ಫೇಸ್ಬುಕ್ ಲೈವ್ನಲ್ಲಿ ಶಾಕಿಂಗ್ ನ್ಯೂಸ್ ಕೊಟ್ಟ ಅಪ್ಪು
ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಫ್ಯಾನ್ಸ್ಗೆ ಭಾರಿ ನಿರಾಸೆ

ಮಾರ್ಚ್ 17 ಬಂದರೆ ಅಪ್ಪು ಫ್ಯಾನ್ಸ್ಗೆ ಸಂಭ್ರಮವೋ ಸಂಭ್ರಮ. ನೆಚ್ಚಿನ ನಟನ ಹುಟ್ಟುಹಬ್ಬ ಮಾಡೋಕ್ಕೆ ಭರ್ಜರಿ ತಯಾರಿಯೇ ನಡಿತಾ ಇರುತ್ತೆ. ಆದರೆ, ಈ ಬಾರಿ ಅಪ್ಪು ಬರ್ತ್ಡೇ ಸೆಲೆಬ್ರೇಷನ್ಗೆ ಬ್ರೇಕ್ ಬಿದ್ದಿದೆ. ಈ ಬೇಸರದ ಸಂಗತಿ ಜೊತೆಗೆ ಇನ್ನೊಂದು ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ.
ಪವರ್ ಸ್ಟಾರ್ ರಾಜ್ಕುಮಾರ್ ಅಭಿಮಾನಿಗಳು, ಆ ಎರಡು ಸಂಭ್ರಮದ ದಿನಕ್ಕಾಗಿ ಕಾತುರದಿಂದ ಕಾದು ಕುಳಿತಿದರು. ಆ ಎರಡು ದಿನದ ಬಗ್ಗೆ ಬೆಟ್ಟದಷ್ಟು ಆಸೆ ಇಟ್ಟುಕೊಂಡಿದರು. ಆದರೆ, ಫೇಸ್ಬುಕ್ಲೈವ್ನಲ್ಲಿ ಮಾತನಾಡಿದ ಅಪ್ಪು ಶಾಕಿಂಗ್ ಕೊಟ್ಟಿದ್ದಾರೆ. ಪವರ್ ಸ್ಟಾರ್ ಇಂತಹದೊಂದು ಘೋಷಣೆ ಮಾಡುತ್ತಿದ್ದಂತೆ. ಅಭಿಮಾನಿಗಳ ನಿರೀಕ್ಷೆ ಇದ್ದಕ್ಕಿದ್ದ ಹಾಗೇ ಕುಸಿದು ಬಿದ್ದಿದೆ. ಹಾಗಂತ ಪುನೀತ್ ರಾಜ್ಕುಮಾರ್ ಶಾಕಿಂಗ್ ಮಾತ್ರ ಕೊಟ್ಟಿಲ್ಲ, ಇದರಲ್ಲಿ ಒಂದು ಸಿಹಿ ಸುದ್ದಿ ಕೂಡ ಕೊಟ್ಟಿದ್ದಾರೆ.
ಬಹುನಿರೀಕ್ಷಿತ 'ಯುವರತ್ನ' ಸಿನಿಮಾದ ಬಿಡುಗಡೆಗಾಗಿ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ವೇಯ್ಟ್ ಮಾಡುತ್ತಿದ್ದಾರೆ. ಅದರ ನಡುವೆ ಎರಡು ದೊಡ್ಡ ಸಂಭ್ರಮಕ್ಕಾಗಿ ಫ್ಯಾನ್ಸ್ ಕಾಯ್ತಾ ಇದರು. ಒಂದು ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದ ಸಂಭ್ರಮ. ಮತ್ತೊಂದು, ಯುವರತ್ನ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ಸಂಭ್ರಮ. ಆದರೆ, ಈ ಎರಡೂ ಕಾರ್ಯಕ್ರಮಗಳು ಈಗ ರದ್ದಾಗಿವೆ. ಮಾರ್ಚ್ 17ರಂದು ಪುನೀತ್ ರಾಜ್ಕುಮಾರ್ ಬರ್ತ್ಡೇ. ಆದರೆ, ಈ ಬಾರಿ ಬರ್ತ್ಡೇ ಸೆಲೆಬ್ರೇಷನ್ಗೆ ಅಪ್ಪು ಬ್ರೇಕ್ ಹಾಕಿದ್ದಾರೆ. ಫೇಸ್ಬುಕ್ನಲ್ಲಿ ಲೈವ್ ಬಂದಿದ್ದ ಪುನೀತ್ ಈ ನಿರ್ಧಾರವನ್ನು ತಿಳಿಸಿದ್ದಾರೆ. ಕಳೆದ ವರ್ಷ ಕೂಡ ಕೊರೊನಾ ವೈರಸ್ ಕಾರಣದಿಂದ ಹುಟ್ಟುಹಬ್ಬದ ಆಚರಿಸಿಕೊಂಡಿರಲಿಲ್ಲ. ಈ ಬಾರಿ ಕೂಡ ಕೊರೊನಾ ಕಾರಣದಿಂದ ಹುಟ್ಟುಹಬ್ಬ ಆಚರಿಸಲ್ಲ ಎಂದಿದ್ದಾರೆ.
ಮಾರ್ಚ್ 20ರಂದು ಮೈಸೂರಿನಲ್ಲಿ 'ಯುವ ಸಂಭ್ರಮ' ಕಾರ್ಯಕ್ರಮ ನಡೆಯಬೇಕಿತ್ತು. ಅದಕ್ಕೆ ಬೇಕಾದ ತಯಾರಿಗಳೆಲ್ಲ ನಡೆದಿದ್ದವು. ಆದರೆ, ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಕೂಡ ''ನಮ್ಮಲ್ಲಿ ಯಾಕೆ ಮಾಡುತ್ತಿಲ್ಲ?'' ಎಂಬ ಸಂದೇಶಗಳು ಬರಲು ಶುರುವಾಯಿತ್ತಂತೆ. ಹಾಗಾಗಿ ಮೈಸೂರಿನ ಕಾರ್ಯಕ್ರಮ ರದ್ದಾಗಿದೆ. ಆದರೆ, ಈ ನಡುವೆ ಮತ್ತೊಂದು ಸಿಹಿ ಸುದ್ದಿ ಏನಂದ್ರೆ ಯುವರತ್ನ ತಂಡ ಮಾರ್ಚ್ 21ರಿಂದ 23ರ ವರೆಗೆ ಕರ್ನಾಟಕ ಪ್ರವಾಸ ಮಾಡಲಿದ್ದಾರೆ.