Top

ಮತ್ತೆ ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ ಮಂದಣ್ಣ ವಿಡಿಯೋ ವೈರಲ್​

ಕೈಯ್ಯೆಲ್ಲಾ ಕೆಸರು ಮಾಡಿಕೊಂಡು, ಹೊಲದಲ್ಲಿ ಉಳುಮೆ ಮಾಡ್ತಿದ್ದಾರೆ ರಶ್ಮಿಕಾ

ಮತ್ತೆ ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ ಮಂದಣ್ಣ ವಿಡಿಯೋ ವೈರಲ್​
X

ಕೊಡಗಿವ ಕುವರಿ ರಶ್ಮಿಕಾ ಮಂದಣ್ಣ, ಸೋಶಿಯಲ್​ ಮೀಡಿಯಾ ಸ್ಟಾರ್ ಕೂಡ ಹೌದು. ಪಾಸಿಟಿವೋ, ನೆಗೆಟಿವೊ, ಒಟ್ನಲ್ಲಿ ಒಂದಲ್ಲ ಒಂದು ವಿಚಾರದಲ್ಲಿ ಟ್ರೋಲ್​ ಆಗ್ತಾನೇ ಇರ್ತಾರೆ. ಇದೀಗ ರಶ್ಮಿಕಾರ ಒಂದು ಸ್ಪೆಷಲ್​ ವಿಡಿಯೋ ಸಖತ್​ ವೈರಲ್​ ಆಗ್ತಿದೆ. ಕೈಯ್ಯೆಲ್ಲಾ ಕೆಸರು ಮಾಡಿಕೊಂಡು, ಹೊಲದಲ್ಲಿ ಉಳುಮೆ ಮಾಡ್ತಿದ್ದಾರೆ ರಶ್ಮಿಕಾ.

ರಶ್ಮಿಕಾ ಮಂದಣ್ಣ. ಕಿರಿಕ್ ಪಾರ್ಟಿ​ಯ ಈ ಹುಡುಗಿ ಈಗ ನ್ಯಾಷನಲ್ ಕ್ರಷ್ ಆಗಿ,ಟಾಲಿವುಡ್ ಕಾಲಿವುಡ್ ಸೇರಿದಂತೆ ಬಾಲಿವುಡ್​ನಲ್ಲೂ ಬ್ಯುಸಿ ಇದ್ದಾರೆ. ಸೋ ಈ ಕೊಡಗಿನ ಕುವರಿಯ ಹೆಸರು ಈಗ ಭಾರತೀಯ ಚಿತ್ರರಂಗಕ್ಕೆ ಚಿರಪರಿಚಿತ.

ಸದ್ಯ ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿರ್ತರೆ. ಅದರಲ್ಲೂ ಟ್ರೋಲ್ ಪೇಜ್ ಗಳಿಗೆ ಆಹಾರವಾಗ್ತಾನೆ ಇರ್ತಾರೆ. ರಶ್ಮಿಕಾ ಏನ್ ಮಾಡಿದರು, ಏನ್ ಹೇಳಿದ್ರು ಟ್ರೋಲ್​​ ಆಗ್ತಾನೇ ಇರುತ್ತೆ. ಕೆಲವು ಸಲ ಪಾಸಿಟಿವ್ ಆದರೆ, ಬಹಳಷ್ಟು ಸಲ ನೆಗೆಟಿವ್ ಟ್ರೋಲ್ ಆಗಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ರಶ್ಮಿಕಾ ಅವ್ರ ವಿಡಿಯೋ ಒಂದು ಸಖತ್ ಸದ್ದು ಮಾಡ್ತಿದೆ.

ಹಳ್ಳಿ ಕಾಸ್ಟ್ಯೂಮ್ ನಲ್ಲಿ ರಶ್ಮಿಕಾ ಹೊಲ ಉಳುವ ವಿಡಿಯೋ ವೈರಲ್ ಆಗಿದೆ. ಆದ್ರೆ ಇದು ರಿಯಲ್ ವಿಡಿಯೋ ಅಲ್ಲ ರೀಲ್ ವಿಡಿಯೋ. ತಮಿಳಿನ ಸುಲ್ತಾನ್ ಚಿತ್ರದ ಈ ವಿಡಿಯೋ ಈ ಲೀಕ್​ ಆಗಿದ್ದು, ಸಖತ್​ ವೈರಲ್​ ಆಗ್ತಿದೆ. ಆಲ್​ಮೋಸ್ಟ್ ಗ್ಲಾಮರ್ ಟಚ್ ಇರೋ ಪಾತ್ರಗಳನ್ನೇ ಹೆಚ್ಚಾಗಿ ಮಾಡ್ತಿದ್ದ ರಶ್ಮಿಕಾ ಈ ಚಿತ್ರದಲ್ಲಿ ಪಕ್ಕಾ ಹಳ್ಳಿ ಹುಡುಗಿಯ ಪಾತ್ರ ಮಾಡಿದ್ದಾರೆ.

ಈಗಾಗ್ಲೇ ಸುಲ್ತಾನ್ ಚಿತ್ರದ ಟ್ರೆಲರ್​ ಮತ್ತು ಸಾಂಗ್​ ರಿಲೀಸ್ ಆಗಿದ್ದು, ಏಪ್ರಿಲ್​ 2 ರಂದು ಸಿನಿಮಾ ತೆರೆಗೆ ಬರಲಿದೆ.

Next Story

RELATED STORIES