ಕಾಲಿವುಡ್ನಲ್ಲಿ ದರ್ಬಾರ್ ಮಾಡ್ತಿದೆ ಮದಯಾನೈ
ಚಂದನವನದಲ್ಲಿ ಅಬ್ಬರಿಸಿದ್ದ ‘ಮದಗಜ’ ಟೀಸರ್

ಸ್ಯಾಂಡಲ್ವುಡ್ ಮತ್ತು ಟಾಲಿವುಡ್ನಲ್ಲಿ ಘರ್ಜಿಸಿ ಘೀಳಿಟ್ಟ ಮದಗಜ ಈಗ ತಮಿಳಿನಲ್ಲಿ ರೋರ್ ಮಾಡ್ತಿದೆ. ಟೀಸರ್ ರಿಲೀಸ್ ಆದ 2 ದಿನಕ್ಕೆ ಮದಯಾನೈ ಟಾಕ್ ಆಫ್ದ ಕಾಲಿವುಡ್ ಆಗಿದೆ. ಹಾಗಾದ್ರೆ ಮದಗಜ ಮದಯಾನೈ ಆಗಿ ಹೇಗೆ ಅಬ್ಬರಿಸ್ತಿದೆ.
ಸ್ಯಾಂಡಲ್ವುಡ್ನ ಮೋಸ್ಟ್ ಎಕ್ಸ್ಪೆಕ್ಡೆಡ್ ಸಿನಿಮಾ ಮದಗಜ, ಶುರುವಿನಿಂದ, ಟೀಸರ್ ರಿಲೀಸ್ವರೆಗೂ ಒಂದಲ್ಲ ಒಂದು ರೀತಿ ಸೌಂಡ್ ಮಾಡ್ತಾನೇ ಬಂದಿದೆ. ಕನ್ನಡದ ಮದಗಜ ಟೀಸರ್ ರಿಲೀಸ್ ಆದ 24 ಗಂಟೆಯಲ್ಲಿಯೇ ಮಿಲಿಯನ್ಗಟ್ಟಲೆ ವೀವ್ಸ್ ಸಾಧಿಸಿತ್ತು. ರೋರಿಂಗ್ ಸ್ಟಾರ್ ಆರ್ಭಟಕ್ಕೆ ಸ್ಯಾಂಡಲ್ವುಡ್ನ ಹಳೆ ರೆಕಾರ್ಡ್ಗಳು ಧೂಳಿಪಟವಾಗಿದೆ. ಚಂದನವನದಲ್ಲಿ ಮದಗಜ ಟೀಸರ್ ಸೆನ್ಸೇಷನ್ ಕ್ರಿಯೆಟ್ ಮಾಡಿದೆ. ಸದ್ಯ 40 ಲಕ್ಷ ಮಂದಿ ಮದಗಜ ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೊಸ ವರ್ಷದ ಪ್ರಯುಕ್ತ ತೆಲುಗಿನಲ್ಲೂ ಮದಗಜ ಫಸ್ಟ್ಲುಕ್ ಟೀಸರ್ ರಿಲೀಸ್ ಆಗಿತ್ತು ಆಂಧ್ರ, ತೆಲಂಗಾಣದಲ್ಲೂ ಮದಗಜನ ರಣಘರ್ಜನೆಯ ಬಗ್ಗೆ ಗೊತ್ತೇಯಿದೆ. ತೆಲುಗಿನಲ್ಲಿ ಫಸ್ಟ್ಲುಕ್ ಟೀಸರ್ ಬಿಡುಗಡೆಯಾದ 24 ಗಂಟೆಯಲ್ಲೇ ಮಿಲಿಯನ್ಗಟ್ಟಲೇ ವೀವ್ಸ್ ಪಡೆದುಕೊಂಡಿತ್ತು. ಸೋಶಿಯಲ್ ಮೀಡಿಯಾದಲ್ಲಿ ಮದಗಜ ಬಿರುಗಾಳಿಯೇ ಎದ್ದಿತ್ತು. ತೆಲುಗು ಟೀಸರ್ಗೂ ಶ್ರೀಮುರುಳಿಯೇ ಧ್ವನಿ ನೀಡಿದ್ದು. ಮುರಳಿ ಕಂಚಿನ ಕಂಠಕ್ಕೆ ತೆಲುಗು ಫ್ಯಾನ್ಸ್ ಫಿದಾ ಆಗಿದ್ದಾರೆ.
ಸದ್ಯ ಟಾಲಿವುಡ್ನಲ್ಲಿ ಶ್ರೀ ಮುರುಳಿ ಹವಾ ಶುರುವಾಗಿದೆ. ಮದಗಜ ತೆಲುಗು ಟೀಸರ್ಗೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ಅಭಿಮಾನಿಗಳಂತೂ ಟೀಸರ್ ನೋಡಿಯೇ ಥ್ರಿಲ್ ಆಗಿದ್ದಾರೆ. ಟಾಲಿವುಡ್ನಲ್ಲಿ ಪ್ರತಿಯೊಂದು ವಿಚಾರದಲ್ಲೂ ಪ್ರೇಕ್ಷಕರನ್ನು ಅಟ್ರ್ಯಾಕ್ಟ್ ಮಾಡುವಲ್ಲಿ ಮದಗಜ ಟೀಸರ್ ಯಶಸ್ವಿಯಾಗಿದೆ. ತೆಲುಗು ಮಂದಿ ಮದಗಜನನ್ನು ಮುಕ್ತ ಕಂಠದಿಂದ ಕೊಂಡಾಡಿದ್ದಾರೆ. ತೆಲುಗಿನಲ್ಲೂ ಸದ್ಯ ಟೀಸರ್ 13 ಲಕ್ಷ ಮಂದಿಯ ಮನಗೆದ್ದು ಮುನ್ನುಗುತ್ತಿದೆ.
ಸ್ಯಾಂಡಲ್ವುಡ್, ಟಾಲಿವುಡ್ ನಂತರ ಸದ್ಯ ಕಾಲಿವುಡ್ನಲ್ಲಿ ಮದಗಜ ಚಿತ್ರದ ಟೀಸರ್ ರಿಲೀಸ್ ಆಗಿದೆ. ತಮಿಳೀನಲ್ಲಿ ಮದಯಾನೈ ಅಂತ ಟೈಟಲ್ ಫಿಕ್ಸ್ ಆಗಿದ್ದು, ಇದೇ 18 ರಂದು ಅಂದ್ರೆ 2 ದಿನಗಳ ಹಿಂದಷ್ಟೇ , ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ನಲ್ಲಿ ತಮಿಳು ಟೀಸರ್ ಬಿಡುಗಡೆಯಾಗಿದೆ.
ತೆಲುಗು ಟೀಸರ್ಗೆ ಸ್ವತಃ ವಾಯ್ಸ್ ನೀಡಿದ್ದ ಇದೀಗ ತಮಿಳು ಟೀಸರ್ಗೂ ದನಿಯಾಗಿದ್ದಾರೆ. ತಮಿಳು ಡೈಲಾಗ್ಸ್ ಶ್ರೀಮುರಳಿ ದನಿಯಲ್ಲಿ ಸಖತ್ ಆಗಿ ಮೂಡಿಬಂದಿದ್ದು, ಕಾಲಿವುಡ್ ಸಿನಿಪ್ರೇಮಿಗಳು ರೋರಿಂಗ್ ಸ್ಟಾರ್ ಪಂಚಿಂಗ್ ಡೈಲಾಗ್ಗೆ ಫಿದಾ ಆಗಿದ್ದಾರೆ. ಸದ್ಯ ತಮಿಳು ಟೀಸರ್ ಆರು ಲಕ್ಷ ವೀವ್ಸ್ ಪಡೆದುಕೊಂಡಿದೆ.