Top

ರೈತ ನಿಜವಾದ 'ವೀರ' ಎಂದ ಚಾಲೆಂಜಿಂಗ್ ಸ್ಟಾರ್ ದರ್ಶನ್​

ಅನ್ನದಾತರಿಗೆ ಸ್ಯಾಂಡಲ್​ವುಡ್ ಸ್ಟಾರ್ಸ್ ನಮನ

ರೈತ ನಿಜವಾದ ವೀರ ಎಂದ ಚಾಲೆಂಜಿಂಗ್ ಸ್ಟಾರ್ ದರ್ಶನ್​
X

ಇಂದು ಜಗತ್ತಿಗೆ ಅನ್ನ ನೀಡೋ ಅನ್ನದಾತನನ್ನು ಸ್ಮರಿಸುವ ದಿನ.. ದೇಶದ ಬೆನ್ನೆಲುಬು ರೈತರ ದಿನಾಚರಣೆ..ಈ ವಿಶೇಷ ದಿನದಂದು ನಮ್ಮ ಸ್ಯಾಂಡಲ್​ವುಡ್​ನ ಸೆಲೆಬ್ರೆಟಿಗಳೂ ಅನ್ನದಾತನಿಗೆ ನಮನ ಸಲ್ಲಿಸಿದ್ದಾರೆ.

ರೈತ.. ಅನ್ನದಾತ.. ಕೃಷಿಕ.. ಏನಂತ ಕರೆದ್ರೂ ರೈತ ರೈತನೇ. ಅವನೇ ನಿಜವಾದ ಮಣ್ಣಿನ ಮಗ. ಅವನಿಲ್ಲದೇ ಜಗವೇ ಇಲ್ಲ. ಆತ ಉತ್ತಿ, ಬಿತ್ತಿ, ಬೆಳೆ ತೆಗೆದರೆ ಮಾತ್ರ ಜಗತ್ತು ಜೀವಂತವಾಗಿರೋಕೆ ಸಾಧ್ಯ. ಇಲ್ಲದೇ ಇದ್ರೆ ಯಾರೊಬ್ಬರೂ ಬದುಕೋಕ್ಕಾಗಲ್ಲ. ರೈತನನ್ನು ದೇಶದ ಬೆನ್ನೆಲುಬು ಅಂತ ಕರಿತಾರೆ. ಇಂದು ರೈತರ ದಿನಾಚರಣೆ. ಹೀಗಾಗಿ ಅನ್ನದಾತರಿಗೆ ದೇಶದೆಲ್ಲೆಡೆ ಶುಭಾಶಯಗಳನ್ನು ಹಾರೈಸುತ್ತಿದ್ದಾರೆ. ನಮ್ಮ ಸ್ಯಾಂಡಲ್​ವುಡ್​​ ಸ್ಟಾರ್​ಗಳು ಕೂಡ ರೈತರಿಗೆ ವಿಶ್ ಮಾಡಿದ್ದಾರೆ.

ಅನ್ನದಾತರಿಗೆ ಸ್ಯಾಂಡಲ್​ವುಡ್​ ಸ್ಟಾರ್ಸ್ ನಮನ ಸಲ್ಲಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್, ರೈತರು ನಿಜವಾದ ವೀರರಾಗಿದ್ದು, ಅವರ ಪ್ರಯತ್ನಕ್ಕೆ ಧನ್ಯವಾದಗಳು ಮತ್ತು ಅವರ ಕಠಿಣ ಪರಿಶ್ರಮಕ್ಕೆ ನಮಸ್ಕರಿಸೋಣ ಅಂತ ರೈತ ದಿನಾಚರಣೆಗೆ ಶುಭಕೋರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರೋ ದಚ್ಚು ಸಮರ್ಪಣೆ ಮತ್ತು ಶ್ರಮದಿಂದ ಬಂಜರು ಭೂಮಿಯನ್ನು ಆಹಾರ ಉತ್ಪಾದಿಸುವ ಭೂಮಿಯಾಗಿ ಪರಿವರ್ತಿಸಿ, ತಮ್ಮ ಹೃದಯ ಮತ್ತು ಆತ್ಮವನ್ನು ಮಣ್ಣಿನಲ್ಲಿ ಇರಿಸಿ ಅದನ್ನು ಜೀವಿಸಲು ಮತ್ತು ನಮಗೆ ಆಹಾರವನ್ನು ಕೊಡುತ್ತಾರೆ. ರೈತರ ಪ್ರಯತ್ನಕ್ಕೆ ಧನ್ಯವಾದ ಅಂತ ಹೇಳಿದ್ದಾರೆ.

ಚಾಲೆಂಜಿಂಗ್ ಸ್ಟಾರ್​ಗೆ ಹಿಂದಿನಿಂದಲೂ ಕೃಷಿ ಮೇಲೆ ತುಂಬಾ ಆಸಕ್ತಿ ಇದೆ. ಅವರು ಆಗಾಗ ತಮ್ಮ ಫಾರ್ಮ್ ಹೌಸ್​ನಲ್ಲಿ ಕೃಷಿ ಕೆಲಸ ಮಾಡುವ ದೃಶ್ಯಗಳು ವೈರಲ್ ಆಗಿವೆ. ಅದರಲ್ಲೂ ಲಾಕ್​ಡೌನ್ ಸಂದರ್ಭದಲ್ಲಿ ದರ್ಶನ್​ ಕೃಷಿಯತ್ತ ಹೆಚ್ಚು ಗಮನ ಹರಿಸಿದರು. ಇದೀಗ ರೈತರ ದಿನಾಚರಣೆ ಭಾವುಕವಾಗಿಯೇ ಶುಭಕೋರಿದ್ದಾರೆ.

ಒಂದು ಕಡೆ ಇಂದು ರೈತರ ದಿನಾಚರಣೆ ಮತ್ತೊಂದು ಅನ್ನದಾತರು ಹೋರಾಟ ಮಾಡುತ್ತಿದ್ದಾರೆ. ದೆಹಲಿಯ ಮೈಕೊರೆಯುವ ಚಳಿಯಲ್ಲಿ ಕೃಷಿ ಮಸೂದೆ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಹೋರಾಟಕ್ಕೆ ಬೆಂಬಲ ಸೂಚಿಸಿ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​​​​​​​​​ ರೈತರ ದಿನಾಚರಣೆ ಶುಭಕೋರಿದ್ದಾರೆ. ರೈತ ದೇಶದ ಬೆನ್ನೆಲುಬು , ರೈತ ಇದ್ರೇನೆ ದೇಶ. ಅವರ ಕಷ್ಟಕ್ಕೆ ನಾವು ಯಾವಾಗಲೂ ಜೊತೆ ಇರುತ್ತೇವೆ. ಅವರ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಅಂತ ಟ್ವೀಟ್ ಮಾಡಿದ್ದಾರೆ.

ಇನ್ನು ಸಂಸದೆ ಅಂಬರೀಶ್ ಕೂಡ ರೈತರ ದಿನಾಚರಣೆಗೆ ವಿಶ್​ ಮಾಡಿದ್ದು. ಹಗಲಿರುಳು ತನ್ನ ಬೆವರು ಸುರಿಸಿ, ನಮ್ಮೆಲ್ಲರ ಹಸಿವು ನೀಗಿಸುವ ದೈವ, ನಿನಗೆ ನನ್ನ ಪ್ರಣಾಮಗಳು ಅಂತ ಹೇಳಿದ್ದಾರೆ.

ನವರಸ ನಾಯಕ ಜಗ್ಗೇಶ್​ ಕೂಡ ರೈತರ ದಿನಾಚರಣೆಗೆ ಶುಭಕೋರಿದ್ದಾರೆ. ತಾತಚಿಕ್ಕಪ್ಪಂದಿರು ಹೂಡುತ್ತಿದ್ದ ನೇಗಿಲಮೇಲೆ ಬೆಳೆದ ರೈತರ ಕುಡಿ ನಾನು, ಅಂತ ಟ್ವೀಟ್​ ಮಾಡಿರುವ ಜಗ್ಗೇಶ್​ ಮಣ್ಣಲ್ಲಿ ಇರುವ ಸುಖ ಎಲ್ಲೂ ಸಿಗದು ಎಂದಿದ್ದಾರೆ.

ಇನ್ನು ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಂಡಿರೋ ನಟ ಆ ದಿನಗಳು ಚೇತನ್​ ಕೂಡ ರೈತರ ದಿನಾಚರಣೆಗೆ ಶುಭಹಾರೈಸಿದ್ದಾರೆ. ನಿರ್ದೇಶಕರ ಸಂತೋಷ್​ ಆನಂದ್​ರಾಮ್ ಕೂಡ ರೈತ ಇಲ್ಲದೆ ಯಾವ ದಿನವೂ ಇಲ್ಲ, ಜನವು ಇಲ್ಲ ಅಂತ ಟ್ವೀಟ್ ಮಾಡಿದ್ದಾರೆ.

ಜಗಕೆ ಅನ್ನ ನೀಡುವ ಅನ್ನದಾತನಿಗೆ ಸ್ಯಾಂಡಲ್​ವುಡ್ ಸ್ಟಾರ್​ ಸಲ್ಲಿಸಿದ್ದಾರೆ. ರೈತರ ಪರಿಶ್ರಮವನ್ನು ನೆನಪಿಸಿಕೊಂಡಿದ್ದಾರೆ.

Next Story

RELATED STORIES