Top

ಕಲಿಯುಗದ ಕರ್ಣ ರೆಬೆಲ್​ ಸ್ಟಾರ್​ ಅಂಬರೀಶ್​ಗೆ ಗುಡಿ ಕಟ್ಟಿಸಿದ ಅಭಿಮಾನಿಗಳು

ಉದ್ಘಾಟನೆಗೆ ಸಿದ್ಧವಾಯ್ತು ಅಂಬಿ ದೇವಾಲಯ

ಕಲಿಯುಗದ ಕರ್ಣ ರೆಬೆಲ್​ ಸ್ಟಾರ್​ ಅಂಬರೀಶ್​ಗೆ ಗುಡಿ ಕಟ್ಟಿಸಿದ ಅಭಿಮಾನಿಗಳು
X

ಮಂಡ್ಯ: ಸ್ಯಾಂಡಲ್​ವುಡ್​ ರೆಬೆಲ್​ ಸ್ಟಾರ್ ಅಂಬಿ ನಮ್ಮನ್ನಗಲಿ 2 ವರ್ಷಗಳಾದ್ರೂ ಅವರ ನೆನಪು ಮಾತ್ರ ಅಜರಾಮರ ಅದಕ್ಕೆ ಸಾಕ್ಷಿಯೆಂಬಂತೆ ಮಂಡ್ಯ ಜಿಲ್ಲೆ, ಅಭಿಮಾನಿಗಳೆಲ್ಲಾ ಸೇರಿ ರೆಬೆಲ್​ ಸ್ಟಾರ್​ಗೆ ದೇವಸ್ಥಾನವನ್ನ ಕಟ್ಟಿಸಿದ್ದಾರೆ.


ಅಂಬರೀಶ್, ರೆಬೆಲ್ ಸ್ಟಾರ್, ಕಲಿಯುಗದ ಕರ್ಣ, ಮಂಡ್ಯದ ಗಂಡು. ಅಂಬರೀಶ್ ಹೆಸರಿನಲ್ಲೇ ಖದರ್​ ಇದೆ. ಅದೇನೋ ಸೆಳೆತ ಇದೆ. ಅಂಬರೀಶ್ ಅಗಲಿ 2 ವರ್ಷಗಳು ಕಳೆದ್ರೂ ಅಭಿಮಾನಿಗಳ ಹೃದಯದಲ್ಲಿ ಇಂದಿಗೂ ಅಂಬಿ ಅಮರರಾಗಿದ್ದಾರೆ. ಬೇರೆ ಸ್ಟಾರ್​ಗಳಿಗೆ ಒಂದು ರೀತಿಯ ಅಭಿಮಾನಿ ವರ್ಗ ಇದ್ರೆ. ಅಂಬರೀಶ್​​ದು ಇನ್ನೊಂದು ಅಭಿಮಾನಿ ವರ್ಗ. ಇದೀಗ ಅಂಬಿ ಅಭಿಮಾನಿಗಳು, ತಮ್ಮ ನೆಚ್ಚಿನ ನಟನನ್ನು ದೇವರ ರೂಪದಲ್ಲಿ ಕಾಣಲು ಶುರು ಮಾಡಿದ್ದಾರೆ. ಅಂಬಿ ನೆನಪಿಗಾಗಿ ದೇವಾಲಯವನ್ನೇ ಕಟ್ಟಿಸಿದ್ದಾರೆ.

ಅಂಬರೀಶ್ ಅಭಿಮಾನಿಗಳು ತಮ್ಮ ಆರಾಧ್ಯ ದೈವ ಅಂಬಿಗಾಗಿ ದೇವಸ್ಥಾನವನ್ನು ಕಟ್ಟಿಸಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೊಟ್ಟೆ ಗೌಡನ ದೊಡ್ಡಿಯಲ್ಲಿ ಅಂಬಿ ಅಭಿಮಾನಿಗಳು ನೆಚ್ಚಿನ ನಟನಿಗೆ ಮಂದಿರ ನಿರ್ಮಿಸಿದ್ದಾರೆ. ಈ ಮಂದಿರದಲ್ಲಿ ಅಂಬರೀಶ್​ ಕಂಚಿನ ಪ್ರತಿಮೆಯನ್ನು ಕೂಡ ಪ್ರತಿಷ್ಠಾಪಿಸಲಾಗಿದೆ. ಸುಮಾರು 8 ಲಕ್ಷ ರೂಪಾಯಿ ಖರ್ಚು ಮಾಡಿ ಈ ಪ್ರತಿಮೆಯನ್ನು ನಿರ್ಮಿಸಲಾಗಿದೆ.

ನವೆಂಬರ್ 24 .2018. ಕಲ್ಲು ಬಂಡೆಯಂತಿದ್ದ ಅಂಬರೀಶ್​ ಇನ್ನಿಲ್ಲ ಅನ್ನೋ ಸುದ್ದಿ ಕರುನಾಡಿಗೆ ಬರಸಿಡಿಲಿನಂತೆ ಬಂದಪ್ಪಳಿಸಿತ್ತು. ಅಂಬರೀಶ್​ ಅಗಲಿ ಎರಡು ವರ್ಷಗಳು ಕಳೆದು ಹೋಗಿವೆ. ಹೀಗಾಗಿ ಅವರ ನೆನಪಿನಲ್ಲಿ, ಗುಡಿಕಟ್ಟಿ ಪೂಜಿಸಲು ಅಭಿಮಾನಿಗಳು ಮುಂದಾಗಿದ್ದಾರೆ. ಅಂಬರೀಶ್​ ಅಗಲಿದ ದಿನವೇ ಈ ಗುಡಿ ಉದ್ಘಾಟನೆಯಾಗಲಿದೆ. ನವೆಂಬರ್ 24ರಂದು, ನಟಿ, ಸಂಸದೆ ಸುಮಲತಾ ಅಂಬರೀಶ್​ ಈ ಪ್ರತಿಮೆಯನ್ನ ಉದ್ಘಾಟನೆ ಮಾಡಲಿದ್ದಾರೆ.


ಅಭಿಮಾನಿಗಳು ಈ ಗುಡಿಗೆ ಅಂಬಿ ಅಮರ ಅಂತ ಹೆಸರಿಟ್ಟಿದ್ದಾರೆ. ವಿಶೇಷ ಅಂದ್ರೆ , ಅಂಬಿ ಚಿತಾಭಸ್ಮವನ್ನು ತಂದು ಅಂಬಿ ಪುತ್ಥಳಿ ಸ್ಥಳದಲ್ಲಿ ಹಾಕಿದ್ದಾರೆ. ನೆಚ್ಚಿನ ನಟನಿಗೆ ದೇವರ ರೂಪ ಕೊಟ್ಟು ಅಂಬರೀಶ್ ಅಮರರಾಗುವಂತೆ ಮಾಡಿದ್ದಾರೆ.

Next Story

RELATED STORIES