ವಿಶೇಷ ಚೇತನ ಅಭಿಮಾನಿಯೊಬ್ಬರಿಗೆ ಸ್ಥಳದಲ್ಲೇ ಸಹಾಯ ಹಸ್ತ ಚಾಚಿದ ಕಿಚ್ಚ ಸುದೀಪ್
ಕಿಚ್ಚ ಸುದೀಪ್ ಅವರು ವಿಶೇಷ ಚೇತನ ರಾಘವ್ ಅವರ ಕೃತಕ ಕಾಲು ಜೋಡಣೆಗಾಗಿ ಸ್ಥಳದಲ್ಲೇ ಸಹಾಯ ಹಸ್ತ ಚಾಚಿ ಮಾನವಿಯತೆಯ ಮೆರೆದಿದ್ದಾರೆ

X
Admin 24 Jan 2021 10:52 AM GMT
ಮೈಸೂರು: ನಟ ಕಿಚ್ಚ ಸುದೀಪ್ ಬರುವ ವಿಷಯ ತಿಳಿದು ದಾರಿ ಮಧ್ಯೆ ಅವರನ್ನ ಭೇಟಿ ಆಗಲು ಬಂದಿದ್ದ ವಿಶೇಷ ಚೇತನ ಅಭಿಮಾನಿಯನ್ನು ಕಂಡು ತಮ್ಮ ಕಾರು ನಿಲ್ಲಿಸಿ ಅವರ ಬಳಿ ಹೋಗಿ ಮಾತನಾಡಿಸಿದ ಘಟನೆ ನಡೆದಿದೆ.
ಇಂದು ಮೈಸೂರಿಗೆ ಭೇಟಿ ನೀಡಿದ್ದ ವೇಳೆ ಈ ಘಟನೆ ನಡೆದಿದ್ದು, ವಿಶೇಷ ಚೇತನ ಅಭಿಮಾನಿ ರಾಘವ್ ಅವರು ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದರು.
ಅದುವಲ್ಲದೇ ಕಿಚ್ಚ ಸುದೀಪ್ ಅವರು ವಿಶೇಷ ಚೇತನ ರಾಘವ್ ಅವರ ಕೃತಕ ಕಾಲು ಜೋಡಣೆಗಾಗಿ ಸ್ಥಳದಲ್ಲೇ ಸಹಾಯ ಹಸ್ತ ಚಾಚಿ ಮಾನವೀಯತೆಯ ಮೆರೆದಿದ್ದಾರೆ.
ಸ್ಯಾಂಡಲ್ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಅವರು ಇಂದು ನಾಡದೇವತೆ ಚಾಮುಂಡಿ ಬೆಟ್ಟಕ್ಕೆ ನೀಡಿ ಭೇಟಿ ನೀಡಿ, ದೇವಿಯ ದರ್ಶನ ಪಡೆದರು. ಸುದೀಪ್ಗೆ ರಂಗಿತರಂಗ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಸಾಥ್ ನೀಡಿದ್ದಾರೆ.
Next Story