Top

ರಂಗನಾಯಕನಿಗಾಗಿ ಜೊತೆಯಾದ ಗುರುಪ್ರಸಾದ್​-ಜಗ್ಗೇಶ್​

ರಾಯರ ಸನ್ನಿಧಿಯಲ್ಲಿ ರಂಗನಾಯಕನಿಗೆ ಮುಹೂರ್ತ

ರಂಗನಾಯಕನಿಗಾಗಿ ಜೊತೆಯಾದ ಗುರುಪ್ರಸಾದ್​-ಜಗ್ಗೇಶ್​
X

ಸ್ಯಾಂಡಲ್​ವುಡ್​ನ ಸೂಪರ್​ ಹಿಟ್ ಕಾಂಬಿನೇಷನ್​ ನವರಸನಾಯಕ ಜಗ್ಗೇಶ್ ಮತ್ತು ಡೈರೆಕ್ಟರ್ ಗುರುಪ್ರಸಾದ್​ ಲಾಂಗ್​​ ಗ್ಯಾಪ್​ ನಂತರ ಸಿನಿಮಾ ಮಾಡೋ ಸುದ್ದಿ ಈಗಾಗಲೆ ಗೊತ್ತಿದೆ. ಆದರೆ ಈಗ ಈ ಚಿತ್ರಕ್ಕೆ ಅಧಿಕೃತವಾಗಿ ಮುಹೂರ್ತ ನೆರವೇರಿದ್ದು, ಸದ್ಯದಲ್ಲೇ ಶೂಟಿಂಗ್ ಶುರುವಾಗಲಿದೆ.

ಗುರುಪ್ರಸಾದ್-ಜಗ್ಗೇಶ್ ಸ್ಯಾಂಡಲ್‍ವುಡ್‍ನ ಹಿಟ್ ಜೋಡಿ. ಮಠ, ಹಾಗೂ ಎದ್ದೇಳು ಮಂಜುನಾಥ ಸಿನಿಮಾಗಳ ಮೂಲಕ ಈ ಜೋಡಿ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಈ ಎರಡು ಸಿನಿಮಾಗಳು ಚಂದನವನದಲ್ಲಿ ಮ್ಯಾಜಿಕ್ ಮಾಡಿತ್ತು. ಈ ಸಿನಿಮಾಗಳು ಪ್ರೇಕ್ಷಕರಿಗೆ ಮನರಂಜನೆಯ ರಸದೌತಣವನ್ನು ಉಣಬಡಿಸಿತ್ತು. ಜಗ್ಗೇಶ್​-ಗುರುಪ್ರಸಾದ್​ ಕಾಂಬೀನೇಷನ್​ನಲ್ಲಿ ಮೂಡಿ ಬಂದ ಈ ಸಿನಿಮಾಗಳು ಸ್ಯಾಂಡಲ್​ವುಡ್​ನಲ್ಲಿ ಹೊಸ ಟ್ರೆಂಡ್​ ಸೆಟ್​ ಮಾಡಿತ್ತು.

ಇಂತಹ ಜೋಡಿ ಮೇಲೆ ಅದ್ಯಾರ ಕಣ್ಣು ಬಿತ್ತೋ ಏನೋ? ದೋಸ್ತಿಗಳಾಗಿದ್ದವರು, ವೈರಿಗಳಂತಾಗಿದ್ದರು. ಆದರೆ ಈಗ ಇಬ್ಬರು ಮತ್ತೆ ಜೊತೆಯಾಗಿ ಸಿನಿಮಾ ಮಾಡ್ತಿದ್ದಾರೆ. ಈ ಸೂಪರ್ ಹಿಟ್ ಜೋಡಿ ಮತ್ತೆ ಕಂಬ್ಯಾಕ್ ಆಗಿದೆ. ಬರೋಬ್ಬರಿ 11 ವರ್ಷದ ಬಳಿಕ ಗುರುಪ್ರಸಾದ್​-ಜಗ್ಗೇಶ್​ ಕಾಂಬಿನೇಷನ್​ನಲ್ಲಿ ಸಿನಿಮಾವೊಂದು ಸೆಟ್ಟೇರಿದೆ.

ಮಠ, ಜಗ್ಗೇಶ್ ವೃತ್ತಿ ಬದುಕಿನ ಮೈಲುಗಲ್ಲಾದ ಸಿನಿಮಾ. ಗುರುಪ್ರಸಾದ್ ನಿರ್ದೇಶನದ ಚೊಚ್ಚಲ ಚಿತ್ರ ಚಿತ್ರರಂಗದ ಹಾದಿಯನ್ನೇ ಬದಲಿಸಿದ್ದ ಚಿತ್ರ. ಮಠ, ಎದ್ದೇಳು ಮಂಜುನಾಥ ಸಿನಿಮಾಗಳ ನಂತರ ಸೂಪರ್ ಹಿಟ್ ಕಾಂಬಿನೇಷನ್ ಮತ್ತೆ ಬರ್ತಿದೆ ಎಂಬ ಸುದ್ದಿ ಈ ಹಿಂದೆಯೇ ಘೋಷಣೆಯಾಗಿತ್ತು. ನವರಸ ನಾಯಕ ಜಗ್ಗೇಶ್ ಮತ್ತು ನಿರ್ದೇಶಕ ಗುರುಪ್ರಸಾದ್ ಸುಮಾರು 11 ವರ್ಷದ ನಂತರ ಒಟ್ಟಿಗೆ ಸಿನಿಮಾ ಮಾಡ್ತಿದ್ದಾರೆ. ಕನ್ನಡದ ಯಶಸ್ವಿ ಜೋಡಿಯ ಹೊಸ ಚಿತ್ರ ರಂಗನಾಯಕ ಇದೀಗ ಅಧಿಕೃತವಾಗಿ ಸೆಟ್ಟೇರಿದೆ.

ನವರಸ ನಾಯಕ ಜಗ್ಗೇಶ್​ ಗುರುರಾಯರ ಪರಮಭಕ್ತ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಹೀಗಾಗಿ ರಾಯರ ಸನ್ನಿಧಿಯಲ್ಲೇ ರಂಗನಾಯಕ ಸಿನಿಮಾಗೆ ಮುಹೂರ್ತ ನೆರವೇರಿದೆ. ಬಸವನಗುಡಿಯ ರಾಯರ ಮಠದಲ್ಲಿ ಸಿನಿಮಾದ ಮುಹೂರ್ತ ನೆರವೇರಿದ್ದು, ಚಿತ್ರೀಕರಣ ಸಹ ಪ್ರಾರಂಭವಾಗಿದೆ. ರಂಗನಾಯಕ ಸಿನಿಮಾ ಮುಹೂರ್ತದ ಫೋಟೋ ಹಂಚಿಕೊಂಡಿರುವ ನಟ ಜಗ್ಗೇಶ್ ಟ್ವಿಟ್ಟರ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಮಠ, ಎದ್ದೇಳು ಮಂಜುನಾಥ ನಂತರ ಗುರುಪ್ರಸಾದ್​ ನನ್ನ ಸಮ್ಮಿಲನ. ನಗಿಸಲು ನಾವು ರೆಡಿ ಶುಭಹಾರೈಸಿ'' ಅಂತ ಜಗ್ಗೇಶ್​ ಟ್ವೀಟ್ ಮಾಡಿದ್ದಾರೆ.

ಕಳೆದ ವರ್ಷವೇ ರಂಗನಾಯಕ ಸಿನಿಮಾ ಅನೌನ್ಸ್ ಆಗಿತ್ತು. ಅಷ್ಟೆಯಲ್ಲ ಅಕ್ಟೋಬರ್​ನಲ್ಲಿ ಒಂದು ಟೀಸರ್​ ಕೂಡ ಬಿಡುಗಡೆ ಮಾಡಿತ್ತು. ಈ ಟೀಸರ್​​​​​​​​​ ಸಿಕ್ಕಾಪಟ್ಟೆ ಸೌಂಡ್​ ಮಾಡಿತ್ತು. ಒಂದು ವೇಳೆ ಕೊರೊನಾ ಆರ್ಭಟ ಇಲ್ಲದೆ ಇದ್ದಿದ್ರೆ ಇಷ್ಟೊತ್ತಿಗಾಗಲೇ ಸಿನಿಮಾ ರಿಲೀಸ್​ ಕೂಡ ಆಗಿರ್ತಿತ್ತು. ಆದ್ರೆ, ಕೊರೊನಾ ಕೇಕೆ ರಂಗನಾಯಕನನ್ನ 2021ಕ್ಕೆ ತಂದು ನಿಲ್ಲಿಸಿದೆ. 2021ರ ಜನವರಿಯಲ್ಲಿ 'ರಂಗನಾಯಕ' ಸಿನಿಮಾದ ಕಂಪ್ಲೀಟ್​ ಶೂಟಿಂಗ್​ ಶುರುವಾಗಲಿದೆ. ಟೀಸರ್​ನಿಂದಲೇ ಈಗಾಗಲೇ ಸಿಕ್ಕಾಪಟ್ಟೆ ಸೌಂಡ್​ ಮಾಡಿರುವ ರಂಗನಾಯಕ ಮತ್ತೆ ಜಗ್ಗೇಶ್​-ಗುರುಪ್ರಸಾದ್​ ಕಾಂಬಿನೇಷನ್​ನಲ್ಲಿ ಅಭಿಮಾನಿಗಳ ಜೋಶ್​ ಹೆಚ್ಚಿಸುತ್ತಿದೆ.

ಇನ್ನು ವಿಖ್ಯಾತ್ ಪ್ರೊಡಕ್ಷನ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಈ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ. ಅಂದ್ಹಾಗೆ, ಅನೂಪ್ ಸೀಳಿನ್ ಮತ್ತು ಗುರು ಪ್ರಸಾದ್ ಕಾಂಬಿನೇಷನ್‌ನಲ್ಲಿ ಮೂರು ಸಿನಿಮಾಗಳು ಬಂದಿದ್ದು, ಈ ಮೂರು ಚಿತ್ರದ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ಅದ್ಭುತ ಎನಿಸಿಕೊಂಡಿದೆ. ಎದ್ದೇಳು ಮಂಜುನಾಥ, ಡೈರೆಕ್ಟರ್ ಸ್ಪೆಷಲ್ ಹಾಗೂ ಎರಡನೇ ಸಲ ಸಿನಿಮಾಗೆ ಅನೂಪ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

2006ರಲ್ಲಿ ತೆರೆ ಕಂಡ ಮಠ ಸಿನಿಮಾದ ಸಕ್ಸಸ್​ ನಂತರ ಮತ್ತೆ 2009ರಲ್ಲಿ ಜಗ್ಗೇಶ್​-ಗುರುಪ್ರಸಾದ್​ ಜೋಡಿ ಎದ್ದೇಳು ಮಂಜುನಾಥ ಸಿನಿಮಾಗೆ ಒಂದಾಗಿತ್ತು. ಇದಾದ ಬಳಿಕ ಬರೋಬ್ಬರಿ 11 ವರ್ಷಗಳ ಕಾಲ, ಈ ಜೋಡಿ ಯಾವುದೇ ಸಿನಿಮಾ ಮಾಡಿಲ್ಲ. 11 ವರ್ಷಗಳ ಬಳಿಕ ಈ ಜೋಡಿ ಮತ್ತೆ ಒಂದಾಗಿದೆ. ಹೀಗಾಗಿ ರಂಗನಾಯಕ ಸಹಜವಾಗಿಯೇ ನಿರೀಕ್ಷೆ ಹೆಚ್ಚಿಸಿದೆ.

Next Story

RELATED STORIES