ಸೋಶಿಯಲ್ ಮೀಡಿಯಾದಲ್ಲಿ ಪಬ್ಲಿಕ್ ಟಾಯ್ಲೆಟ್ಗೆ ಪ್ರಶಂಸೆ
ನೋಡುಗರ ಮನಗೆದ್ದ ನೈಜಘಟನೆಯಾಧಾರಿತ ಕಿರುಚಿತ್ರ

ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದಷ್ಟು ಫೋಟೋಗಳು, ವಿಡಿಯೋಗಳು ವೈರಲ್ ಆಗ್ತಾನೇ ಇರುತ್ತೆ. ಅಂತದ್ದೆ ಒಂದು ವೈರಲ್ ಆದ ವಿಡಿಯೊವೊಂದನ್ನ ಇಟ್ಕೊಂಡು ಕಿರುಚಿತ್ರ ಮಾಡಿದ್ದಾರೆ ಇಲ್ಲೊಂದು ಹೊಸತಂಡ. ಈ ಶಾರ್ಟ್ ಫಿಲ್ಮ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿ ಮಾಡುತ್ತಿದೆ.
ಸೋಶಿಯಲ್ ಮೀಡಿಯಾ ಎಷ್ಟು ಫಾಸ್ಟಾಗಿದೆ ಅಂದ್ರೆ ಕೂತಿದ್ದ ಜಾಗದಲ್ಲೇ ಪ್ರಪಂಚದ ಎಲ್ಲಾ ವಿಚಾರಗಳನ್ನ ತಿಳ್ಕೋಬಹುದು. ಕೈಯ್ಯಲ್ಲಿ ಮೊಬೈಲ್ ಒಂದಿದ್ರೆ ಸಾಕು. ಪ್ರಪಂಚವೇ ನಮ್ಮ ಕೈಯಲ್ಲಿ ಇದ್ದ ಹಾಗೇ ಅಂತಾರೆ ಯಂಗ್ಸ್ಟರ್ಸ್. ಪ್ರತಿದಿನ ಒಂದಲ್ಲ ಒಂದು ಫೋಟೋ, ವಿಡಿಯೋ ವೈರಲ್ ಆಗ್ತಾನೇ ಇರುತ್ತೆ. ಹೆಚ್ಚು ಲೈಕ್ಸ್, ವೀವ್ಸ್ ಕಮೆಂಟ್ ಪಡ್ಕೊಬೇಕು ಅಂತ ಒಂದಷ್ಟು ಮಂದಿ ಅದರ ಹಿಂದೆನೇ ಬಿದ್ದಿರ್ತಾರೆ.
ಆದರೆ, ಕೆಲವು ಫೋಟೋ ಮತ್ತು ವಿಡಿಯೋಗಳು ಲೈಕ್ ಕಮೆಂಟ್ಗೆ ಸೀಮಿತವಾಗದೇ, ಒಬ್ಬರಿಂದ ಒಬ್ಬರಿಗೆ ಶೇರ್ ಆಗಿ ಮತ್ತೊಬ್ಬರ ಜೀವನವನ್ನೇ ಹಾಳು ಮಾಡೋ ಮಟ್ಟಕ್ಕೆ ಹೋಗಿಬಿಡುತ್ತೆ ಅದಕ್ಕೆ ಉದಾಹರಣೆ ಯಾಕಣ್ಣ ವಿಡಿಯೋ. ಪಬ್ಲಿಕ್ ಟಾಯ್ಲಟ್ನಲ್ಲಿದ್ದ ಮಹಿಳೆಯೊಬ್ಬರ ವಿಡಿಯೋ ಇತ್ತೀಚಿನ ದಿನಗಳಲ್ಲಿ ಸಖತ್ ವೈರಲ್ ಆಗಿತ್ತು. ಇದೀಗ ಆ ವಿಡಿಯೋವನ್ನೇ ಆಧಾರವಾಗಿಟ್ಟುಕೊಂಡು ಕಿರುಸಿನಿಮಾ ಮಾಡಿದ್ದಾರೆ ಇಲ್ಲೊಂದು ತಂಡ. ಆ ಕಿರುಚಿತ್ರದ ಹೆಸರೇ ಪಬ್ಲಿಕ್ ಟಾಯ್ಲೆಟ್.
ಮಹಿಳೆಯೊಬ್ಬಳ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡೋ ವ್ಯಕ್ತಿಗಳು. ಆ ನಂತರ ಅದ್ರಿಂದಾಗೋ ಅನಾಹುತ. ಕೊನೆಗೆ ವಿಡಿಯೋ ಹರಿಬಿಟ್ಟ ವ್ಯಕ್ತಿಯ ಪಶ್ಚಾತಾಪ. ಇದೆಲ್ಲವನ್ನೂ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ನಾಗೇಶ್ ಹೆಬ್ಬೂರ್. ಸುಮಾರು ಹತ್ತು ವರ್ಷಗಳಿಂದ ಇಂಡಸ್ಟ್ರಿಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ನಾಗೇಶ್ ಹೆಬ್ಬೂರ್, ಈ ಕಿರುಚಿತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸದ್ಯ ಈ ಕಿರುಚಿತ್ರ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.