ರಮೇಶ್ ಪುತ್ರಿ ಆರತಕ್ಷತೆಯಲ್ಲಿ ತಾರೆಯರ ಸಮಾಗಮ
ವೇದಿಕೆ ಮೇಲೆ ಕುಣಿದು ಕುಪ್ಪಳಿಸಿದ ಸೆಲೆಬ್ರೆಟಿಗಳು..

ಕೊರೊನಾ ಲಾಕ್ಡೌನ್ ನಡುವೆಯೇ ಸ್ಯಾಂಡಲ್ವುಡ್ನ ಸಾಕಷ್ಟು ಸೆಲೆಬ್ರೆಟಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ರು. ಇದೀಗ ಅನ್ಲಾಕ್ ನಂತ್ರವೂ ಮದುವೆ ಸಂಭ್ರಮ ಮುಂದುವರೆದಿದೆ. ಸ್ಯಾಂಡಲ್ವುಡ್ನ ಟ್ಯಾಲೆಂಡೆಡ್ ಆ್ಯಕ್ಟರ್ ರಮೇಶ್ ಅರ್ವಿಂದ್ ಪುತ್ರಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಈ ಅದ್ದೂರಿ ಮದುವೆಯಲ್ಲಿ ನಮ್ಮ ಸೆಲೆಬ್ರೇಟಿಗಳು ಹೆಜ್ಜೆ ಹಾಕಿದ್ದಾರೆ.
ಸ್ಯಾಂಡಲ್ವುಡ್ನ ಮೋಸ್ಟ್ ಟ್ಯಾಲೆಂಟೆಡ್, ಯಂಗ್ ಅಂಡ್ ಎನರ್ಜಿಟಿಕ್ ಹೀರೋ ರಮೇಶ್ ಅರವಿಂದ್ ಮಗಳ ಮದುವೆ ಖುಷಿಯಲ್ಲಿದ್ದಾರೆ. ರೀಸೆಂಟಾಗಿ ಅಂದ್ರೆ ಡಿಸೆಂಬರ್ 28ರಂದು ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ತಮ್ಮ ಬಹುಕಾಲದ ಗೆಳೆಯ ಅಕ್ಷಯ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದರು.
ಬೆಂಗಳೂರಿನ ಬನ್ನೇರುಘಟ್ಟ ಬಳಿಯ ರೆಸಾರ್ಟ್ವೊಂದ್ರಲ್ಲಿ ಮದುವೆ ನೆರವೇರಿತ್ತು..ಕೋವಿಡ್ ಆಗಿದ್ರಿಂದ ಮದುವೆಗೆ ಕೆಲವೇ ಮಂದಿಯನ್ನ ಆಹ್ವಾನಿಸಲಾಗಿತ್ತು..ಆದ್ರೀಗ ಜನವರಿ 16 ರಂದು ಚಿತ್ರರಂಗದ ಸ್ನೇಹಿತರು, ಹಾಗೂ ರಾಜಕೀಯ ಸ್ನೇಹಿತರು ಸೇರಿದಂತೆ ಉಳಿದವ್ರಿಗೆಲ್ಲಾ ಆರತಕ್ಷತೆ ಆಯೋಜಿಸಿದ್ದರು.
ಈ ಅದ್ದೂರಿ ರಿಸೆಪ್ಶನ್ನಲ್ಲಿ ಚಿತ್ರರಂಗದ ಮತ್ತು ರಾಜಕೀಯ ಗಣ್ಯರು ಸೇರಿದಂತೆ ಬೇರೆ ಬೇರೆ ಕ್ಷೇತ್ರದ ಗಣ್ಯರು ಭಾಗಿಯಾಗಿ ನವ ಜೋಡಿಗೆ ಶುಭಹಾರೈಸಿದ್ದಾರೆ. ಚಂದನವನದ ತಾರೆಯರಾದ ಸುದೀಪ್, ಯಶ್, ಸುಮಲತಾ ಅಂಬರೀಶ್, ಶ್ರೀಮುರಳಿ, ಪ್ರಜ್ವಲ್ ದೇವರಾಜ್, ಹರ್ಷಿಕಾ ಪೂಣಚ್ಚ, ಅಮೂಲ್ಯ, ಶಿಲ್ಪಾ ಗಣೇಶ್ ಸೇರಿದಂತೆ ಸಾಕಷ್ಟು ಸೆಲೆಬ್ರೆಟಿಗಳು ಆಗಮಿಸಿದರು.
ಇನ್ನು ನಿಹಾರಿಕಾ ಅಕ್ಷಯ್ ಆರತಕ್ಷತೆ ಕಾರ್ಯಕ್ರಮದಲ್ಲಿ ಎಲ್ಲಾ ಸೆಲೆಬ್ರೆಟಿಗಳು ವೇದಿಕೆ ಮೇಲೆ ಹೆಜ್ಜೆ ಹಾಕಿರೋದು ವಿಶೇಷವಾಗಿತ್ತು. ಎಲ್ಲಾ ಸ್ಟಾರ್ಗಳ ಸಿನಿಮಾ ಹಾಡುಗಳನ್ನ ಪ್ಲೇ ಮಾಡಿ, ಎಲ್ಲರೂ ಕೂಡ ಹೆಜ್ಜೆ ಹಾಕುವಂತೆ ಮಾಡಿದ್ರು ರಮೇಶ್ ಅರವಿಂದ ಹಾಗೂ ಕಿಚ್ಚ ಸುದೀಪ್ ಹಾಗೂ ರಾಕಿಂಗ್ ಸ್ಟಾರ್ ಜೊತೆ ಕೈ ಹಿಡಿದು ಹೆಜ್ಜೆ ಹಾಕಿದ್ದಾರೆ ರಮೇಶ್ ಅರ್ವಿಂದ್ ಪುತ್ರಿ ನಿಹಾರಿಕಾ.
ಇನ್ನು ಲಾಕ್ಡೌನ್ ನಂತ್ರ ಒಂದೇ ಫ್ರೇಮ್ನಲ್ಲಿ ಸ್ಯಾಂಡಲ್ವುಡ್ ಸ್ಟಾರ್ಗಳೂ ಕಾಣಿಸಿಕೊಂಡಿದ್ದಾರೆ. ಯಶ್ ರಾಧಿಕಾ ಪಂಡಿತ್ ಸುಮಲತಾ ಅಂಬರೀಶ್ ಹಾಗೂ ಯಶ್ ಸುದೀಪ್ ಒಟ್ಟಿಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ..ಈ ಎಲ್ಲಾ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.