Top

ಡಾಲಿ, ವಿಜಿ ನಡುವೆ ಐಪಿಎಲ್ ಡೈಲಾಗ್ ಕದನ

ಮುಲಾಜೇ ಇಲ್ಲ ಆಲ್​ವೇಸ್ ಆರ್​ಸಿಬಿ ಅಂತಿದೆ ಸಲಗ, ಈ ಟೀಮ್​ನ ಪವರ್ ಪ್ಲೇ ಟೀಸರ್​​ಗೆ ಕ್ಲೀನ್ ಬೋಲ್ದ್​ ಆದ ಫಾನ್ಸ್​.

ಡಾಲಿ, ವಿಜಿ ನಡುವೆ ಐಪಿಎಲ್ ಡೈಲಾಗ್ ಕದನ
X

ಇದೀಗ ಎಲ್ಲೆಲ್ಲೂ ಐಪಿಎಲ್​ ಫೀವರ್​​. ಆರ್​ಸಿಬಿ ಗೆ ಜೈ, ಈ ಸಲ ಕಪ್​ ನಮ್ದೆ ಫೋಷಣೆಗಳು ಮತ್ತೆ ಅಬ್ಬರಿಸ್ತಾ ಇದೆ. ಹಾಗೇ ಈ ಬಾರಿ ಆರ್​ಸಿಬಿಗೆ ನಮ್ಮ ಸ್ಯಾಂಡಲ್​​ವುಡ್​ ಸೆಲೆಬ್ರೆಟಿಗಳು ಚಿಯರ್​ಅಪ್​ ಮಾಡ್ತಾ ಇದ್ದಾರೆ.ಸಲಗ ಟೀಂ ನಿಂದ ರಿಲೀಸ್​ ಆಗಿರೋ ಈ ಟೀಸರ್​ ಕೂಡ ಆರ್​​ಸಿಬಿ ಸಪೋರ್ಟ್​ ಮಾಡ್ತಿದ್ದು, ಟೀಸರ್​​ ಡೈಲಾಗ್​ಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ.

'ನಾನು ಹೊಡಿಬೇಕು ಅಂತ ಡಿಸೈಡ್​ ಮಾಡಿದ್ರೆ. ಸೈನ್ಯ ಎಷ್ಟೇ ದೊಡ್ಡದಿರ್ಲಿ ನುಗ್ಗಿ ಒಬ್ನೇ ಹೊಡೆತಿನಿ ಹೋಡಿತಿನಿ ಕಣೋ' ಐಪಿಎಲ್​​ ಜ್ವರ ನೆತ್ತಿಗೇರುತ್ತಿದೆ. ಕೊರೊನಾ ಕಂಟಕದಿಂದ ಐಪಿಎಲ್ ಹೊರದೇಶಕ್ಕೆ ಶಿಫ್ಟ್ ಆಗಿದ್ರೂ ಕ್ರಿಕೆಟ್ ಅಭಿಮಾನಿಗಳ ಜೋಶ್​ ಮಾತ್ರ ಕೊಂಚವೂ ಕಡಿಮೆಯಾಗಿಲ್ಲ. ಮರುಳುಗಾಡಿನಲ್ಲಿ ನಡೆಯುತ್ತಿರುವ ಸಮರಕಲಿಗಳ ಮಹಾಯುದ್ಧಕ್ಕೆ ಇದೀಗ ಸಲಗ ಡೈಲಾಗ್ ಕದನ ಬೂಸ್ಟ್​ ನೀಡಿದೆ. ಡೈಲಾಗ್​​ನಲ್ಲೇ ಆರ್​ಸಿಬಿ ಪರ ದುನಿಯಾ ವಿಜಯ್ ಬ್ಯಾಟಿಂಗ್ ಮಾಡಿದ್ದಾರೆ.

ಸಲಗ ಟೀಮ್​ ರಿಲೀಸ್​ ಮಾಡಿರೋ ಈ ಡೈಲಾಗ್ ಭಾರಿ ಸೌಂಡ್​ ಮಾಡುತ್ತಿದೆ. ಆರ್​ಸಿಬಿ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಐಪಿಎಲ್​​​ ತಂಡಗಳಲ್ಲಿ ಅತಿ ಹೆಚ್ಚು ಫ್ಯಾನ್ಸ್ ಇರೋದು ಆರ್​ಸಿಬಿ ತಂಡಕ್ಕೆ. ತಂಡ ಅದೆಷ್ಟೋ ಬಾರಿ ಸೋತ್ರೂ. ಪ್ರತಿ ಸಲ ಈ ಬಾರಿ ಕಪ್​​ ನಮ್ದೆ ಅಂತಾ ಆರ್​ಸಿಬಿಗೆ ಚಿಯರ್ ಮಾಡ್ತಾರೆ ಆರ್​ಸಿಬಿ ಫಾನ್ಸ್​. ಅದೇ ತರ ಈ ಬಾರಿ ಸಲಗ ತಂಡ ಕೂಡ ಚಿಯರ್ ಮಾಡಿದೆ. ಅದಕ್ಕಾಗಿ ಡೈಲಾಗ್​ ಟೀಸರ್ ಅನ್ನು ಬಿಡುಗಡೆ ಮಾಡಿದೆ.

ಮುಲಾಜೇ ಇಲ್ಲ ನಾವು ಯಾವತ್ತಿಗೂ ಆರ್​ಸಿಬಿ ಪರ ಇದ್ದೇವೆ ಅಂತ ಸಲಗ ಟೀಮ್ ಪವರ್ ಪ್ಲೇ ಟೀಸರ್ ಬಿಡುಗಡೆ ಮಾಡಿದೆ. ಈ ಡೈಲಾಗ್​​ ಟೀಸರ್​​ನಲ್ಲಿ ಖಡಕ್​ ಪೊಲೀಸ್​ ಆಫೀಸರ್ ಆಗಿರೋ ಡಾಲಿ ಧನಂಜಯ್​ ನೀನ್​ ಏನ್ ಐಪಿಎಲ್​ ಪ್ರಾಂಚೈಸಿಯೇನೋ(?) ಅಂತ ದುನಿಯಾ ವಿಜಿಯನ್ನು ಕೆಣಕುತ್ತಾರೆ. ಅದಕ್ಕೆ ತಿರುಗೇಟು ಕೊಡುವ ವಿಜಿ. ಸೈನ್ಯ ಎಷ್ಟೇ ದೊಡ್ಡದಿರ್ಲಿ ನುಗ್ಗಿ ಒಬ್ನೇ ಹೊಡೆತಿನಿ ಹೋಡಿತಿನಿ ಕಣೋ. ಘರ್ಜಿಸ್ತಾರೆ. ಇದು ಆರ್​ಸಿಬಿ ತಂಡವನ್ನು ಗಮನದಲ್ಲಿಟ್ಟುಕೊಂಡು ಹೊಡೆದ ಡೈಲಾಗ್. ಇದೀಗ ಈ ಡೈಲಾಗ್​ ಅಭಿಮಾನಿಗಳ ಮನಗೆದ್ದಿದೆ.

ಸಲಗ ಸಿನಿಮಾ ಸೆಟ್ಟೇರಿದಾಗಿನಿಂದಲೂ ಅಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಟೀಸರ್, ಸಾಂಗ್​​ಗಳನ್ನು ಬಿಟ್ಟು ಸಿನಿ ಪ್ರೇಕ್ಷಕರನ್ನು ಅಟ್ರ್ಯಾಕ್ಟ್ ಮಾಡುತ್ತಲೇ ಇದೆ. ಅದರಲ್ಲೂ ಇತ್ತಿಚೀಗೆ ಬಿಡುಗಡೆಯಾದ ಮಳೆಯೋ ಮಳೆ ಸಾಂಗ್​​ ಸಖತ್ ಸೌಂಡ್​ ಮಾಡಿತ್ತು. ಈ ಹಾಡನ್ನು ಹಲವು ಕ್ರಿಕೆಟ್​ಗರು ಕೂಡ ಮೆಚ್ಚಿಕೊಂಡಿದರು. ಹಾಡಿನ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್​ ಕೂಡ ಮಾಡಿದರು. ಇದೀಗ ಅದೇ ಕ್ರಿಕೆಟ್​ ಗುಂಗನ್ನು ಬಳಸಿಕೊಂಡು ಫಾನ್ಸ್​ ಅನ್ನು ಮತ್ತೊಮ್ಮೆ ತಮ್ಮತ್ತ ತಿರುಗಿ ನೋಡುವಂತೆ ಮಾಡಿದೆ ಸಲಗ ಟೀಮ್​

ಡಾಲಿ ಹಾಗೂ ದುನಿಯಾ ವಿಜಿ ನಡುವಿನ ಬೆಂಕಿ ಡೈಲಾಗ್​ ಗೆ ಆರ್​​​ಸಿಬಿ ಫಾನ್ಸ್​ ಫುಲ್ ಫಿದಾ ಆಗಿದ್ದಾರೆ. ಸಿನಿ ಪ್ರೇಕ್ಷರನ್ನು ಸೆಳೆಯುವಲ್ಲಿ ಕೂಡ ಈ ಡೈಲಾಗ್​ ಟೀಸರ್​ ಯಶಸ್ವಿಯಾಗಿದೆ. ಈ ಮೂಲಕ ಸಲಗ ಮತ್ತೊಮ್ಮೆ ಘೀಳಿಟ್ಟು ಘರ್ಜಿಸಿದೆ.

Next Story

RELATED STORIES