Top

'ನ್ಯೂ ಇಯರ್' ಪಾರ್ಟಿಗೆ ಕನ್ನಡ ರ‍್ಯಾಪರ್ ಕಲರ್​ಫುಲ್​ ಸಾಂಗ್ಸ್

ನ್ಯೂ ಇಯಿರ್​ ಸೆಲೆಬ್ರೇಷನ್​ನ ಕೊಂಚ ಕಲರ್​ಫುಲ್​ ಮಾಡೋಕ್ಕೆ ಸ್ಯಾಂಡಲ್​ವುಡ್​ ರ‍್ಯಾಪರ್ರ್ಸ್​ ಸ್ಪೆಷಲ್​ ಸಾಂಗ್ಸ್​ ಗಿಫ್ಟ್ ಕೊಟ್ಟಿದ್ದಾರೆ

ನ್ಯೂ ಇಯರ್ ಪಾರ್ಟಿಗೆ  ಕನ್ನಡ ರ‍್ಯಾಪರ್ ಕಲರ್​ಫುಲ್​ ಸಾಂಗ್ಸ್
X

ಹೊಸವರ್ಷಕ್ಕೆ ಕೌಂಟ್​​ಡೌನ್​ ಶುರುವಾಗಿದೆ. ನ್ಯೂ ಇಯರ್​ ಸೆಲೆಬ್ರೇಷನ್​ನ ಮತ್ತಷ್ಟು ಕಲರ್​ಫುಲ್​ ಮಾಡೋಕ್ಕೆ, ಸ್ಯಾಂಡಲ್​ವುಡ್​ನ ರ್ಯಾಪರ್ಸ್​ ಸ್ಪೆಷಲ್​ ಸಾಂಗ್​​ಗಳನ್ನ ರಿಲೀಸ್ ಮಾಡಿದ್ದಾರೆ.

ನ್ಯೂ ಇಯರ್ ಅಂದ್ರೆ ಸೆಲೆಬ್ರೇಷನ್​ ಟೈಮ್. ಆದರೆ, ಈ ಬಾರಿ ಕೊರೊನಾ ಹಾವಳಿಯಿಂದ ಅದ್ಧೂರಿ ಆಚರಣೆಗೆ ಬ್ರೇಕ್​ ಬಿದ್ದಿದರು, ಸೆಲೆಬ್ರೇಷನ್​ನ ಕೊಂಚ ಕಲರ್​ಫುಲ್​ ಮಾಡೋಕ್ಕೆ ಸ್ಯಾಂಡಲ್​ವುಡ್​ ರ್ಯಾಪರ್ಸ್​ ಸ್ಪೆಷಲ್​ ಸಾಂಗ್ಸ್​ ಗಿಫ್ಟ್ ಕೊಟ್ಟಿದ್ದಾರೆ.

ರ್ಯಾಪರ್​​ ಚಂದನ್​ ಶೆಟ್ಟಿ ನ್ಯೂ ಇಯರ್​ಗೆ ಸ್ಪೆಷಲ್ ಸಾಂಗ್​ವೊಂದನ್ನ ರಿಲೀಸ್ ಮಾಡಿದ್ದಾರೆ. ಪಾರ್ಟಿ ಫ್ರೀಕ್​ ಅಂತ ಶುರುವಾಗೋ ಈ ಹಾಡಿನಲ್ಲಿ ಚಂದನ್​ ಶೆಟ್ಟಿ, ನಟಿ ನಿಶ್ವಿಕಾ ನಾಯ್ಡು ಹಾಗೂ ನಿವೇದಿತಾ ಗೌಡ ಹೆಜ್ಜೆ ಹಾಕಿದ್ದಾರೆ. ಈಗಾಗಲೇ ಸೋಶಿಯಲ್​ ಮೀಡಿಯಾದಲ್ಲಿ ಈ ಸಾಂಗ್​ ವೈರಲ್​ ಆಗಿದ್ದು, ಯಂಗ್​ಸ್ಟರ್ಸ್​ ಗಮನ ಸೆಳಿತಿದೆ.

ಇನ್ನು ಸ್ಯಾಂಡಲ್​ವುಡ್​ ಮತ್ತೊಬ್ಬ ಸ್ಟಾರ್ ಆಲ್​ ಓಕೆ ಕೂಡ ಹೊಸ ವರ್ಷಕ್ಕೆ ಸಖತ್​ ಸಾಂಗ್​ವೊಂದನ್ನ ಗಿಫ್ಟ್​ ಆಗಿ ಕೊಟ್ಟಿದ್ದಾರೆ. ಈ ಕ್ರೇಜಿ ಸಾಂಗ್​ಗೆ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್ ಬ್ಯಾಗ್ರೌಂಡ್​ ವಾಯ್ಸ್​ ಕೊಟ್ಟಿದ್ದು, ಸ್ವತಃ ಆಲ್​ ಓಕೆ ಹಾಡಿ, ಪರ್ಫಾರ್ಮ್​ ಮಾಡಿದ್ದಾರೆ. ರಿಲೀಸ್​ ಆದ ಒಂದೇ ದಿನಕ್ಕೆ ಮಿಲಯನ್​ ಗಟ್ಟಲೇ ವೀವ್ಸ್​ ಪಡೆದಿದ್ದು, ಈ ನಾಟಿ ಸ್ಟೈಲ್​ ಸಾಂಗ್​ ಎಲ್ಲರಿಗೂ ಇಷ್ಟವಾಗುತ್ತಿದೆ.

ಈ ಎರಡು ಹಾಡುಗಳು ಜೊತೆಗೆ ಮತ್ತೊಂದು ಪಾರ್ಟಿ ಸಾಂಗ್​ ರಿಲೀಸ್​ ಆಗಿದ್ದು, ಸಾಟರ್​ಡೇ ನೈಟ್ ಅಂತ ಈ ಹಾಡು ಶುರುವಾಗುತ್ತೆ. ರ್ಯಾಪ್​ ಲೋಕದ ಹೊಸ ಪ್ರತಿಭೆ ಅಧ್ವಿಕ್​ ಈ ಸಾಂಗ್​ ಮಾಡಿದ್ದು, ಸ್ವತಃ ಹಾಡಿ, ಕುಣಿದು ಕುಪ್ಪಳಿಸಿದ್ದಾರೆ. ಅಷ್ಟೇ ರಿಚ್ ಆಗಿ ಸಾಂಗ್​ ಶೂಟಿಂಗ್​ ಕೂಡ ಮಾಡಿದ್ದು, ಸಾಟರ್​ ಡೇ ನೈಟ್​ಗೆ, ಪಾರ್ಟಿ ಲವ್ವರ್ಸ್​ ಫಿದಾ ಆಗಿದ್ದಾರೆ.

Next Story

RELATED STORIES