Top

'ಫ್ಯಾಂಟಮ್'​ ಫೋಟೋಶೂಟ್​ ಮೇಕಿಂಗ್​ ರಿವೀಲ್

ಫ್ಯಾಂಟಮ್​ ಸಿನಿಮಾ ಚಿತ್ರೀಕರಣ ಶುರು ಮಾಡೋದಕ್ಕೂ ಮೊದಲೂ ಬೊಂಬಾಟ್​ ಫೋಟೋಶೂಟ್​ ಮಾಡಲಾಗಿದೆ.

ಫ್ಯಾಂಟಮ್​ ಫೋಟೋಶೂಟ್​ ಮೇಕಿಂಗ್​ ರಿವೀಲ್
X

ಸುದೀಪ್​ ಬರ್ತ್​ಡೇಗೆ ಕೋಟಿಗೊಬ್ಬ-3 ಟೀಸರ್​ ಬಂತು. ಆದರೆ, ಫ್ಯಾಂಟಮ್​ ಟೀಂನಿಂದ ಯಾವುದೇ ಟೀಸರ್​ ಬಂದಿಲ್ಲ. ಬಟ್​ ಈ ಅಡ್ವೆಂಚರಸ್​ ಚಿತ್ರದ ಒಂದು ಸ್ಪೆಷಲ್​ ಮೇಕಿಂಗ್​ ವೀಡಿಯೋ ರಿವೀಲ್​ ಆಗಿದೆ. ಇದು ಸಿನಿಮಾ ಮೇಕಿಂಗ್​ ಕಥೆ ಅಲ್ಲ. ಕಿಚ್ಚ ಸುದೀಪ್​ ವಿಕ್ರಾಂತ್​ ರೋಣ ಆಗಿ ಬದಲಾದ ಕಥೆ.

ಸಾಮಾನ್ಯವಾಗಿ ದೊಡ್ಡ ದೊಡ್ಡ ಸಿನಿಮಾಗಳ ಮೇಕಿಂಗ್​ ವಿಚಾರದಲ್ಲಿ ಸೀಕ್ರೆಟ್​ ಮೇಂಟೇನ್​ ಮಾಡ್ತಾರೆ. ಆದರೆ, ಫ್ಯಾಂಟಮ್​ ಸಿನಿಮಾ ಟೀಮ್ ಮಾತ್ರ, ಶೂಟಿಂಗ್​ ಶುರುವಾದ ದಿನದಿಂದಲೂ ಸಣ್ಣ ಸಣ್ಣ ಝಲಕ್ ಜೊತೆಗೆ ಸಿನಿಮಾ ಅಪ್​ಡೇಟ್ಸ್​ ಕೊಡ್ತಾ ಬರ್ತಿದೆ.

ಸ್ವತಃ ಕಿಚ್ಚ ಸುದೀಪ್​ ಫ್ಯಾಂಟಮ್​ ಲೋಕದ ಸಣ್ಣ ಟೀಸರ್​ಗಳನ್ನ ಶೇರ್​ ಮಾಡಿ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚುವಂತೆ ಮಾಡಿದ್ದಾರೆ. ಈಗಾಗಲೇ ಸಿನಿಮಾದಲ್ಲಿ ಸುದೀಪ್​ ಕ್ಯಾರೆಕ್ಟರ್ ನೇಮ್, ಅವರ ಲುಕ್, ಕಾಸ್ಟ್ಯೂಮ್​​ ಎಲ್ಲವೂ ಕುತೂಹಲ ಕೆರಳಿಸಿದೆ. ಕಿಚ್ಚ ಸುದೀಪ್​ ವಿಕ್ರಾಂತ್​ ರೋಣ ಆಗಿ ಬದಲಾಗಿದ್ದೇಗೆ ಅನ್ನೋದನ್ನ ಸ್ಪೆಷಲ್​ ವೀಡಿಯೋ ತೋರಿಸಿದೆ ಚಿತ್ರತಂಡ.

ರೆಟ್ರೋ ಲುಕ್​ನಲ್ಲಿ ವಿಕ್ರಾಂತ್​ ರೋಣ ಸುದೀಪ್​ ಫ್ಯಾಂಟಮ್​ ಸಿನಿಮಾದಲ್ಲಿ ಅಬ್ಬರಿಸೋಕ್ಕೆ ಬರ್ತಿದ್ದಾರೆ. ಫ್ಯಾಂಟಮ್​ ಸಿನಿಮಾ ಚಿತ್ರೀಕರಣ ಶುರು ಮಾಡೋದಕ್ಕೂ ಮೊದಲೂ ಬೊಂಬಾಟ್​ ಫೋಟೋಶೂಟ್​ ಮಾಡಲಾಗಿದೆ. ವಿಕ್ರಾಂತ್​ ರೋಣ ಪಾತ್ರ ಪರಿಚಯದ ಫೋಟೋಶೂಟ್​ ಇದು. ಕಾನಿ ಸ್ಟುಡಿಯೋ ಮಾಡಿದ ಫೋಟೋಶೂಟ್​ಗಾಗಿ ಕಿಚ್ಚ​ ರೆಡಿಯಾದ ಬಗೆಯನ್ನ ಇಲ್ಲಿ ನೋಡಬಹುದು.

ಸುದೀಪ್​ ಮಾಡ್ತಿರೋ ವಿಕ್ರಾಂತ್​ ರೋಣ ಪಾತ್ರಕ್ಕಾಗಿ ಸ್ಪೆಷಲ್​ ಕಾಸ್ಟ್ಯೂಮ್​ ಡಿಸೈನ್ ಮಾಡಿಸಲಾಗಿದೆ. ಸ್ಲೀವ್​ಲೆಸ್​ ಶರ್ಟ್​​, ಅದರ ಮೇಲೆ ಜಾಕೆಟ್​​, ಡೆನಿಮ್​ ಪ್ಯಾಂಟ್​ ತೊಟ್ಟು ಸ್ಟೈಲಿಶ್​ ಲುಕ್​ನಲ್ಲಿ ಸುದೀಪ್​ ದರ್ಶನ ಕೊಟ್ಟಿದ್ದಾರೆ. ರಿವಾಲ್ವರ್​ ಹಿಡಿದು, ಸಿಗಾರ್ ಹಚ್ಚಿ ಖಡಕ್​ ಲುಕ್​ ಕೊಟ್ಟಿದ್ಧಾರೆ.

ವಿಕ್ರಾಂತ್​ ರೋಣನ ಖದರ್​ ತೋರಿಸೋ ಸ್ಪೆಷಲ್​ ವೀಡಿಯೋಗೆ ಅಜನೀಶ್​ ಲೋಕನಾಥ್​ ಬ್ಯಾಕ್​ಗ್ರೌಂಡ್​ ಸ್ಕೋರ್ ಮತ್ತಷ್ಟು ಮಜಾ ಕೊಡುತ್ತಿದೆ. ಅನೂಪ್​ ಭಂಡಾರಿ ನಿರ್ದೇಶನದ ಫ್ಯಾಂಟಮ್​ ಸಿನಿಮಾ ಶೂಟಿಂಗ್​ ಹೈದರಾಬಾದ್​ನಲ್ಲಿ ಬಹಳ ಜೋರಾಗಿ ನಡೀತಿದೆ. ಸುದೀಪ್​ ಜೊತೆಗೆ ನಿರೂಪ್​ ಭಂಡಾರಿ, ನೀತಾ ಅಶೋಕ್​​​​​ ಫ್ಯಾಂಟಮ್​ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಒಟ್ನಲ್ಲಿ ಮೇಕಿಂಗ್​ ಹಂತದಲ್ಲೇ ಫ್ಯಾಂಟಮ್ ಸಿನಿಮಾ ದೊಡ್ಡದಾಗಿ ಸೌಂಡ್​ ಮಾಡುತ್ತಿದೆ.

Next Story

RELATED STORIES