Top

ತಾಯಿ ಹೆಸರಿನಲ್ಲಿ ಬಡ ಅರ್ಹ ವಿದ್ಯಾರ್ಥಿಗಳಿಗೆ 'ಸ್ಕಾಲರ್​ಶಿಪ್'

  • ಮಹತ್ಕಾರ್ಯಕ್ಕೆ ಕೈ ಹಾಕಿದ ಬಾಲಿವುಡ್​ ನಟ 'ಸೋನುಸೂದ್'.
  • ಮುಂದುವರೆಯುತ್ತಿದೆ ವಲಸೆ ಕಾರ್ಮಿಕರಿಗಾಗಿ 'ಸೋನು' ಸಹಾಯಹಸ್ತ.
  • 'ಕೊನೆ ವಲಸೆ ಕಾರ್ಮಿಕ' ಊರು ಮುಟ್ಟೋವರೆಗೂ ಸಹಾಯ ನಿರಂತರ.

ತಾಯಿ ಹೆಸರಿನಲ್ಲಿ ಬಡ ಅರ್ಹ ವಿದ್ಯಾರ್ಥಿಗಳಿಗೆ ಸ್ಕಾಲರ್​ಶಿಪ್
X

ಲಾಕ್​ಡೌನ್​ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ಸಹಾಯ ಮಾಡುವ ಮೂಲಕ ಎಲ್ಲರ ಮನಗೆದ್ದ ಬಾಲಿವುಡ್​ ನಟ ಸೋನು ಸೂದ್​, ತಮ್ಮ ನೆರವನ್ನ ಮುಂದುವರೆಸಿಕೊಂಡೇ ಬರ್ತಿದ್ದಾರೆ. ಸಂಕಷ್ಟಕ್ಕೆ ಸಿಲುಕಿದರನ್ನ ಹುಡುಕಿ ಹುಡುಕಿ ಸಹಾಯ ಮಾಡುತ್ತಿದ್ದಾರೆ. ಇದೀಗ ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್​ಶಿಪ್​ ನೀಡುವ ಮಹತ್ವದ ಕಾರ್ಯಕ್ಕೆ ಕೈ ಹಾಕಿದ್ದಾರೆ. ಸೋನು ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗ್ತಿದೆ.

ಕೊರೊನಾ ವಿರುದ್ಧ ಹೋರಾಟಕ್ಕೆ ಸಾಕಷ್ಟು ಜನ ಸೆಲೆಬ್ರೆಟಿಗಳು ದೇಣಿಗೆ ನೀಡಿ ಸರ್ಕಾರದ ಕೈ ಬಲ ಪಡಿಸಿದ್ದರು. ಆದರೆ, ನಟ ಸೋನುಸೂದ್​​ ಕೊರೊನಾ ವಿರುದ್ಧ ಹೋರಾಟದಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದರು. ತಮ್ಮ ಹೋಟೆಲ್​ ಅನ್ನು ಕೊರೊನಾ ವಾರಿಯರ್ಸ್​​ಗಾಗಿ ಬಿಟ್ಟುಕೊಟ್ಟಿದ್ದ ಸೋನು ಸೂದ್​, ಬಸ್ಸು, ರೈಲು, ವಿಮಾನಗಳಲ್ಲಿ ವಲಸೆ ಕಾರ್ಮಿಕರು ತಮ್ಮ ಗೂಡು ಸೇರಲು ಸಹಾಯ ಮಾಡಿದರು. ಲಾಕ್​​ಡೌನ್​ ಬಹುತೇಕ ಮುಕ್ತಾಯವಾಗಿದರು ಸೋನು ಸಹಾಯ ನಿಂತಿಲ್ಲ.

ಸೋನು ಸೂದ್​ ಸಹಾಯ ಮುಂದುವರೆದಿದೆ. ಆಂಧ್ರದ ರೈತನಿಗೆ ಟ್ರ್ಯಾಕ್ಟರ್​ ಕೊಡಿಸಿದ್ದು, ಯಾದಗಿರಿಯ ಬಡ ದಂಪತಿಗೆ ಸಹಾಯ ಮಾಡಿದ್ದು, ಸೇರಿದಂತೆ ಸೋನು ಸೂದ್​​ ಆಪತ್ಭಾಂದವನಾಗಿ ಕಷ್ಟಕ್ಕೆ ಸಿಲುಕಿದವರಿಗೆ ಸಹಾಯ ಮಾಡುತ್ತಲೇ ಇದ್ಧಾರೆ. ಸೋಷಿಯಲ್​ ಮೀಡಿಯಾದಲ್ಲಿ ಯಾರಾದ್ರು ಸಹಾಯಕ್ಕೆ ಯಾಚಿಸಿದ್ರೆ, ತಕ್ಷಣದಲ್ಲೇ ಅವರ ಸಹಾಯಕ್ಕೆ ಧಾವಿಸುತ್ತಿದೆ. ಕಷ್ಟದಲ್ಲಿರುವವರಿಗೆ ಸಹಾಯಕಂತ್ಲೇ ಸಹಾಯವಾಣಿ ಆರಂಭಿಸಿದ್ದರು. ಇದೀಗ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಬಡ ವಿದ್ಯಾರ್ಥಿಗಳ ಸ್ಕಾಲರ್​ಶಿಪ್​ ನೀಡಲು ನಿರ್ಧರಿಸಿದ್ಧಾರೆ.

ಸೋನು ಸೂದ್​ ತಾಯಿ ಸರೋಜ್​ ಸೂದ್ ಮೊಗಾದಲ್ಲಿ ಉಚಿತವಾಗಿ ಮಕ್ಕಳಿಗೆ ಪಾಠ ಮಾಡುತ್ತಿದ್ದರಂತೆ. ಅವರ ಕೆಲಸವನ್ನ ಮುಂದುವರೆಸಿಕೊಂಡು ಹೋಗಲು ಈ ನಿರ್ಧಾರಕ್ಕೆ ಬಂದಿರೋದಾಗಿ ಸೋನು ಸೂದ್​ ಹೇಳಿದ್ಧಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಬಡವರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಹಣ ಪಾವತಿಸಲು ಹೇಗೆ ಹೆಣಗಾಡುತ್ತಿರುವುದನ್ನ ನಾನು ನೋಡಿದ್ದೇನೆ, ಕೆಲವರಿಗೆ ಆನ್‍ಲೈನ್ ತರಗತಿಗಳಿಗೆ ಹಾಜರಾಗಲು ಫೋನ್‍ಗಳಿಲ್ಲ. ಇತರರಿಗೆ ಶುಲ್ಕವನ್ನು ಪಾವತಿಸಲು ಹಣವಿಲ್ಲ, ಹಾಗಾಗಿ ವಿದ್ಯಾರ್ಥಿವೇತನ ನೀಡಲು ವಿವಿಧ ವಿದ್ಯಾಲಯಗಳ ಒಪ್ಪಂದ ಮಾಡಿಕೊಂಡಿದ್ದೇನೆ ಅಂತ ಟ್ವೀಟ್​ ಮಾಡಿದ್ದಾರೆ.

ವಾರ್ಷಿಕ ಆದಾಯವು 2 ಲಕ್ಷ ರೂ.ಗಿಂತ ಕಡಿಮೆ ಇರುವ ಕುಟುಂಬಗಳಿಂದ ಬರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಯ ಶೈಕ್ಷಣಿಕ ದಾಖಲೆ ಉತ್ತಮವಾಗಿರಬೇಕು" ಅಂತ ಸೋನು ಸೂದ್ ಷರತ್ತು ವಿಧಿಸಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್​ಷಿಪ್​ ನೀಡುವ ಸೋನುಸೂದ್​​ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸೋನು ಸಂಕಷ್ಟಕ್ಕೆ ಸಿಲುಕಿದವರನ್ನ ಹುಡುಕಿ ಸಹಾಯ ಮಾಡುತ್ತಿದ್ದಾರೆ. ಇದೀಗ ಬಾಲಿವುಡ್​​​ ಕಲಾವಿದರು ಕೋಟಿ ಕೋಟಿ ದೇಣಿಗೆ ನೀಡುವ ಮೂಲಕ ಕೊರೊನಾ ವಿರುದ್ಧ ಹೋರಾಟಕ್ಕೆ ಸರ್ಕಾರದ ಕೈ ಬಲಪಡಿಸ್ತಿದ್ದಾರೆ. ನಟ ಸೋನುಸೂದ್​​ ಕೊರೊನಾ ವಿರುದ್ಧ ಹೋರಾಟದಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ.

ಲಾಕ್​​​ಡೌನ್​ ಕೊಂಚ ಸಡಿಲವಾದ ನಂತ್ರ ಕೆಲಸಕ್ಕಾಗಿ ರಾಜ್ಯ ಬಿಟ್ಟು ರಾಜ್ಯಕ್ಕೆ ವಲಸೆ ಬಂದಿದ್ದ ಕಾರ್ಮಿಕರು ತಮ್ಮ ತಮ್ಮ ಊರಿಗೆ ತೆರಳಲು ಮುಂದಾಗಿದ್ದಾರೆ. ಬಾಲಿವುಡ್ ನಟ ಸೋನುಸೂದ್​​ ಸರ್ಕಾರಗಳ ಅನುಮತಿ ಪಡೆದು ನೂರಾರು ಕಾರ್ಮಿಕರು ತಮ್ಮ ಗೂಡು ಸೇರಿಕೊಳ್ಳಲು ಸಹಾಯ ಮಾಡುತ್ತಿದ್ದಾರೆ. ಮುಂಬೈನಲ್ಲಿ ಊಟ, ವಸತಿ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಸುಮಾರು 350 ಬಡ ವಲಸೆ ಕಾರ್ಮಿಕರನ್ನು ತಮ್ಮ ಸ್ವಂತ ವೆಚ್ಚದಲ್ಲಿ ಬಸ್ಗಳ ಮೂಲಕ ಸೋನುಸೂದ್​ ಕಳೆದ ವಾರ ಕರ್ನಾಟಕಕ್ಕೆ ಕಳುಹಿಸಿ ಕೊಟ್ಟಿದ್ದರು.

ಇದೀಗ ತಮ್ಮ ಮಾದರಿ ಕೆಲಸವನ್ನ ಮುಂದುವರೆಸಿದ್ದು, ಉತ್ತರ ಪ್ರದೇಶ, ಜಾರ್ಖಂಡ್​​, ಬಿಹಾರದ ವಲಸೆ ಕಾರ್ಮಿಕರು ತಮ್ಮ ಊರಿಗೆ ತೆರಳಲು ಸೋನು ಸಹಾಯ ಮಾಡಿದ್ದಾರೆ. ಸರ್ಕಾರಗಳ ಅನುಮತಿ ಪಡೆದು ಬಸ್​ ವ್ಯವಸ್ಥೆ ಮಾಡಿ ಕಾರ್ಮಿಕರು ಊರಿಗೆ ತೆರಳಲು ಅನುವು ಮಾಡಿಕೊಟ್ಟಿದ್ದಾರೆ. ಹಸಿದವರಿಗೆ ಊಟವನ್ನ ನೀಡಿ ಖುದ್ದು ತಾವೇ ಬಸ್​ಗಳ ಮೂಲಕ ಕಾರ್ಮಿಕರನ್ನ ತಮ್ಮ ತಮ್ಮ ಊರುಗಳಿಗೆ ಬೀಳ್ಕೊಟ್ಟಿದ್ದಾರೆ.

ಈ ಬಗ್ಗೆ ಮಾತನಾಡಿರೋ ಸೋನು ಸೂದ್​, ಕಾರ್ಮಿಕರು ನೂರಾರು ಕಿಮೀ ನಡೆದು ಊರೂ ಸೇರೋದು ನೋಡೋಕ್ಕೆ ಸಾಧ್ಯವಾಗ್ತಿಲ್ಲ. ಕೊನೆ ಕಾರ್ಮಿಕ ತನ್ನ ಊರು ಸೇರುವವರೆಗೂ ನನ್ನ ಸಹಾಯ ಮುಂದುವರೆಯುತ್ತೆ ಅಂತ ಹೇಳಿಕೊಂಡಿದ್ದಾರೆ. ವಲಸೆ ಕಾರ್ಮಿಕರಿಗೆ ಸಹಾಯ ಮಾಡಿದ ಸೋನು ಕೆಲಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

Next Story

RELATED STORIES