Top

ಮತ್ತೆ ಸಿಗರೇಟ್​ ಹಿಡಿದು ಪೋಸ್​ ಕೊಟ್ಟ ಡಿಂಪಲ್ ಬೆಡಗಿ

ಸೋಶಿಯಲ್​ ಮೀಡಿಯಾದಲ್ಲಿ​ ರಚ್ಚು ಫೋಟೋಸ್​ ವೈರಲ್

ಮತ್ತೆ ಸಿಗರೇಟ್​ ಹಿಡಿದು ಪೋಸ್​ ಕೊಟ್ಟ ಡಿಂಪಲ್ ಬೆಡಗಿ
X

ಡಿಂಪಲ್​ ಕ್ವೀನ್​ ರಚಿತಾರಾಮ್​ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ. ಸ್ಯಾಂಡಲ್​ವುಡ್​ನ ಸದ್ಯದ ಬ್ಯುಸಿಯೆಸ್ಟ್ ಹಿರೋಯಿನ್. ಇದೀಗ ರಚ್ಚು ಮಾಸ್ ಲುಕ್​ನಲ್ಲಿ ಕೈಯ್ಯಲ್ಲಿ ಸಿಗರೇಟ್, ಗನ್​ ಹಿಡಿದು ಪೋಸ್​ ಕೊಟ್ಟಿರೋ ಫೋಟೋಗಳು, ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

ಸ್ಯಾಂಡಲ್​ವುಡ್​ನಲ್ಲಿ ಸಿನಿಮಾದಿಂದ ಸಿನಿಮಾಗೇ ಡಿಫ್ರೆಂಟ್ ಪಾತ್ರಗಳನ್ನ ಮಾಡ್ತಾ, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ರಚಿತಾರಾಮ್. ಗ್ಲಾಮರ್, ಬೋಲ್ಡ್, ಪರ್ಫಾಮೆನ್ಸ್​ ಓರಿಯೆಂಟೆಡ್ ಹೀಗೆ ಎಲ್ಲಾ ರೀತಿಯ ಪಾತ್ರಗಳನ್ನ ಮಾಡಿರೋ ರಚ್ಚು ಇದೀಗ ಮಾಸ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಹಿಂದೆ ಐ ಲವ್ ಯೂ ಸಿನಿಮಾದ ಹಾಡೋಂದರಲ್ಲಿ ಹಾಟ್​ ಲುಕ್​ನಲ್ಲಿ ಮಿಂಚಿದ್ದ ರಚಿತಾ ಇದೇ ವಿಚಾರವಾಗಿ ಸಖತ್​ ಸುದ್ದಿ ಮಾಡಿದರು. ಆ ನಂತರ ಏಕ್​ಲವ್​ ಯಾ ಚಿತ್ರದಲ್ಲಿ ಸಿಗರೇಟ್ ಸೇದುವ ದೃಶ್ಯವೊಂದು ಕೂಡ ವೈರಲ್​ ಆಗಿತ್ತು. ಇದೀಗ ಮತ್ತೆ ಕೈಯ್ಯಲ್ಲಿ ಸಿಗರೇಟ್ ಮತ್ತು ಗನ್​ ಹಿಡಿದು ಸುದ್ದಿಯಾಗಿದ್ದಾರೆ.

ರಚಿತಾರಾಮ್​ ಫಸ್ಟ್ ಟೈಮ್​ ಬೋಲ್ಡ್​ ಜೊತೆಗೆ ಮಾಸ್ ಲುಕ್​ನಲ್ಲಿ ಮಿಂಚಿದ್ದು, ಈ ಪೋಟೋಗಳನ್ನ ಸ್ವತಃ ರಚ್ಚು ತಮ್ಮದೇ ಸೋಶಿಯಲ್​ ಮೀಡಿಯಾ ಅಕೌಂಟ್​ನಲ್ಲಿ ಶೇರ್​ ಮಾಡಿದ್ದಾರೆ. ಅಷ್ಟೇಅಲ್ಲಾ ನಾನು ಆಕ್ರಮಣಕಾರಿ ಅನ್ನಿಸಿದ್ರೆ, ನಾನು ನಿಮಗೆ ನನ್ನನ್ನು ಹುಡುಕಬೇಡಿ ಎಂದು ಸಲಹೆ ನೀಡುತ್ತೇನೆ' ಅಂತ ಕ್ಯಾಪ್ಶನ್ ಸಹ ಕೊಟ್ಟಿದ್ದಾರೆ.

ಇದೀಗ ಈ ಲುಕ್​ ಯಾವ ಸಿನಿಮಾದ್ದು ಅನ್ನೋ ಚರ್ಚೆ ಶುರುವಾಗಿದೆ..ಅದ್ರಲ್ಲೂ ಇದು ಮಯೂರ ರಾಘವೇಂದ್ರ ಮತ್ತು ರಚಿತಾರಾಮ್​ ಕಾಂಬಿನೇಷನ್​ನಲ್ಲಿ ಬರ್ತಿರೋ ಪಂಕಜ ಕಸ್ತೂರಿ ಚಿತ್ರದ ಲುಕ್​ ಅನ್ನೋ ಮಾತುಗಳು ದಟ್ಟವಾಗಿವೆ. ಆದರೆ, ಸ್ವತಃ ನಿರ್ದೇಶಕ ಮಯೂರ್​ ರಾಘವೇಂದ್ರ ಹೇಳೋ ಪ್ರಕಾರ ಇದು ಯಾವ ಸಿನಿಮಾದ ಲುಕ್​ ಕೂಡ ಅಲ್ಲಾ. ರಚಿತಾರಾಮ್​ ಪರ್ಸನಲ್​ ಪೋಟೋಶೂಟ್ ಇದಾಗಿದೆ. ಸ್ವತಃ ಈ ಫೋಟೋಶೂಟ್​ನ್ನ ನಾನೇ ಪ್ಲಾನ್​ ಮಾಡಿದ್ದೇನೆ..ಈ ಲುಕ್​ಗೂ ಯಾವ ಸಿನಿಮಾಗೂ ಸಂಬಂಧ ಇಲ್ಲ ಅಂತ ಹೇಳಿದ್ದಾರೆ.

ಸದ್ಯ ಈ ಲುಕ್​ ನೋಡಿ ಇಂತದ್ದೇ ಮಾಸ್ ಲುಕ್​ನಲ್ಲಿ ,ಔಟ್​ ಅಂಡ್ ಔಟ್ ಫಿಮೇಲ್​ ಓರಿಯೆಂಟೆಡ್​ ಚಿತ್ರದಲ್ಲಿ ರಚ್ಚುಅಭೀನಯಿಸಿದ್ರೆ ಚೆನ್ನಾಗಿರುತ್ತೆ ಅನ್ನೋ ಅಭಿಪ್ರಾಯ ವ್ಯಕ್ತಪಡಿಸ್ತಿದ್ದಾರೆ ರಚ್ಚು ಫ್ಯಾನ್ಸ್​..

Next Story

RELATED STORIES