Top

ಯಥರ್ವ್​ಗೆ ಟೀಚರ್ ಆದ ಐರಾ, ರಾಧಿಕಾ ಪಂಡಿತ್​ಗೆ ರಿಲೀಫ್

ಯಶ್ ಮತ್ತು ರಾಧಿಕಾ ತಮ್ಮ ಜೀವನದ ಪ್ರತಿ ಹಂತದ ಸಂಭ್ರಮದ ಘಳಿಗೆಗಳನ್ನ ಅಭಿಮಾನಿಗಳೊಂದಿಗೆ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ಯಥರ್ವ್​ಗೆ ಟೀಚರ್ ಆದ ಐರಾ, ರಾಧಿಕಾ ಪಂಡಿತ್​ಗೆ ರಿಲೀಫ್
X

ಸ್ಯಾಂಡಲ್​ವುಡ್​ ಸ್ಟಾರ್ ಕಪಲ್​ ಯಶ್ ಮತ್ತು ರಾಧಿಕಾ ಪಂಡಿತ್​ಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ಅಪ್ಪ-ಅಮ್ಮನನ್ನೇ ಮೀರಿಸ್ತಾರೆ ಅವರ ಮಕ್ಕಳಾದ ಐರಾ ಮತ್ತು ಯಥರ್ವ್​. ಇವರಿಬ್ಬರ ಒಂದು ಫೋಟೋ ಅಥವಾ ವಿಡಿಯೋ ಅಪ್​ಲೋಡ್ ಮಾಡಿದ್ರೆ ಸಾಕು, ಸಖತ್​ ವೈರಲ್​ ಆಗಿಬಿಡುತ್ತೆ. ಸದ್ಯ ಅಂತಹದ್ದೇ ಒಂದು ಕ್ಯೂಟ್​ ವಿಡಿಯೋವೊಂದನ್ನ ಅಪ್​ಲೋಡ್ ಮಾಡಿದ್ದಾರೆ ರಾಧಿಕಾ ಪಂಡಿತ್​.

ಯಶ್ ಮತ್ತು ರಾಧಿಕಾ ಸ್ಯಾಂಡಲ್​ವುಡ್​ನ ಕ್ಯೂಟೆಸ್ಟ್ ಕಪಲ್. ಈ ಬ್ಯೂಟಿಫುಲ್ ಕಪಲ್ ಸಂಬಂಧ ಪಟ್ಟಂತ ಯಾವುದಾದ್ರು ಒಂದು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾನೆ ಇರುತ್ತೆ. ಇನ್ನು ಈ ಸ್ಟಾರ್ ದಂಪತಿಯ ಮುದ್ದಾದ ಮಕ್ಕಳು ಸೋಷಿಯಲ್ ಮೀಡಿಯಾದಲ್ಲಿ ಕ್ರಿಯೇಟ್ ಮಾಡಿರೋ ಹವಾ ಅಷ್ಟಿಷ್ಟಲ್ಲ.

ಯಶ್ ಮತ್ತು ರಾಧಿಕಾ ತಮ್ಮ ಜೀವನದ ಪ್ರತಿ ಹಂತದ ಸಂಭ್ರಮದ ಘಳಿಗೆಗಳನ್ನ ಅಭಿಮಾನಿಗಳೊಂದಿಗೆ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಈಗಲೂ ರಾಧಿಕಾ ಪಂಡಿತ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಡಿರುವ ಐರಾ ಮತ್ತು ಯಥರ್ವ್ ವೀಡಿಯೋ ಸಿಕ್ಕಾಪಟ್ಟೆ ವೈರಲ್ಲಾಗಿದೆ.


ಹೌದು ರಾಧಿಕಾ ಪಂಡಿತ್ ಪೋಸ್ಟ್ ಮಾಡಿರೋ ವಿಡಿಯೋ ಈಗ ಸಾಕಷ್ಟು ಸದ್ದು ಮಾಡುತ್ತಿದೆ. ಐರಾ ತನ್ನ ತಮ್ಮನಿಗೆ ರಾಧಿಕಾ ಮತ್ತು ಯಶ್ ಇರೋ ಫೋಟೋ ತೋರಿಸಿ ಇದು ಅಪ್ಪ ಅಮ್ಮ ಅಂತ ಹೇಳಿಕೊಡ್ತಿರೋ ವಿಡಿಯೊ ಒಂದನ್ನ ಪೋಸ್ಟ್ ಮಾಡಿದ್ದಾರೆ. ಯಾವಾಗ ನನ್ನ ಸ್ಟೂಡೆಂಟ್ ಟೀಚರ್ ಆಗ್ತಾರೋ ಅಲ್ಲಿಗೆ ನನ್ನ ಕೆಲಸ ಮುಗೀತು ಅನ್ನೋ ಕ್ಯಾಪ್ಷನ್ ಕೊಟ್ಟಿದ್ದಾರೆ ರಾಧಿಕಾ ಪಂಡಿತ್.

ಕಳೆದ ವರ್ಷ ರಾಧಿಕಾ ,ಐರಾಗೆ ಅಪ್ಪ ಎಲ್ಲಿ ಅಂತ ಕೇಳಿದಾಗ, ಫೋಟೋದಲ್ಲಿರೋ ಯಶ್ ರನ್ನ ತೋರಿಸಿದ್ದ ವಿಡಿಯೋ ಪೋಸ್ಟ್ ಮಾಡಿ, ಯಶ್ ಗೆ ಬಿಯರ್ಡ್ ಇಲ್ಲದೇ ಇದ್ರೂ ಐರಾ ಯಶ್ ನ ಗುರುತಿಸಿದ್ದಾಳೆ ಅನ್ನೋ ಕ್ಯಾಪ್ಷನ್ ಕೊಟ್ಟಿದ್ರು. ಆ ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್ಲಾಗಿ ಯಶ್ ರಾಧಿಕಾ ಅಭಿಮಾನಿಗಳ ಸ್ಟೇಟಸ್ ಮತ್ತು ಫೇಸ್ಬುಕ್ ವಾಲ್ ನಲ್ಲಿ ರಾರಾಜಿಸಿತ್ತು. ಈಗ ಮತ್ತೆ ಅಂತದ್ದೆ ವಿಚಾರ ಮರುಕಳಿಸಿದೆ.

ಈ ಪೋಸ್ಟ್ ಗೆ ಲೈಕ್ಸ್ ಮತ್ತು ಕಮೆಂಟ್ಸ್ ನ ಮಹಾಪೂರವೇ ಹರಿದು ಬಂದಿದೆ. ಈಗಾಗಲೇ ಈ ಸ್ಟಾರ್ ಕಿಡ್ಸ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡಿದ್ದು, ತಮ್ಮದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ.

Next Story

RELATED STORIES