Top

ಯೂಟ್ಯೂಬ್​ನಲ್ಲಿ ಪಿಆರ್​ಕೆ ಪವರ್:​ ಅಪ್ಪು ಫುಲ್​ ಖುಷ್

ಒಂದು ಮಿಲಿಯನ್​ ಸಬ್​ಸ್ಕ್ರೈಬರ್ಸ್​, ಸಾಧನೆಯ ಮೊದಲ ಮೆಟ್ಟಿಲೇರಿದ ಪಿಆರ್​ಕೆ

ಯೂಟ್ಯೂಬ್​ನಲ್ಲಿ ಪಿಆರ್​ಕೆ ಪವರ್:​ ಅಪ್ಪು ಫುಲ್​ ಖುಷ್
X

ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್ ನಟನೆ ಜೊತೆಗೆ ಸಿನಿಮಾ ನಿರ್ಮಾಣ ಮತ್ತು ಆಡಿಯೋ ಕಂಪನಿ ನಿರ್ವಹಣೆ, ಹೀಗೆ ಚಿತ್ರರಂಗದ ಬೇರೆ ಬೇರೆ ವಿಭಾಗಗಳಲ್ಲೂ ಬ್ಯುಸಿಯಾಗಿದ್ದಾರೆ. ಇದೀಗ ಪುನೀತ್ ರಾಜ್​ಕುಮಾರ್​ ಒಡೆತನದ ಪಿಆರ್​​ಕೆ ಆಡಿಯೋ ಸಂಸ್ಥೆ, ಯೂಟ್ಯೂಬ್​ನಲ್ಲಿ ಸಾಧನೆಯ ಮೊದಲ ಮೆಟ್ಟಿಲನ್ನ ತಲುಪಿದೆ.

ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್, ತಾಯಿ ಪಾರ್ವತಮ್ಮ ರಾಜ್​ಕುಮಾರ್ ಹೆಸರಿನಲ್ಲಿ ಹುಟ್ಟುಹಾಕಿದ ಆಡಿಯೋ ಸಂಸ್ಥೆಯೇ ಪಿಆರ್​​ಕೆ. ಈಗಾಗಲೇ ಪಿಆರ್​ಕೆ ಆಡಿಯೊ ಸಂಸ್ಥೆ ಮಾತ್ರವಲ್ದೆ, ಸಿನಿಮಾ ನಿರ್ಮಾಣ ಸಂಸ್ಥೆಯೂ ಇದೆ. ಸುಮಾರು 3 ವರ್ಷಗಳ ಹಿಂದೆ ಸ್ಥಾಪಿತವಾದ ಪಿಆರ್​ಕೆ ಆಡಿಯೋ, ಸದ್ಯ ಯೂಟ್ಯೂಬ್​​ನಲ್ಲಿ ಸಾಧನೆ ಮಾಡಿದೆ.

ಯೂಟ್ಯೂಬ್​ನಲ್ಲಿ ಪಿಆರ್​​ಕೆ ಆಡಿಯೋ, ಇಂದಿಗೆ ಒಂದು ಮಿಲಿಯನ್ಸ್​​ ಚಂದಾದಾರನ್ನ ಗಳಿಸಿದ್ದು, ಈ ಖುಷಿ ವಿಚಾರವನ್ನ ಸ್ವತಃ ಪುನೀತ್ ರಾಜ್​ಕುಮಾರ್ ಸೋಶಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ ಜೊತೆಗೆ ಪಿಆರ್​ಕೆ ಆಡಿಯೋ ರೈಟ್ಸ್​ನಲ್ಲಿರುವ ಹಾಡುಗಳನ್ನ ಒಟ್ಟಾಗಿಸಿ,ಒಂದು ವಿಡಿಯೋ ಝಲಕ್​ನ್ನ ಕೂಡ ರಿಲೀಸ್​ ಮಾಡಿದ್ದಾರೆ.

ಪಿಆರ್​ಕೆ ಆಡಿಯೋ ಸಂಸ್ಥೆ ಪ್ರಾರಂಭವಾಗಿ ಸುಮಾರು 3 ವರ್ಷಗಳಾಗಿದ್ದು, ಪುನೀತ್​ ರಾಜ್​ಕುಮಾರ್ ಅಭಿನಯದ ಅಂಜನಿಪುತ್ರ ಚಿತ್ರದ ಆಡಿಯೋ ರೈಟ್ಸ್​ ಪಡೆಯುವ ಮೂಲಕ, ಪಿಆರ್​ಕೆ ಆಡಿಯೋ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿತ್ತು.ಆ ನಂತರ ಸ್ಟಾರ್ಗಳ ಚಿತ್ರಗಳು ಹಾಗೂ ಹೊಸ ಸಿನಿಮಾಗಳ ಆಡಿಯೋಗಳನ್ನ ಖರೀದಿ ಮಾಡಿದ್ದಾರೆ. ಶಿವಣ್ಣನ ಟಗರು, ವಿನಯ್​ ರಾಜ್​ಕುಮಾರ್ ಅನಂತು ವರ್ಸಸ್​​ ನುಸ್ರತ್, ಪಡ್ಡೆಹುಲಿ,ಮಾಯಾಬಜಾರ್ ಹೀಗೆ ಸಾಕಷ್ಟು ಚಿತ್ರಗಳ ಆಡಿಯೋ ಪಿಆರ್​ಕೆ ಸಂಸ್ಥೆಯಡಿಯಲ್ಲಿದೆ.

ಸದ್ಯ ಪಿಆರ್​​ಕೆ ಆಡಿಯೋ ಮತ್ತು ನಿರ್ಮಾಣ ಸಂಸ್ಥೆ ಎರಡು ಕೂಡ ಚಿತ್ರರಂಗದಲ್ಲಿ ಹೊಸತಂಡಗಳಿಗೆ, ಹೊಸಪ್ರತಿಭೆಗಳಿಗೆ ಹೆಚ್ಚು ಅವಕಾಶ ಕೊಡ್ತಿರೋದು ನಿಜಕ್ಕೂ ಒಳ್ಳೆಯ ಬೆಳವಣಿಗೆ.

Next Story

RELATED STORIES