟಾರ್ ಸಿನಿಮಾಗೆ ಸ್ಯಾಂಡಲ್​ವುಡ್​ ಸಜ್ಜಾಗುತ್ತಿದೆ. ಅಪ್ಪು ಫ್ಯಾನ್ಸ್​ ಕೂಡ ಅಷ್ಟೇ ಕಾತುರದಿಂದ ಕಾಯುತ್ತಿದ್ದಾರೆ.

Next Story

RELATED STORIES