Top

ಅಭಯಾರಣ್ಯದಲ್ಲಿ ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಫೋಟೋಗ್ರಫಿ

ನಾಗರಹೊಳೆ ಕಾಡಿನಲ್ಲಿ ಸಾರಥಿ ಸಫಾರಿ

ಅಭಯಾರಣ್ಯದಲ್ಲಿ ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಫೋಟೋಗ್ರಫಿ
X

ಚಾಲೆಂಜಿಂಗ್​ ಸ್ಟಾರ್​​ ಸಿನಿಮಾಗಳ ಜೊತೆಗೆ ಬೈಕ್​ ರೈಡಿಂಗ್, ಕುದುರೆ ಸವಾರಿ, ಫಾರ್ಮಿಂಗ್,ವೈಲ್ಡ್​ ಲೈಫ್​ ಫೋಟೋಗ್ರಫೀ ಇಂತಹ ಒಂದಷ್ಟು ಇಂಟ್ರೆಸ್ಟಿಂಗ್​ ವಿಚಾರಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ರೀಸೆಂಟಾಗಿ ಬೈಕ್​ ಟ್ರಿಪ್​ ಹೊಗಿದ್ದ ದಚ್ಚು, ಇದೀಗ ಕ್ಯಾಮರೆ ಹಿಡಿದು, ನಾಗರಹೊಳೆ ಕಾಡಿನಲ್ಲಿ ಸುತ್ತಡ್ತಾ ಇದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್​ಗೆ ಕಾಡು, ಪ್ರಕೃತಿ ಎಂದರೆ ಪಂಚಪ್ರಾಣ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಸಿನಿಮಾ ಬಿಟ್ಟರೆ ಕಾಡಿನ ಪ್ರೀತಿಗೆ ಹೆಚ್ಚು ಬೆಲೆ ಕೊಡುವ ದರ್ಶನ್, ತಮಗೆ ಬಿಡುವಾದಗಲೆಲ್ಲ ಕಾಡಿಗೆ ಹೋಗಿ ಕಾಲ ಕಳೆಯುತ್ತಾರೆ. ಕಾಡಿನ ಪ್ರಕೃತಿ ಸೌಂದರ್ಯ, ಪಕ್ಷಿಗಳ ಚಿಲಿಪಿಲಿ, ಪ್ರಾಣಿಗಳ ಕೂಗಾಟ ಕೇಳಿ ಒಂದಿಷ್ಟು ಹೊತ್ತು ನಿಸರ್ಗದ ಮಡಿಲಲ್ಲಿ ಕಳೆದು ಬರುತ್ತಾರೆ. ಮತ್ತೆ ಎಂದಿನ ತಮ್ಮ ಕೆಲಸದಲ್ಲಿ ತೊಡಗುತ್ತಾರೆ.


ದರ್ಶನ್​ ಆಗಾಗ ಕಾಡಿಗೆ ಹೋಗಿ ಪ್ರಕೃತಿ ಸುತ್ತಾಡಿ ಬಂದಿರೋದನ್ನ ನೀವೆಲ್ಲಾ ನೋಡಿದ್ದಿರಿ. ಕೈಯಲ್ಲೊಂದು ಕ್ಯಾಮರಾ ಹಿಡಿದು ದರ್ಶನ್​​ ಹೊರಟರೆಂದರೆ, ಅದೆಷ್ಟೋ ಹೊತ್ತು ಪ್ರಾಣಿ ಪಕ್ಷಿಗಳ ಫೋಟೋಗಳನ್ನು ಸೆರೆಹಿಡಿಯುತ್ತಾರೆ. ಅದೆಷ್ಟೋ ಪ್ರಾಣಿಪಕ್ಷಿಗಳಿಗೆ ಆಹಾರ-ನೀರು ಕೊಡುತ್ತಾರೆ. ಸಫಾರಿ, ಫೋಟೋಗ್ರಫಿ ಮಾಡುತ್ತ ದರ್ಶನ್ ಸಾಮಾನ್ಯರಂತೆ ಇದ್ದುಬಿಡುತ್ತಾರೆ. ಇದೀಗ ಮತ್ತೊಮ್ಮೆ ದರ್ಶನ್​ ಕ್ಯಾಮೆರಾ ಹಿಡಿದು ಕಾಡಿಗೆ ಹೊರಟಿದ್ದಾರೆ.

ಸಿನಿಮಾ ಶೂಟಿಂಗ್‌ ನಡುವೆಯೇ ಕೊಂಚ ಬಿಡುವು ಮಾಡಿಕೊಂಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಗರಹೊಳೆ ಅಭಯಾರಣ್ಯಕ್ಕೆ ತೆರಳಿದ್ದಾರೆ. ಕಳೆದ ತಿಂಗಳ ಹಿಂದೆಯಷ್ಟೇ ಕೀನ್ಯಾ ಕಾಡಿಗೆ ತೆರಳಿದ್ದ ದರ್ಶನ್, ಈ ಬಾರಿ ಕ್ಯಾಮೆರಾ ಹೆಗಲಿಗೇರಿಸಿಕೊಂಡು ನಾಗರಹೊಳೆ ಅಭಯಾರಣ್ಯದಲ್ಲಿ ಬೀಡುಬಿಟ್ಟಿದ್ದಾರೆ. ನಾಗರಹೊಳೆ ಕಾಡಿನಲ್ಲಿ ಸಾರಥಿ ಸಫಾರಿ ಮಾಡುತ್ತಿದ್ದಾರೆ.

ದರ್ಶನ್​ಗೆ ಪ್ರಾಣಿಗಳೆಂದರೆ ಸಿಕ್ಕಾಪಟ್ಟೆ ಇಷ್ಟ.ಅದ್ರಲ್ಲೂ ನಾಗರ ಹೊಳೆ ಕಾಡು ಅಂದ್ರೆ ಡಚ್ಚುಗೆ ಅಚ್ಚುಮೆಚ್ಚು. ಸಮಯ ಸಿಕ್ಕಾಗಲೆಲ್ಲಾ ಅರಣ್ಯಕ್ಕೆ ಹೋಗಿ ಪ್ರಾಣಿಗಳೊಂದಿಗೆ ಸಮಯ ಕಳೆಯುತ್ತಾರೆ, ಫೋಟೋಗ್ರಫಿ ಮಾಡುತ್ತಾರೆ. ಅಷ್ಟೇಅಲ್ಲ ಅರಣ್ಯ ಸಿಬ್ಬಂದಿ ಕಷ್ಟಗಳಿಗೂ ಸ್ಪಂದಿಸುತ್ತಾರೆ. ಸದ್ಯಕ್ಕೆ ಸಫಾರಿ, ಫೋಟೋಗ್ರಫಿಯಲ್ಲಿ ನಟ ದರ್ಶನ್​ ಫುಲ್ ಬ್ಯುಸಿಯಾಗಿದ್ದಾರೆ. ಈ ಹಿಂದೆ 2018 ರಲ್ಲೂ ಕೂಡ ನಾಗರಹೊಳೆಗೆ ಭೇಟಿ ನೀಡಿದರು ದಚ್ಚು.


ಸದ್ಯ ಈ ಬಾರಿ ದರ್ಶನ್ ನಾಗರಹೊಳೆ ಕಾಡಿನಲ್ಲಿ ಫೋಟೋಗ್ರಾಫಿ ಮಾಡುತ್ತಿರೋ ಕೆಲವೊಂದು ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದರ್ಶನ್​ ನಟನೆಯಲ್ಲಿ ಎಷ್ಟು ಪರ್ಫೆಕ್ಟ್ ಆಗಿದ್ದಾರೋ ಫೋಟೋಗ್ರಾಫಿಯಲ್ಲಿ ಕೂಡ ಅಷ್ಟೇ ಪರ್ಫೆಕ್ಟ್ ಆಗಿದ್ದಾರೆ. ಅವರು ಸೆರೆ ಹಿಡಿದ ಫೋಟೋಗಳು ಒಂದಕ್ಕಿಂತ ಒಂದು ಅದ್ಭುತವಾಗಿರುತ್ತೆ. ಈ ಹಿಂದೆ ದರ್ಶನ್ ಫೋಟೋಗ್ರಫಿಯ ಎಕ್ಸಿಬಿಷನ್ ಕೂಡ ನಡೆದಿತ್ತು.

ಇನ್ನು ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಶಿವರಾತ್ರಿ ಹಬ್ಬಕ್ಕೆ ರಿಲೀಸ್​​ ಆಗಲಿದೆ. ಥಿಯೇಟರ್​​ನಲ್ಲಿ ದರ್ಶನ್ ಆರ್ಭಟ ನೋಡಲು ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ. ವರ್ಷದ ಬಳಿಕ ಯಜಮಾನನ್ನ ಸ್ಕ್ರೀನ್​ ಮೇಲೆ ಕಣ್ತುಂಬಿಕೊಳ್ಳಲು ಫ್ಯಾನ್ಸ್ ತುದಿಗಾಲ ಮೇಲೆ ನಿಂತಿದ್ದಾರೆ. ರಾರ್ಬಟ್​ ರಿಲೀಸ್​ಗೆ ಕೌಂಟ್​ಡೌನ್ ಶುರವಾಗಿದೆ. ರಾರ್ಬಟ್​​ ಸಿನಿಮಾ ಎಲ್ಲಾ ಕೆಲಸ ಮುಗಿಸಿರೋ ದರ್ಶನ್ ಈಗ ಕಾಡಿನಲ್ಲಿ ಕಳೆಯುತ್ತಿದ್ದಾರೆ.

ಒಟ್ನಲ್ಲಿ ಚಾಲೆಂಜಿಂಗ್ ಸ್ಟಾರ್ ಈಗೀಗ ಹೆಚ್ಚಿನ ಸಮಯವನ್ನು ಕಾಡು, ಬೆಟ್ಟಗಳಲ್ಲೇ ಕಳೆಯುತ್ತಿದ್ದಾರೆ. ಅರಣ್ಯ ಇಲಾಖೆಯ ರಾಯಭಾರಿಯಾಗಿ ತಮ್ಮ ಕರ್ತವ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತಿದ್ದಾರೆ. ಹಾಗಂತ ಶೂಟಿಂಗ್​​ಗೂ ತಪ್ಪಿಸಿಕೊಳ್ಳುತ್ತಿಲ್ಲ. ದರ್ಶನ್ ಸಾಮಾಜಿಕ ಕಾರ್ಯಕ್ಕೆ ಸಾರ್ವಜನಿಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Next Story

RELATED STORIES