Top

'ತಂದೆ-ಮಗ ಒಟ್ಟಿಗೆ ಇದ್ರೆ ತಪ್ಪಾ' - ಎಂ.ಪಿ ರೇಣುಕಾಚಾರ್ಯ ಪ್ರಶ್ನೆ

ಯತ್ನಾಳ್ ತಮಗೆ ಬೇಕಾದಾಗ ಸಿಎಂ ಅವರನ್ನು ವೈಭವೀಕರಿಸೋದು, ಬೇಡಾದಾಗ ಬೇಕಾ ಬಿಟ್ಟಿ ಮಾತಾಡೋದು ಬೇಡ

ತಂದೆ-ಮಗ ಒಟ್ಟಿಗೆ ಇದ್ರೆ ತಪ್ಪಾ -  ಎಂ.ಪಿ ರೇಣುಕಾಚಾರ್ಯ ಪ್ರಶ್ನೆ
X

ಬೆಂಗಳೂರು: ಹೇಳಿದ್ದಾರೆ ಕೋವಿಡ್ ಹಿನ್ನೆಲೆ ಆರ್ಥಿಕವಾಗಿ ಹೊಡೆತ ಬಿದ್ದಿದೆ. ಶಾಸಕರ ಕ್ಷೇತ್ರಗಳ ಎಲ್ಲಾ ಕೆಲಸ ಮಾಡಿಕೊಡಲು ಬದ್ಧ. ಸ್ವಲ್ಪ ಸಮಯ ಕೊಡಿ ಅಂತ ಸಿಎಂ ಮನವಿ ಮಾಡಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಅವರು ಹೇಳಿದರು.

ಹೇಳಿಕೆ ನಿನ್ನೆ ವಿಭಾಗಾವಾರು ಶಾಸಕರ ಸಭೆಯಲ್ಲಿ ಯತ್ನಾಳ್ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಟಿವಿ5 ಜೊತೆ ಮಾತನಾಡಿದ ಅವರು, ಯತ್ನಾಳ್ ತಮಗೆ ಬೇಕಾದಾಗ ಸಿಎಂ ಅವರನ್ನು ವೈಭವೀಕರಿಸೋದು, ಬೇಡಾದಾಗ ಬೇಕಾ ಬಿಟ್ಟಿ ಮಾತಾಡೋದು ಬೇಡ. ಯಡಿಯೂರಪ್ಪ ತಂದೆ ಸಮಾನ, ಪಕ್ಷ ತಾಯಿ ಸಮಾನ. ವಿನಾಕಾರಣ ಸಿಎಂ ಕುಟುಂಬದ ಬಗ್ಗೆ ಉಹಾಪೋಹ ಆರೋಪ ಬೇಡ ಎಂದರು.

ಇನ್ನು ಬಿ.ವೈ ವಿಜಯೇಂದ್ರ ರಾಜ್ಯ ಬಿಜೆಪಿ ಉಪಾಧ್ಯಕ್ಷರು. ಅವರು ತಂದೆ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿಲ್ಲ, ಸ್ವತಂತ್ರವಾಗಿ ಆಡಳಿತ ಮಾಡಲು ಬಿಎಸ್​ವೈ ಸಮರ್ಥರಿದ್ದಾರೆ. ತಂದೆ ಮಗ ಒಟ್ಟಿಗೆ ಇದ್ರೆ ತಪ್ಪಾ(?) ಪುತ್ರನಾಗಿ ಅವರು ತಂದೆ ಮನೆಗೆ ಬಂದು ಹೋದರೆ ತಪ್ಪಾ(?) ಎಂದು ಪ್ರಶ್ನೆ ಮಾಡಿದ್ದಾರೆ.

ಶಾಸಕರ ಕೈಗೆ ಯಡಿಯೂರಪ್ಪ ಸಿಗಲ್ಲ ಎಂಬ ಯತ್ನಾಳ ಆರೋಪ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, 24/ 7 ಮುಕ್ತವಾಗಿ ಯಡಿಯೂರಪ್ಪ ನವರ ಮನೆ ಬಾಗಿಲು ತೆರೆದಿರುತ್ತೆ. ಶಾಸಕರು ಯಾವಾಗ ಬಂದರೂ ಯಡಿಯೂರಪ್ಪ ಸಿಗ್ತಾರೆ. ಅವರಿಗೆ ಅನಾರೋಗ್ಯ ಇದ್ದಿದ್ದಿದ್ದರೆ ಉಪಚುನಾವಣೆಯಲ್ಲಿ 15 ಸ್ಥಾನ ಗೆಲ್ಲುತ್ತಿದ್ದರಾ(?) ಅವರ ವಿರುದ್ಧ ಪಕ್ಷದಲ್ಲಿ ಯಾವುದೇ ಷಡ್ಯಂತ್ರ ಇಲ್ಲ, ಪಕ್ಷ ಹಾಗೂ ಸಿಎಂ ಎರಡೂ ಸ್ಥಾನಕ್ಕೂ ಗೌರವಿಸುತ್ತೇವೆ. ನಾಯಕತ್ವ ಬದಲಾವಣೆ ಕೇವಲ ಉಹಾಪೋಹ ಅಷ್ಟೇ ಎಂದು ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಟಿವಿ5 ಕನ್ನಡ ಜೊತೆ ಮಾತನಾಡಿದ್ದಾರೆ.

Next Story

RELATED STORIES