Top

ಕರ್ನಾಟಕ ಚಿತ್ರಕಲಾ ಪರಿಷತ್​ನಿಂದ ವಿನೂತನ ಕಾರ್ಯಕ್ರಮ

  • ಕಾರ್ವಾಲೋ ಕಾದಂಬರಿ ಕಾರನಿಗೆ 83ರ ಜನ್ಮಸಂಭ್ರಮ.
  • ಕ್ಯಾಮೆರಾ ಕಣ್ಣಲ್ಲಿಹದ್ದುಗಳ ಅದ್ಭುತ ಲೋಕದ ದಿಗ್ಧರ್ಶನ.
  • ನೋಡುಗರ ಕಣ್ಮನ ಸೆಳೆಯುವ ಹದ್ದುಗಳ ಛಾಯಾಚಿತ್ರಗಳು.

ಕರ್ನಾಟಕ ಚಿತ್ರಕಲಾ ಪರಿಷತ್​ನಿಂದ ವಿನೂತನ ಕಾರ್ಯಕ್ರಮ
X

ಅವನತಿಯ ಅಂಚಿನತ್ತ ಸಾಗಿರುವ ಹಲವಾರು ಪ್ರಾಣಿಪಕ್ಷಿಗಳನ್ನ ಉಳಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಮುಂದಿನ ಪೀಳಿಗೆಗೆ ಇಂತಹ ಪಕ್ಷಿ,ಪ್ರಾಣಿಗಳಿದ್ವು ಅನ್ನೋ ಕುರುಹುಗಳನ್ನ ಕಾಪಾಡಬೇಕಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ ಹೊಸ ವಿನೂತನ ಹೆಜ್ಜೆಯನ್ನಿಟ್ಟಿದೆ. ಕಾರ್ವಾಲೋ ಕಾದಂಬರಿ ಕಾರನ ಜನ್ಮದಿನದಂದೇ ಅಭೂತ ಪೂರ್ವ ಕಲಾಕೃತಿಗಳು, ಚಿತ್ರಪ್ರದರ್ಶನವನ್ನ ಆಯೋಜಿಸುತ್ತಿದೆ. ಈ ಭಾರಿ ಹದ್ದುಗಳು ಹಾಗೂ ಕೊರೊನಾ ವೈರಸ್ ಕುರಿತ ವಿಶೇಷ ಸಾಕ್ಷ್ಯಚಿತ್ರಗಳ ಪ್ರದರ್ಶನವನ್ನ ಹಮ್ಮಿಕೊಂಡಿದೆ.

ಸಾಹಿತಿ ಕಾದಂಬರಿ ಕಾರ ದಿವಂಗತ ಪೂರ್ಣ ಚಂದ್ರ ತೇಜಸ್ವಿಯವರ ೮೩ ನೇ ಹುಟ್ಟುಹಬ್ಬದ ಸವಿನೆನಪಿಗಾಗಿ ಕರ್ನಾಟಕ ಚಿತ್ರಕಲಾ ಪರಿಷತ್ ಕಳೆದ ಎಂಟು ವರ್ಷಗಳಿಂದ ವಿನೂತ ಕಾರ್ಯಕ್ರಮಗಳನ್ನ ನಡೆಸಿಕೊಂಡು ಬರ್ತಿದೆ. 2013 ರಿಂದ ತೇಜಸ್ವಿ ಜೀವ ಲೋಕ ಹೆಸರಿನಲ್ಲಿ ಹಕ್ಕಿಲೋಕ, ಕೀಟಲೋಕ, ಪುಷ್ಪಲೋಕ, ಪರಾಗಸ್ಪರ್ಶಿಗಳು, ಜೇಡಲೋಕ, ಬಾವಲಿ ಲೋಕ ಕಾರ್ಯಕ್ರಮ ಆಯೋಜಿಸಿತ್ತು. ಈ ಭಾರಿ ಹದ್ದುಗಳ ಲೋಕ ಎಂಬ ಕಾರ್ಯಕ್ರಮದ ಮೂಲಕ ಅವನತಿಯ ಅಂಚಿನಲ್ಲಿರುವ ಹದ್ದುಗಳ ಹಲವು ಪ್ರಭೇದಗಳ ಚಾಯಾಚಿತ್ರ ಪ್ರದರ್ಶನವನ್ನ ಹಮ್ಮಿಕೊಂಡಿದೆ. ಜೊತೆಗೆ ಕೊರೊನಾ ಸಂದರ್ಭವಾಗಿರೋದ್ರಿಂದ ವಿವಿಧ ವೈರಸ್​ಗಳ ಕುರಿತಾದ ಫೋಟೋ ಎಕ್ಸಿಬಿಷನ್ ಇಟ್ಕೊಂಡಿದೆ. ಇಂದಿನಿಂದ ಸೆಪ್ಟಂಬರ್ 15 ರವರೆಗೆ ಈ ಛಾಯಾಚಿತ್ರ ಪ್ರದರ್ಶನ ಇರಲಿದೆ. ಇಂದು ಚಿತ್ರಕಲಾ ಪರಿಷತ್ ಹಾಗೂ ಪ್ರತಿಷ್ಠಾನದ ಅಧ್ಯಕ್ಷ ಬಿ.ಎಲ್.ಶಂಕರ್ ಚಾಲನೆ ನೀಡಿದರು. ಫೋಟೋ ಎಕ್ಸಿಬಿಷನ್ ಜೊತೆ ವಿವಿಧ ಊಟೋಪಚಾರಗಳ ಕುರಿತ ಮೇಳವೂ ಇರಲಿದೆ.

ಸರವಣನ್ ಜನಕರಾಜನ್, ಉದಯ್ ಕುಮಾರ್, ರಾಜೇಶ್ ಪನ್ವಾರ್, ಮೋಹನ್, ಅರುಣ್, ಸತೀಶ್ ಕುಮಾರ್ ಸೇರಿದಂತೆ ಪ್ರಸಿದ್ಧ ಛಾಯಾಚಿತ್ರಕಾರರಿಂದ ಸೆರೆಹಿಡಿಯಲ್ಪಟ್ಟ ಹದ್ದುಗಳ ಫೋಟೋಸ್ ನೋಡುಗರನ್ನ ಸೂಜಿಗಲ್ಲಿನಂತೆ ಸೆಳೆಯಲಿದೆ. ಈಗಿನ ಪೀಳಿಗೆ ನೋಡಿರದ ಹಲವು ಹದ್ದುಗಳ ಪರಿಚಯವನ್ನ ಈ ಪ್ರದರ್ಶನ ಮಾಡಿಸಲಿದೆ. ಇದರ ಜೊತೆ ವಿವಿಧ ವೈರಸ್ ಕುರಿತ ಛಾಯಾಚಿತ್ರಗಳು ಗಮನಸೆಳೆಯಲಿವೆ.

ಒಟ್ನಲ್ಲಿ ಪರಿಸರದ ಬಗ್ಗೆ ಸಾಕಷ್ಟು ಅಭಿಮಾನವನ್ನ ಇಟ್ಕೊಂಡಿದ್ದ ಪೂರ್ಣಚಂದ್ರ ತೇಜಸ್ವಿಯವರ ಹುಟ್ಟಿದದಿನವನ್ನ ನೆನೆಪಿನಲ್ಲುಳಿಯುವಂತೆ ಮಾಡಲು ಚಿತ್ರಕಲಾ ಪರಿಷತ್ ಈ ವಿನೂತನ ಕಾರ್ಯಕ್ರಮವನ್ನ ಏರ್ಪಡಿಸಿದೆ. ಈ ಭಾರಿಯ ಹದ್ದುಗಳ ವಿಶೇಷ ಛಾಯಾಚಿತ್ರ ಪ್ರದರ್ಶನ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯಲಿದೆ.

Next Story

RELATED STORIES