Top

ಸ್ಯಾಂಡಲ್​​ವುಡ್​ನಲ್ಲಿ ಶತಕ ಬಾರಿಸಿದ ಜಾಕಿಗೆ ದಶಕದ ಸಂಭ್ರಮ

2010 ಅಕ್ಟೋಬರ್​ 14ರಂದು ತೆರೆಕಂಡ ಸೂಪರ್​ ಡೂಪರ್​ ಹಿಟ್ ಸಿನಿಮಾ ಜಾಕಿಗೆ ಇಂದು ದಶಕದ ಸಂಭ್ರಮ.

ಸ್ಯಾಂಡಲ್​​ವುಡ್​ನಲ್ಲಿ ಶತಕ ಬಾರಿಸಿದ ಜಾಕಿಗೆ ದಶಕದ ಸಂಭ್ರಮ
X

ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್​ ಸಿನಿಕರಿಯರ್​ನಲ್ಲಿ ದಾಖಲೆ ಬರೆದ ಸಿನಿಮಾಗಳು ಸಾಕಷ್ಟಿವೆ. ಶತದಿನೋತ್ಸವ ಪೂರೈಸಿದ ಚಿತ್ರಗಳು ಬೇಕಾದಷ್ಟಿವೆ. ಅಂತಹ ಒಂದು ಚಿತ್ರಕ್ಕೆ ಇಂದಿಗೆ 10 ವರ್ಷಗಳ ಸಂಭ್ರಮ. ಅಭಿಮಾನಿಗಳು ಖುಷಿಯನ್ನ ಸೋಶಿಯಲ್​ ಮೀಡಿಯಾದಲ್ಲಿ ಸೆಲೆಬ್ರೇಟ್ ಮಾಡ್ತಾ ಇದ್ದಾರೆ.

2010 ಅಕ್ಟೋಬರ್​ 14ರಂದು ತೆರೆಕಂಡ ಸೂಪರ್​ ಡೂಪರ್​ ಹಿಟ್ ಸಿನಿಮಾ ಜಾಕಿಗೆ ಇಂದು ದಶಕದ ಸಂಭ್ರಮ. ಔಟ್ ಅಂಡ್​ ಔಟ್ ಮಾಸ್ ಸಬ್ಜೆಕ್ಟ್ ಇದಾಗಿದ್ದು, ಪಕ್ಕಾ ಲೋಕಲ್​ ಹುಡುಗನಾಗಿ ಪವರ್​ಸ್ಟಾರ್ ತೆರೆಮೇಲೆ ಕಾಣಿಸಿಕೊಂಡಿದರು. ಲವ್​ ಸ್ಟೋರಿ, ಆ್ಯಕ್ಷನ್, ಜೊತೆಗೆ ಹ್ಯೂಮನ್​ ಟ್ರಾಫಿಕಿಂಗ್ ಮಾಫಿಯಾ ಸುತ್ತ ಸುತ್ತೋ ಕಥೆ ಇದಾಗಿತ್ತು.

10 ವರ್ಷಗಳ ಹಿಂದೆಯೇ ಸುಮಾರು 8 ಕೋಟಿ ಬಜೆಟ್​ನಲ್ಲಿ ತಯಾರಾಗಿದ್ದ ಈ ಸಿನಿಮಾ, ಪೂರ್ಣಿಮ ಎಂಟರ್​ಪ್ರೈಸಸ್​ ಬ್ಯಾನರ್​ ಅಡಿಯಲ್ಲಿ ತಯಾರಾಗಿತ್ತು. ಮೈಸೂರು ಬೆಂಗಳೂರು ಸೇರಿದಂತೆ, ಇಟಲಿ, ನಮಿಬಿಯಾ ಚಿತ್ರೀಕರಣ ನಡೆದಿತ್ತು. ಜಾಕಿ ಚಿತ್ರದ ಎಲ್ಲಾ ಹಾಡುಗಳು ಸೂಪರ್​ ಹಿಟ್ ಲಿಸ್ಟ್ ಸೇರಿದ್ವು. ವಿ. ಹರಿಕೃಷ್ಣ ಸಂಗೀತ ನಿರ್ದೇಶನದ ಜಾಕಿ ಜಾಕಿ, ಅಂದರ್ ಬಾಹರ್ ಹಾಡುಗಳು ಅಪ್ಪು ಮಾಸ್​ ಅಭಿಮಾನಿಗಳಿಗೆ ಸಖತ್​ ಕಿಕ್​ ಕೊಟ್ಟಿತ್ತು. ಅದರಲ್ಲೂ ಜಾಕಿ ಹಾಡಿನಲ್ಲಿ ನಿರ್ದೇಶಕ ಸೂರಿ, ಯೋಗರಾಜ್​ ಭಟ್, ವಿ.ಹರಿಕೃಷ್ಣ ಕಾಣಿಸಿಕೊಂಡು, ಸಖತ್​ ಡಿಫ್ರೆಂಟಾಗಿ ಈ ಹಾಡನ್ನ ಪಿಕ್ಚರೈಸ್ ಮಾಡಲಾಗಿತ್ತು.

ಇನ್ನು ಜಾಕಿ ಸಿನಿಮಾ ಪುನೀತ್ ರಾಜ್​ಕುಮಾರ್ ಅಭಿನಯದ 15 ನೇ ಸಿನಿಮಾ ಆಗಿದ್ದು, ಸೂರಿ ಫಸ್ಟ್ ಟೈಮ್​ ಅಪ್ಪುಗೆ ಆ್ಯಕ್ಷನ್ ಕಟ್ ಹೇಳಿದರು. ಅಂದ್ಹಾಗೇ ಅಪ್ಪು ಫಸ್ಟ್ ಟೈಮ್ ಈ ಚಿತ್ರದಲ್ಲಿ ರಿಯಲ್ ಆಗಿ ಫೈರ್ ಫೈಟ್ ಮಾಡಿದ್ದು, ಆ ಕಾಲಕ್ಕೆ ಸಖತ್​ ಸುದ್ದಿಯಾಗಿತ್ತು.

ಜಾಕಿ ಚಿತ್ರದಲ್ಲಿ ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್​ಗೆ ಜೋಡಿಯಾಗಿ ಮಲೆಯಾಳಂ ನಟಿ ಭಾವನ ಕಾಣಿಸಿಕೊಂಡಿದರು. ಅಷ್ಟೇ ಅಲ್ಲಾ ರಂಗಾಯಣ ರಘು, ಹರ್ಷಿಕಾ ಪೊಣಚ್ಚ, ಬುಲೆಟ್ ಪ್ರಕಾಶ್, ಮಿತ್ರಾ ಹೀಗೆ ಸಾಕಷ್ಟು ಕಲಾವಿದರು ಜಾಕಿಯಲ್ಲಿ ಬಣ್ಣ ಹಚ್ಚಿದರು. ಜಾಕಿ ಸಿನಿಮಾ ಸೂಪರ್​ ಡೂಪರ್​ ಹಿಟ್ ಆಗಿತ್ತು. ಸೂರಿ, ಅಪ್ಪು ಕಾಂಬಿನೇಷನ್​ಗೆ ಸಾಕಷ್ಟು ಪ್ರಶಂಸೆ ಸಿಕ್ಕಿತ್ತು, ಬಾಕ್ಸಾಫೀಸ್​ನಲ್ಲೂ ದೊಡ್ಡ ಮಟ್ಟದ ಕಲೆಕ್ಷನ್ ಮಾಡೋ ಮೂಲಕ ಧೂಳೆಬ್ಬಿಸಿತ್ತು.

ಸದ್ಯ ಜಾಕಿ ಚಿತ್ರಕ್ಕೆ 10 ವರ್ಷಗಳ ಸಂಭ್ರಮ. ಈ ಖುಷಿಯನ್ನ ಪವರ್​ಸ್ಟಾರ್ ಫ್ಯಾನ್ಸ್​ ಸೋಶಿಯಲ್​ ಮೀಡಿಯಾ ಮೂಲಕವೇ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಚಿತ್ರದ ಕಾಮನ್​ ಡಿಪಿ ಬಿಡುಗಡೆ ಮಾಡಿದ್ದು, ಇದನ್ನ ದೊಡ್ಮನೆ ಕುಟುಂಬದ ಕುಡಿ ಧಿರೇನ್​ ರಾಮ್​ಕುಮಾರ್ ಲಾಂಚ್ ಮಾಡಿದ್ದಾರೆ ಸೋಶೀಯಲ್​ ಮೀಡಿಯಾದಲ್ಲಿ ಅಭಿಮಾನಿಗಳು ಈ ಡಿಪಿಯನ್ನ ಟ್ರೆಂಡ್​ ಮಾಡುತ್ತಿದ್ದಾರೆ.

ಸದ್ಯ ಜಾಕಿ ಸಿನಿಮಾಗೆ 10 ವರ್ಷಗಳ ಸಂಭ್ರಮದಲ್ಲಿದ್ದು, ದೊಡ್ಮನೆ ಅಭಿಮಾನಿಗಳು ಅದ್ದೂರಿಯಾಗೇ ಈ ಖುಷಿಯನ್ನ ಸೆಲೆಬ್ರೇಟ್ ಮಾಡೋ ಪ್ಲಾನ್​ನಲ್ಲಿದರು ಆದರೆ ಕೊರೊನಾ ಸಮಸ್ಯೆಯಿಂದ ಈ ಸಂಭ್ರಮ ಸೋಶಿಯಲ್​ ಮೀಡಿಯಗೆ ಸೀಮಿತವಾಗಿದೆ.

Next Story

RELATED STORIES