Top

ಗೆಳೆಯರ ಜೊತೆ ಜಾಲಿ ಬೈಕ್​ ರೈಡ್​​ ಮಾಡಿದ ಚಾಲೆಂಜಿಂಗ್​ ಸ್ಟಾರ್​ ದರ್ಶನ್​

3 ದಿನಗಳ ಕಾಲ ಮಡಿಕೇರಿ ಟ್ರಿಪ್​ ಮಾಡಲಿರೋ ದಚ್ಚ

ಗೆಳೆಯರ ಜೊತೆ ಜಾಲಿ ಬೈಕ್​ ರೈಡ್​​ ಮಾಡಿದ ಚಾಲೆಂಜಿಂಗ್​ ಸ್ಟಾರ್​ ದರ್ಶನ್​
X

ಬೆಂಗಳೂರು: ಸ್ಯಾಂಡಲ್​ವುಡ್​ ಚಾಲೆಂಜಿಂಗ್​ ಸ್ಟಾರ್ ದರ್ಶನ್​, ಲಾಕ್​ಡೌನ್​ ಆದಾಗಿನಿಂದ ಈವರೆಗೂ ಪರ್ಸನಲ್​ ಲೈಫ್​ ಎಂಜಾಯ್​ ಮಾಡ್ತಾ ಕಾಲ ಕಳಿತಿದ್ದಾರೆ. ಸ್ನೇಹಿತರ ಜೊತೆ ಹೆಚ್ಚು ಟೈಂ ಸ್ಪೆಂಡ್​ ಮಾಡ್ತಿದ್ದಾರೆ. ಇದೀಗ ಸ್ನೇಹಿತರ ಜೊತೆ ಜಾಲಿಯಾಗಿ ಬೈಕ್​ ರೈಡ್​ ಹೊರ್ಟಿದ್ದಾರೆ ದಚ್ಚು​.

ಚಾಲೆಂಜಿಂಗ್​ ಸ್ಟಾರ್ ದರ್ಶನ್ ಲಾಕ್​ಡೌನ್​ ಆದಾಗಿನಿಂದ ಈವರೆಗೂ ಪರ್ಸನಲ್​ ಲೈಫ್​​ನಲ್ಲಿ ಸಖತ್​ ಬ್ಯುಸಿಯಾಗಿದ್ದಾರೆ. ಇನ್ನು ಕೂಡ ಶೂಟಿಂಗ್ ಅಖಾಡಕ್ಕೆ ಇಳಿಯದ ದಚ್ಚು, ಫ್ರೆಂಡ್ಸ್​, ಫ್ಯಾಮಿಲಿ ಜೊತೆ ಹಾಯಾಗಿ ಸಮಯ ಕಳಿತಿದ್ದಾರೆ.

ಲಾಕ್​ಡೌನ್​ ಸಮಯದಲ್ಲಿ ಮೈಸೂರಿನ ಫಾರ್ಮ್​ ಹೌಸ್​ನಲ್ಲಿಯೇ ಸ್ನೇಹಿತರ ಜೊತೆ ಕಾಲ ಕಳೆದಿದ್ರು ದಚ್ಚು. ಸಾಕು ಪ್ರಾಣೀಗಳ ಆರೈಕೆ ಮಾಡ್ತಾ, ಟ್ರ್ಯಾಕ್ಟರ್ ಏರಿ ಮೈಸೂರು ರಸ್ತೆಯಲ್ಲಿ ಸುತ್ತಾಡುತ್ತಾ ಆರಾಮಾಗಿ ಇದ್ರು. ಆ ನಂತರ ಬೆಂಗಳೂರಿಗೆ ಬಂದ ದಚ್ಚು ಕೆಲ ದಿನಗಳ ನಂತರ ಮತ್ತೆ ಮೈಸೂರಿನತ್ತ ಮುಖ ಮಾಡಿದ್ದಾರೆ. ಅದು ಫ್ರೆಂಡ್​ ಜೊತೆ ಬೈಕ್​ನಲ್ಲಿ ಮೈಸೂರು ಸೇರಿದ್ದಾರೆ.

ಬೆಂಗಳೂರಿನ ಆರ್​​ಆರ್ ನಗರದ ದಚ್ಚು ಮನೆಯಿಂದ, ಸುಮಾರು 10ಕ್ಕೂ ಹೆಚ್ಚು ಬೈಕ್​ಗಳನ್ನೇರಿ ಜಾಲಿ ರೈಡ್ ಹೊರ್ಟಿದ್ದಾರೆ ದಚ್ಚ ಮತ್ತು ಫ್ರೆಂಡ್ಸ್. ಇನ್ನು ದರ್ಶನ್​ಗೆ ನಟರಾದ ಚಿಕ್ಕಣ್ಣ, ಯಶಸ್​ ಸೂರ್ಯ, ಧಮ ಕೀರ್ತಿರಾಜ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಸಾಥ್​ ಕೊಟ್ಟಿದ್ದಾರೆ. ಮೊದಲಿಗೆ ಬೆಂಗಳೂರಿನಿಂದ ಮೈಸೂರಿನ ಫಾರ್ಮ್​ಹೌಸ್​ಗೆ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿಂದ 3 ದಿನಗಳ ಕಾಲ ಮಡಿಕೇರಿ ಸುತ್ತಮುತ್ತ ರೈಡ್ ಹೋಗುತ್ತಿದ್ದಾರೆ.

ಮೊದಲಿನಿಂದಲೂ ದರ್ಶನ್​ಗೆ ಕುದುರೆ ಸವಾರಿ, ಬೈಕ್​ ರೈಡಿಂಗ್, ಕಾರ್ ಡ್ರೈವಿಂಗ್​ ಅಂದ್ರೆ ಕ್ರೇಜ್​ ಇದ್ದೇ ಇದೆ. ಈ ಹಿಂದೆ ಸಾಕಷ್ಟು ಸಲ ಬೈಕ್​ ರೈಡಿಂಗ್​ ಹೋಗಿರೋದು ಇದೆ. ಅದೇ ರೀತಿ ಇದೀಗ ಇಂಡಸ್ಟ್ರಿ ಫ್ರೆಂಡ್ಸ್​ ಹಾಗೂ ಪರ್ಸನಲ್​ ಫ್ರೆಂಡ್ಸ್​ ಜೊತೆ ಬೈಕ್​ ಸವಾರಿ ಹೊರ್ಟಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

Next Story

RELATED STORIES