Top

ಸೆಲೆಬ್ರೆಟಿಗಳ ಹಾಟ್ ಫೇವರಿಟ್ ಮಾಲ್ಡೀವ್ಸ್​ನಲ್ಲಿ ಕ್ರಿಸ್ಮಿ

ಲವ್ ಮಾಕ್ಟೇಲ್ 2 ಹಾಡಿಗೆ ಹೆಜ್ಜೆ ಹಾಕಿರೋ ಮಿಲನಾ

ಸೆಲೆಬ್ರೆಟಿಗಳ ಹಾಟ್ ಫೇವರಿಟ್ ಮಾಲ್ಡೀವ್ಸ್​ನಲ್ಲಿ ಕ್ರಿಸ್ಮಿ
X

ಡಾರ್ಲಿಂಗ್​ ಜೋಡಿ ಕೃಷ್ಣ ಮತ್ತು ಮಿಲನಾ ಅದ್ದೂರಿಯಾಗಿ ಹಸಮಣೆ ಏರಿದ್ದು ಗೊತ್ತೇಯಿದೆ. ಇದೀಗ ಈ ಜೋಡಿ ಮಾಲ್ಡೀವ್ಸ್​ಗೆ ಪ್ರಯಾಣ ಬೆಳೆಸಿದ್ದು, ಕ್ವಾಲಿಟಿ ಟೈಂ ಸ್ಪೆಂಡ್ ಮಾಡುತ್ತಿದ್ದಾರೆ​.

ಸ್ಯಾಂಡಲ್​ವುಡ್​ನ ಕ್ಯೂಟ್ ಜೋಡಿ ಮಿಲನಾ ನಾಗರಾಜ್​ ಮತ್ತು ಡಾರ್ಲಿಂಗ್​ ಕೃಷ್ಣ ಈಗ ಸತಿಪತಿಗಳಾಗದ್ದಾರೆ. ಕಳೆದ ಕೆಲ ವರ್ಷಗಳಿಂದ ಪ್ರೀತಿಸಿತ್ತಿದ್ದ ಈ ಜೋಡಿ ವ್ಯಾಲೆಂಟೈನ್ಸ್ ಡೇ ಅಂದು ಅದ್ದೂರಿಯಾಗಿ ವಿವಾಹವಾಗಿದರು. ಲವ್ ಮಾಕ್ಟೈಲ್ ಜೋಡಿಯ ಮದುವೆ ಫೋಟೋಸ್ ಅಂತೂ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಭಿಮಾನಿಗಳು ಕೂಡ ಈ ಜೋಡಿಯ ದಾಂಪತ್ಯ ಜೀವನಕ್ಕೆ ಶುಭ ಕೋರಿದರು.

ಈ ಜೋಡಿ ತಮ್ಮ ಮದುವೆಯನ್ನ ತುಂಬಾ ವಿಶೇಷವಾಗಿ ಪ್ಲಾನ್ ಮಾಡಿದ್ರು. ಅಂದುಕೊಂಡಂತೆ ಡಾರ್ಲಿಂಗ್ ಕೃಷ್ಣ ತಮ್ಮ ಮನದರಸಿಯನ್ನ ವಿವಾಹವಾದ್ರು. ಸಿನಿ ಕರಿಯರ್ ಅಲ್ಲಿ ಕೂಡ ಬಹಳ ಎಚ್ಚರಿಕೆ ಹೆಜ್ಜೆ ಇಡ್ತಿರೋ ಈ ಜೋಡಿ, ವೈವಾಹಿಕ ಜೀವನಕ್ಕೆ ಕಾಲಿಡೋದರ ಜೊತೆಗೆ, ಮದುವೆ ದಿನದಂದೇ ಲವ್ ಮಾಕ್ಟೈಲ್ 2 ಹಾಡೊಂದನ್ನ ರಿಲೀಸ್ ಮಾಡಿ ಫ್ಯಾನ್ಸ್​ಗೆ ಸರ್ಪ್ರೈಸ್ ಕೊಟ್ಟಿದ್ರು. ಈಗಾಗಲೇ ಈ ಹಾಡು ಸಖತ್ ಕ್ರೇಜ್​ ಕ್ರಿಯೇಟ್ ಮಾಡಿದೆ.


ಇನ್ನು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರೋ ಈ ಕ್ಯೂಟ್ ಕಪಲ್ ಈಗ ಹನಿಮೂನ್ ನಲ್ಲಿ ಬ್ಯುಸಿ ಇದ್ದಾರೆ. ಈ ಸೆಲೆಬ್ರಿಟಿ ಜೋಡಿ ಹನಿಮೂನ್​ಗೆ ಆಯ್ಕೆ ಮಾಡ್ಕೊಂಡಿರೋ ಜಾಗ ಯಾವ್ದು ಗೊತ್ತಾ. ಸೆಲೆಬ್ರಿಟೀಸ್​ಗಳ ಹಾಟ್ ಫೇವರೇಟ್ ಅಂತಾನೇ ಕರೆಸಿಕೊಳ್ಳೋ ಮಾಲ್ಡೀವ್ಸ್. ಈ ಡಾರ್ಲಿಂಗ್ ಜೋಡಿ ಮಾಲ್ಡೀವ್ಸ್​ನಲ್ಲಿ ತಮ್ಮ ಸುಂದರ ಕ್ಷಣಗಳನ್ನ ಕಳೀತಿದ್ದಾರೆ.

ಮಾಲ್ಡೀವ್ ಪ್ರವಾಸವನ್ನ ಎಂಜಾಯ್ ಮಾಡುತ್ತಿರೋ ಲವ್ ಮಾಕ್ಟೈಲ್ ಜೋಡಿ ಒಂದಷ್ಟು ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಅಷ್ಟೇಅಲ್ಲದೇ ಲವ್ ಮಾಕ್ಟೈಲ್ 2 ಚಿತ್ರದ ಸಾಂಗ್​ಗೆ, ವಿಡಿಯೋ ಒಂದನ್ನ ಮಾಡಿ ಮಿಲನಾ ಅಪ್ಲೋಡ್ ಮಾಡಿದ್ದಾರೆ.

ಮಿಲನಾ-ಕೃಷ್ಣ ವೈಟ್ ಅಂಡ್ ವೈಟ್ ಡ್ರೆಸ್ ನಲ್ಲಿ ಕ್ಯಾಮಾರಾಗೆ ಪೋಸ್ ಕೊಟ್ಟಿದ್ದು , ಈ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇನ್ನು ಈಗಾಗಲೇ ಲವ್​ ಮಾಕ್ಟೇಲ್ 2 ಚಿತ್ರದ ಬಹುತೇಕ ಚಿತ್ರೀಕರಣವನ್ನ ಮುಗಿಸಿದ್ದಾರೆ. ಸದ್ಯ ಹನಿಮೂನ್​ನಿಂದ ವಾಪಸ್ಸಾಗ್ತ ಇದ್ದ ಹಾಗೇ ಉಳಿದ ಭಾಗದ ಚಿತ್ರೀಕರಣದಲ್ಲಿ ಬ್ಯುಸಿಯಾಗಲಿದ್ದಾರೆ ಡಾರ್ಲಿಂಗ್ ಜೋಡಿ.

Next Story

RELATED STORIES